ಜೀವನಕ್ಕೆ ಅವಶ್ಯಕವಾದ ಮಾಹಿತಿ...
ಮಗಳು- ‘ಅಮ್ಮ ಪ್ರಪಂಚದ ಹೆಸರಾಂತ ವೈದ್ಯರುಗಳು ಯಾರಮ್ಮ?’
ತಾಯಿ- ‘ಮಗಳೇ ಪ್ರಪಂಚದ ಹೆಸರಾಂತ ವೈದ್ಯರುಗಳ ಬಗ್ಗೆ ಸರಿಯಾಗಿ ಗಮನವಿಟ್ಟು ಕೇಳು, ಒಳ್ಳೆಯ ಪ್ರಶ್ನೆಯನ್ನೇ ಕೇಳಿದ್ದೀಯಾ’
1 ಸೂರ್ಯನ ಬೆಳಕು ಅಥವಾ ಸೂರ್ಯನ ಕಿರಣಗಳು: ದಿನನಿತ್ಯ ಬೆಳಿಗ್ಗೆ ಸೂರ್ಯನ ಬೆಳಕಿನಲ್ಲಿ ಕುಳಿತುಕೊಳ್ಳಬೇಕು ಅಥವಾ ನಿಧಾನವಾಗಿ ನಡೆಯಬೇಕು ಸೂರ್ಯನ ಬೆಳಕು, ಭಗವಂತನ ಶಕ್ತಿ ಆ ದಿವ್ಯಶಕ್ತಿ ನಮ್ಮ ದೇಹದಲ್ಲಿ ಡಿ ವಿಟಮಿನ್ ಆಗಿ ಪ್ರವೇಶಿಸಿ ದಿನನಿತ್ಯ ನವಚೈತನ್ಯವನ್ನು ಉಂಟು ಮಾಡುತ್ತದೆ
2 ವಿಶ್ರಾಂತಿ: ನಾವು ದಿನನಿತ್ಯ ಅತಿಯಾದ ಕೆಲಸಗಳನ್ನು ಮಾಡುತ್ತಿರುವಾಗ ನಮ್ಮ ದೇಹದ ಶಕ್ತಿ ಕುಂದುತ್ತದೆ ಅದಕ್ಕಾಗಿ ಸಾಧ್ಯವಾದಷ್ಟು ಸಮಯ ಸಿಕ್ಕಾಗ ವಿಶ್ರಾಂತಿ ಪಡೆಯಬೇಕು ದೇಹದ ಅಂಗಾಂಗಗಳ ವಿಶ್ರಾಂತಿಯು ದೇಹವನ್ನು ಚೈತನ್ಯದಲ್ಲಿಡುತ್ತದೆ
3 ವ್ಯಾಯಾಮ: ಭಗವಂತ ನಮ್ಮ ದೇಹವನ್ನು ಅದ್ಭುತವಾಗಿ ಸೃಷ್ಟಿಸಿದ್ದಾನೆ 72,000 ನಾಡಿಗಳಿವೆ. ಇಡೀ ಪೃಥ್ವಿಯ ಎಲ್ಲಾ ಮಾಹಿತಿಗಳನ್ನು ನಮ್ಮ ಮೆದುಳಿನ ಚಿಪ್ಪಿನಲ್ಲಿ ಇಟ್ಟು ತುಂಬಿದರೆ ಅದು ಕೇವಲ ಶೇಕಡ ಒಂದರಷ್ಟು ಮಾತ್ರ ಎನ್ನುವುದು ಎಷ್ಟು ಅದ್ಭುತ. ಭಗವಂತ ನಮ್ಮನ್ನು ದೇವರ ಸ್ವರೂಪದಂತೆ ಸರ್ವಶಕ್ತಿಯನ್ನು ಕೊಟ್ಟು ಸೃಷ್ಟಿಸಿದ್ದಾನೆ. ಇಂತಹ ಅದ್ಭುತವಾದ ದೇಹವನ್ನು ದಿನನಿತ್ಯದ ಚಟುವಟಿಕೆಗಾಗಿ ಯೋಗ /ವ್ಯಾಯಾಮ ತುಂಬಾ ಅವಶ್ಯಕತೆ.
4 ಮಿತ: ಆಹಾರ ದೇಹಕ್ಕೆ ಅವಶ್ಯಕತೆಯಾದಷ್ಟು ಮಾತ್ರ ಪ್ರೋಟಿನ್ ಯುಕ್ತ ಆಹಾರ ಸೇವಿಸಬೇಕು. ಹಣ್ಣು, ಸೊಪ್ಪು ತರಕಾರಿ ಹಾಗೂ ಒಣ ಹಣ್ಣುಗಳು ದೇಹಕ್ಕೆ ಅವಶ್ಯಕತೆ ಇವೆಲ್ಲವನ್ನು ಮಿತವಾಗಿ ಸೇವಿಸಬೇಕು. ಈ ರೀತಿ ನಿತ್ಯ ಸೇವಿಸಿದಾಗ ದೇಹವು ಚೈತನ್ಯ ಪೂರಕವಾಗಿ ನಮ್ಮ ದೇಹದ ಎಲ್ಲ ಅಂಗಾಂಗಗಳು ಆರೋಗ್ಯಪೂರ್ಣವಾಗಿರಲು
ಸಾಧ್ಯವಾಗುತ್ತದೆ.
5 ಆತ್ಮಸ್ಥೈರ್ಯ: ನಾವು ಏನೇ ಕಳೆದುಕೊಂಡರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ಆತ್ಮಸ್ಥೈರ್ಯ ನಮಗೆ ಸದಾ ಸಂಜೀವಿನಿ. ಜೀವರಕ್ಷಕ ಆಪದ್ಬಾಂಧವ. ನಾವು ಸದಾ ಚಟುವಟಿಕೆಯಿಂದ ಇರಲು ನೆರವಾಗುತ್ತದೆ ಭಯ ಭೀತಿ
ಸಂಕುಚಿತ ಮನೋಭಾವ. ಗಾಬರಿ, ನಾಳೆ ಏನಾಗುತ್ತದೋ ಏನೋ ಎಂಬ ಅನುಮಾನ ಸದಾ ಕೆಟ್ಟದ್ದನ್ನೇ ಯೋಚಿಸುವುದು. ಪ್ರಸ್ತುತ ಮಹಾಮಾರಿಯ ಬಗ್ಗೆ ಚಿಂತಿಸುವುದು ಇವೆಲ್ಲವೂ ಋಣಾತ್ಮಕ ಚಿಂತನೆ ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಕುಂದಿಸುತ್ತದೆ ಆತ್ಮಸ್ಥೈರ್ಯ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಆದ್ದರಿಂದ ಧನಾತ್ಮಕ ಚಿಂತನೆಗಳು ಆತ್ಮಸ್ಥೈರ್ಯದ ಜೀವನದ ಆಧಾರ ಸ್ತಂಭಗಳು.
6 ಸ್ನೇಹಿತರು: ಜೀವನದಲ್ಲಿ ಕನಿಷ್ಠ ಐದಾರು ಜನ ಉತ್ತಮ ಸ್ನೇಹಿತರನ್ನು ಪ್ರತಿಯೊಬ್ಬರು ಹೊಂದಬೇಕು. ಅವರೊಡನೆ ಪ್ರತಿನಿತ್ಯ ಭೇಟಿಯಾಗಲಿ ಅಥವಾ ದೂರವಾಣಿಯಲ್ಲಾಗಲಿ ಮಾತನಾಡಬೇಕು ಸ್ನೇಹಿತರೊಡನೆ ಮುಕ್ತವಾಗಿ ಮಾತನಾಡುವುದರಿಂದ ಮನಸ್ಸು ಹಗುರವಾಗುತ್ತದೆ ಜೊತೆಗೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ದಿನನಿತ್ಯ ಸದಾ ನಾವು ಚಟುವಟಿಕೆಯಿಂದ ಇರಲು ಸ್ನೇಹ ಸಂಜೀವಿನಿಯಂತೆ ಕೆಲಸ ಮಾಡುತ್ತದೆ.
ತಾಯಿ- ‘ಮಗಳೇ. ಪ್ರಪಂಚದ ಅತ್ಯುತ್ತಮ ವೈದ್ಯರ ಬಗ್ಗೆ ಅರ್ಥವಾಯಿತೇ?’
ಮಗಳು- ‘ಅಮ್ಮ, ಈಗ ಚೆನ್ನಾಗಿ ಅರ್ಥವಾಯಿತು ನಾನು ಪ್ರಪಂಚದ ಅತ್ಯುತ್ತಮ ವೈದ್ಯರ ನಿಯಮಗಳನ್ನು ಇನ್ನು ಮುಂದೆ ದಿನನಿತ್ಯ ಪಾಲಿಸುತ್ತೇನೆ ಅಮ್ಮ'
ತಾಯಿ- ‘‘ಆರೋಗ್ಯವೇ ಭಾಗ್ಯ ಎಂದು ಎಲ್ಲರೂ ಅರಿಯಲಿ, ಮನೆಯಲ್ಲೇ ಸುರಕ್ಷಿತವಾಗಿರಿ’
(ಸಂಗ್ರಹ)