ಜಾತಿಗಳೆಂಬ ಹೆಗ್ಗಣಗಳು
ಕವನ
ಈ ಕಾಲದಲ್ಲೂ
ಜಾತಿಗಳೆಂಬ ಹೆಗ್ಗಣಗಳು
ಇರುವುದು ವಿಶೇಷ
ಆ ಜಾತಿ ಈ ಜಾತಿ
ಎನ್ನುತ್ತಲೇ ನಾವು
ಅಜಾದಿಗಳು
ಜಾತ್ಯಾತೀತವೆನ್ನುವರ
ಕಂಡಾಗ, ನಗುವುದೋ
ಅಳುವುದೋ !
ಜನಸಾಮಾನ್ಯರೆ
ನೀವೇ ಹೇಳಿ...?
ಜಾತಿಯಿಂದಲೇ
ರಾಜಕೀಯ !
ಮಾಡುವವರಿಗೆ;
ಅನ್ನುವವರಿಗೆ,
ಪ್ರಜಾಪ್ರಭುತ್ವದ
ಕಿರೀಟ ಬೇಕೇನು ?
ಇಂದು
ರಾಜಕೀಯದಾಟದಲ್ಲಿ
ಓಟು ಹಾಕಿದವ
ಕೋಡಂಗಿ ,
ಹಾಕಿಸಿಕೊಂಡು ಮೆರೆದವನು
ವೀರಭದ್ರ !
ಅನ್ನುವಂತಾಗಿದೆ !!
-ಹಾ ಮ ಸತೀಶ ಬೆಂಗಳೂರು
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್