ಜಿಎಸ್‌ಟಿ ದರಗಳ ಇಳಿಕೆಯಿಂದ ಜನ, ಉದ್ದಿಮೆಗಳಿಗೆ ಅನುಕೂಲ

ಜಿಎಸ್‌ಟಿ ದರಗಳ ಇಳಿಕೆಯಿಂದ ಜನ, ಉದ್ದಿಮೆಗಳಿಗೆ ಅನುಕೂಲ

೮ ವರ್ಷಗಳ ಹಿಂದೆ ದೇಶದಲ್ಲಿ ಉತ್ಪಾದನೆಯಾಗುವ ಒಂದು ವಸ್ತುವಿನ ಮೇಲೆ ಕೇಂದ್ರ ಸರ್ಕಾರ ಉತ್ಪಾದನಾ ಸುಂಕ ಹಾಗೂ ರಾಜ್ಯಗಳು ವ್ಯಾಟ್‌ನಂತಹ ತೆರಿಗೆಯನ್ನು ಹೇರುತ್ತಿದ್ದವು. ಇದರ ಜತೆಗೆ ಒಂದೊಂದು ರಾಜ್ಯದಲ್ಲಿ ಒಂದೊಂದು ಬಗೆಯ ಸುಂಕವಿತ್ತು. ದೇಶಾದ್ಯಂತ ಒಂದು ಉತ್ಪನ್ನಕ್ಕೆ ಒಂದೇ ಬಗೆಯ ತೆರಿಗೆ ಹೇರುವ ಚಿಂತನೆ ಬಹಳ ಹಿಂದಿನಿಂದಲೂ ಇತ್ತು. ನರೇಂದ್ರ ಮೋದಿ ಸರ್ಕಾರ ೨೦೧೭ರ ಜು.೧ರಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ)ಯನ್ನು ಜಾರಿಗೊಳಿಸುವ ಮೂಲಕ ಆ ಕನಸನ್ನು ನನಸಾಗಿಸಿತ್ತು. ಇದೀಗ ಜಿಎಸ್‌ಟಿಗೆ ಆಮೂಲಾಗ್ರ ಬದಲಾವಣೆ ತರುವುದಾಗಿ ಸ್ವತಃ ಮೋದಿ ಅವರೇ ದೆಹಲಿಯ ಕೆಂಪುಕೋಟೆಯಲ್ಲಿ ಮಾಡಿದ ಸ್ವಾತಂತ್ರೋತ್ಸವ ಭಾಷಣದಲ್ಲಿ ಘೋಷಣೆ ಮಾಡಿದ್ದಾರೆ. ಅವರೇ ಹೇಳಿದ ಪ್ರಕಾರ, ದೀಪಾವಳಿಗೆ ಈ ಕೊಡುಗೆ ಜನರಿಗೆ ಸಿಗಲಿದೆ. ಹಲವು ವಸ್ತುಗಳ ಬೆಲೆ ಇಳಿಕೆಯಾಗಲಿದೆ. ಇಂತಹದ್ದೊಂದು ಸುಧಾರಣೆ ಆಗಬೇಕಿತ್ತು ಎಂದು ಜನರು ಹಾಗೂ ವ್ಯಾಪಾರಿಗಳು ಮೊದಲಿನಿಂದಲೂ ಆಗ್ರಹ ಮಾಡಿಕೊಂಡು ಹಿಂದಿದ್ದರು. ಅದು ಸಾಕಾರವಾಗುವ ದಿನ ಸನಿಹವಾಗುತ್ತಿದೆ. ಇದರಿಂದ ಉತ್ಪನ್ನ ಖರೀದಿಸುವ ಜನರ ಮೇಲಿನ ಹೊರೆ ತಗ್ಗಲಿದೆ. ಇದು ನಿಜಕ್ಕೂ ಜನಸೇಹಿಯಾದ ಕ್ರಮ. ಮೋದಿ ಅವರು ಇಂತಹ ಘೋಷಣೆ ಮಾಡಲು ಆಯ್ದುಕೊಂಡಿರುವ ಸಮಯವೂ ಸೂಕ್ತವಾಗಿದೆ. ಭಾರತದ ಮೇಲೆ ಅಮೆರಿಕ ಸುಂಕ ಬರೆ ಹೇರುತ್ತಿರುವುದರಿಂದ ದೇಶೀಯವಾಗಿಯೇ ಮಾರಾಟ ಹೆಚ್ಚಿಸಲು ಜಿಎಸ್‌ಟಿ ದರ ಇಳಿಕೆ ಅನುಕೂಲವಾಗಲಿದೆ ಎಂಬ ಅಂದಾಜು ಇದೆ. 

ಜಿಎಸ್‌ಟಿಯಲ್ಲಿ ಶೇ.೫, ಶೇ.೧೨, ಶೇ.೧೮ ಹಾಗೂ ಶೇ.೨೮ ಎಂಬ ೪ ಸ್ಪ್ಯಾಬ್‌ಗಳು ಇವೆ. ಇದೀಗ ಶೇ.೧೨ ಹಾಗೂ ಶೇ.೨೮ ಅನ್ನು ಕೈ ಬಿಟ್ಟು ಶೇ.೫ ಹಾಗೂ ಶೇ.೧೮ನ್ನು ಮಾತ್ರ ಉಳಿಸಿಕೊಳ್ಳಲಾಗುತ್ತದೆ ಎಂದು ವರದಿಗಳು ತಿಳಿಸಿವೆ. ಇದರಿಂದಾಗಿ ಶೇ೧೨ರ ಸ್ಪ್ಯಾಬ್ ನಲ್ಲಿರುವ ಅನೇಕ ಉತ್ಪನ್ನಗಳು ಶೇ.೫ಕ್ಕೂ ಶೇ.೨೮ರ ಅನೇಕ ಫ್ಲ್ಯಾಬ್‌ನಲ್ಲಿರುವ ಉತ್ಪನ್ನಗಳು ಶೇ.೧೮ಕ್ಕೂ ಸೇರಿ ತೆರಿಗೆ ಹೊರೆ ಭಾರಿ ಕಡಿಮೆಯಾಗುತ್ತದೆ, ಇದರಿಂದ ಉತ್ಪನ್ನಗಳ ಬೆಲೆ ಕಡಿಮೆಯಾಗುತ್ತದೆ ಎಂಬುದು ವಾದ. ತೆರಿಗೆ ಹೊರೆಯಾದರೆ ಜನರು ಉತ್ಪನ್ನ ಖರೀದಿಸಲು ಹಿಂಜರಿಯುತ್ತಾರೆ. ಅದೇ ಇಳಿಕೆಯಾದರೆ ಖರೀದಿ ಹೆಚ್ಚುತ್ತದೆ. ಇಂತಹ ಖರೀದಿಯಿಂದ ಉತ್ಪಾದನೆ ಹೆಚ್ಚುತ್ತದೆ, ಅನೇಕ ಮಂದಿಗೆ ನೌಕರಿ ಸಿಗುತ್ತದೆ, ಉದ್ದಿಮೆಗಳಿಗೆ ಹೊಸ ಉತ್ಸಾಹ ಬರುತ್ತದೆ. ಮೋದಿ ಅವರು ಇಂತಹ ಘೋಷಣೆ ಮಾಡಲು ಆಯ್ದುಕೊಂಡಿರುವ ಸಮಯವೂ ಸೂಕ್ತವಾಗಿದೆ. ಭಾರತದ ಮೇಲೆ ಅಮೆರಿಕ ಸುಂಕ ಬರೆ ಹೇರುತ್ತಿರುವುದರಿಂದ ದೇಶೀಯವಾಗಿಯೇ ಮಾರಾಟ ಹೆಚ್ಚಿಸಲು ಜಿಎಸ್‌ಟಿ ದರ ಇಳಿಕೆ ಅನುಕೂಲವಾಗಲಿದೆ ಎಂಬ ಅಂದಾಜು ಇದೆ. ಆತ್ಮನಿರ್ಭರ ಭಾರತಕ್ಕೆ ಜಿಎಸ್‌ಟಿ ತೆರಿಗೆ ಕಡಿತ ಮತ್ತಷ್ಟು ಕೊಡುಗೆ ನೀಡುವುದರಲ್ಲಿ ಸಂದೇಹವಿಲ್ಲ.

ಕೃಪೆ: ಕನ್ನಡ ಪ್ರಭ, ಸಂಪಾದಕೀಯ, ದಿ: ೧೬-೦೮-೨೦೨೫

ಚಿತ್ರ ಕೃಪೆ: ಅಂತರ್ಜಾಲ ತಾಣ