ಜಾಗತೀಕರಣದ ಮಳೆ

ಜಾಗತೀಕರಣದ ಮಳೆ

ಬರಹ

ಸ್ಪರ್ಧಾಪೂರ್ಣ ಜಗ
ಆಧುನಿಕತೆಯ ವೇಗ
ಇಲ್ಲಿ ಭಾವಕ್ಕಿಲ್ಲ ಜಾಗ
ಮಾಡಿ ಲಾಭಕ್ಕೆಲ್ಲ ತ್ಯಾಗ

ಇಲ್ಲಿ ದುಡ್ಡಿದ್ದವನೆ ದೊಡ್ಡಪ್ಪ
ಅಧಿಕಾರವಿದ್ದವನೇ ನಮ್ಮಪ್ಪ
ಇದು ಹುಚ್ಚು ಕುದುರೆ ಓಟ
ಇದು ಯಾವ ಪರಿಯ ಆಟ

ಶರವೇಗದ ಸರದಾರರು
ಅಪ್ರತಿಮ, ಅಸಾಧ್ಯ ಶೂರರು
ಸಕಲವ ಬಲ್ಲ ಪ್ರಗತಿಪರರು
ದೇಶವನಾಳುವ ಅರಸರು

ಜಾಗತೀಕರಣದ ಮಳೆ
ಇಲ್ಲಿ ಸಾಮರ್ಥ್ಯಕ್ಕೆ ಬೆಲೆ
ಇದ್ದವರೆಲ್ಲಾ ಗೆದ್ದವರು
ಇರದವರೆಲ್ಲ ಸಾಯುವರು