*ಜಾನಕಿ ರೂಪ* (ಕುಸುಮದಲಿ)

*ಜಾನಕಿ ರೂಪ* (ಕುಸುಮದಲಿ)

ಕವನ

ಶೀಲದೊಳು ಜಾನಕಿಯು

ಗೀಳನ್ನು ಹಿಡಿಸಿದಳು

ಬಾಳಿನಲಿ ಬಿಟ್ಟಿರದ ಹಂಬಲವನು||

ನೂಲಿನೊಳು ನೇಯ್ದಿರುವ

ಶಾಲಿನೊಳು ಮೆರೆದಿರುವ

ಸೋಲಿನಲಿ ಗೆಲುವನ್ನು ತೋರುವವಳು||

 

ಮೇನಕೆಯು ಚೆಲುವಿನೊಳು

ಮಾನಿನಿಯು ಲೋಕದೊಳು

ಜೇನಿವುದು ಕೆಂದುಟಿಯನಂಚಿನೊಳಗೆ||

ಮೌನದಲಿ ಕುಳಿತಿರುವ

ದೋಣಿಯಲಿ ಪಯಣಿಗಳು

ನಾನೆಂದು ಮರೆಯದಾ ಸುರಗಣಿಕೆಯು||

 

ಬೇಡುವೆನು ವರವನ್ನು

ನೀಡಿವಳ ಸತಿಯಾಗಿ

ಮಾಡುತಿಹೆ ದೇವರಿಗೆ ಕೋರಿಕೆಯನು

ಕಾಡುತಿಹ ರೂಪಸಿಯ

ಮೋಡಿಯಲಿ ಬಿದ್ದಿರುವೆ

ಜೋಡಿಯನು ಮೋದದಲಿ ಬೆರೆಸೆಂದೆನು||

-*ಶ್ರೀ ಈರಪ್ಪ ಬಿಜಲಿ*

*ಚಿತ್ರಕೃಪೆ: ಗೂಗಲ್* 

 

ಚಿತ್ರ್