ಜನ ಬಿಸಾಕುತ್ತಾರೆ ಕಲ್ಲು,ನಾವದನ್ನು ಮಾಡಿಕೊಳ್ಳುತ್ತೇವೆ ಮೈಲಿಗಲ್ಲು!

ಜನ ಬಿಸಾಕುತ್ತಾರೆ ಕಲ್ಲು,ನಾವದನ್ನು ಮಾಡಿಕೊಳ್ಳುತ್ತೇವೆ ಮೈಲಿಗಲ್ಲು!

ಬರಹ

ndtvಬ್ರಿಯಾನ್ ಲಾರಾ ಇದುವರೆಗೆ ಟೆಸ್ಟ್ ಕ್ರಿಕೆಟಿನಲ್ಲಿ ಅತ್ಯಧಿಕ ರನ್ ಬಾರಿಸಿದ ಕ್ರಿಕೆಟಿಗ ಎಂಬ ದಾಖಲೆಯನ್ನು ಹೊಂದಿದ್ದರು. ಅದೀಗ ಚರಿತ್ರೆಯ ಪುಟಗಳನ್ನು ಸೇರಿದೆ. ಸಚಿನ್ ತೆಂಡೂಲ್ಕರ್ ತಮ್ಮ ಹತ್ತೊಂಭತ್ತು ವರ್ಷಗಳ ಕ್ರಿಕೆಟ್ ಜೀವನದಲ್ಲಿ ಇದಕ್ಕಿಂತ ಹೆಚ್ಚು ಟೆಸ್ಟ್ ರನ್‌ಗಳನ್ನು ಬಾರಿಸಿ, ಲಾರಾನನ್ನು ಹಿಂದಕ್ಕಟ್ಟಿದರು.

ಆಡುವಾಗ ದಾಖಲೆಯ ಬಗ್ಗೆ ಚಿಂತಿಸದೆ, ದೇಶಕ್ಕಾಗಿ ಆಡುತ್ತೇನೆ ಎಂದು ಸಚಿನ್ ಪದೇ ಪದೇ ಹೇಳಿದರೂ ಜನ ಅದನ್ನು ನಂಬಿದ ಹಾಗಿಲ್ಲ. ಸಚಿನ್ ಆಡುವುದು ದಾಖಲೆಗಾಗಿ,ಅವರ್ ಆಟ ದೇಶವನ್ನು ಗೆಲ್ಲಿಸಿದ್ದು ಕಡಿಮೆ ಎಂಬ ಟೀಕೆ ಅವರ ಬೆನ್ನು ಬಿಟ್ಟಿಲ್ಲ.

ಅದನ್ನೇ ಸಚಿನ್ ನೆನಪಿಸಿಕೊಂಡು ಮೇಲಿನ ಮಾತನ್ನು ಹೇಳಿದ್ದರೆ ಆಶ್ಚರ್ಯವೇನು?

ಆಡಿದ ಟೆಸ್ಟ್ ಪಂದ್ಯಗಳು: 151+1

ಶತಕಗಳು: 39