ಜೀವನದ ಜೋಕಾಲಿ ತೂಗುತಿದೆ ನೋವಿನಲಿ
ಜೀವನದ ಜೋಕಾಲಿ ತೂಗುತಿದೆ ನೋವಿನಲಿ
ನಿಟ್ಟುಸಿರಿನ ತಂಗಾಳಿ ಆವರಿಸಿದೆ ಕಣ್ಣೆದುರಲಿ
ಕಣ್ಣೀರಿನ ಪ್ರತಿ ಹನಿಯು ಭೂಮಿಯನು ತಾಗಿ
ಬನ್ನಿಸುತಿದೆ ಶೋಕದ ವ್ಯಥೆಯ ಪರಿ ಪರಿಯಾಗಿ
ಕೊನೆಗೂ ಮಸಣದ ಹೂವಾಯಿತೆ ಮನವು
ಆನಾಥ ಶವವಾಯಿತೆ ನನ್ನೀ ಪ್ರೀತಿಯು
ಮತ್ತೊಬ್ಬರ ಮುಡಿ ಸೇರಿ ನಗುತಿರಲು ನಾನು ಬೆಳೆಸಿದ ಹೂ
ನನ್ನ ಕಣ್ಣಲ್ಲಿನ ಕಂಬನಿಯ ತಡೆಯೋರು ಯಾರು ?
ಸಪ್ತ ಸಾಗರವಾಗಿ ತೇಲಿದವು ಭಾವನೆಗಳ ಮಹಾಪೂರ ಅಂದು
ನಿರ್ಲಿಪ್ತ ತೆರೆಗಳ ಮೇಲೆ ಚಲಿಸುತಿದೆ ನಮ್ಮಿಬ್ಬರ ಹಣೆಬರಹ ಇಂದು
ಎತ್ತ ಸಾಗಿ ಏನು ಮಾಡಿದರು ನೆಮ್ಮದಿ ದೊರಕದು ನನ್ನೀ ಜೀವಕೆ
ನೀ ಇಲ್ಲದಾ ಜೀವನ ಸಾಗರದ ದಡದಲ್ಲಿನ ಚಟಪಡಿಸೋ ಮೀನಿನ ಹಾಗೆ
ಜಾತಿಯನು ಜಯಿಸುವುದು ಅಸಾಧ್ಯವಾಯಿತೆ ನಮ್ಮೀ ಪ್ರೀತಿಗೆ.
ನಿರ್ಮಲ ಹೃದಯಗಳನು ಸುಟ್ಟು ನಗುತಿಹರು ನಾಚಿಕೆ ಇಲ್ಲದೆ
ಸಪ್ತ ವರುಷಗಳು ಊರುಳಿದವು ನಿನ್ನನು ಕಾಣದೆ,ನೋವು ಸಹಿಸದಾಗಿದೆ
ಒಮ್ಮೆ ಕನಸಲ್ಲಾದರು ಸ್ಪರ್ಶಿಸಿ,ನೋವಿಗೆ ಇತಿಶ್ರೀ ಹಾಡೆ
ಶೂನ್ಯವಾಯಿತು ಬದುಕು,ಶಮನವಾಗಲಿ ಬೇಗ ಕಣ್ಣಲ್ಲಿನ ಬೆಳಕು
ಸೊನ್ನೆ ಸುತ್ತಲಿ ಬೇಗ ನನ್ನೀ ಯಾತ್ರೆಗೆ,
ಜವರಾಯನೆ ಕರುಣೆ ತೋರಿ,ಬೇಗ ಕರೆದೊಯ್ಯಲಿ ತನ್ನೂರಿಗೆ.
ಈ ವಿರಹದ ನೋವು ನನ್ನೊಂದಿಗೆ ಐಕ್ಯವಾಗಲಿ,
ನಿನ್ನಯ ಮೊಗವು ಸದಾ ಹೂವಿನ ಹಾಗೆ ನಗುತಿರಲಿ
Comments
ಉ: ಜೀವನದ ಜೋಕಾಲಿ ತೂಗುತಿದೆ ನೋವಿನಲಿ
In reply to ಉ: ಜೀವನದ ಜೋಕಾಲಿ ತೂಗುತಿದೆ ನೋವಿನಲಿ by Mohan Raj M
ಉ: ಜೀವನದ ಜೋಕಾಲಿ ತೂಗುತಿದೆ ನೋವಿನಲಿ
In reply to ಉ: ಜೀವನದ ಜೋಕಾಲಿ ತೂಗುತಿದೆ ನೋವಿನಲಿ by Maanu
ಉ: ಜೀವನದ ಜೋಕಾಲಿ ತೂಗುತಿದೆ ನೋವಿನಲಿ
ಉ: ಜೀವನದ ಜೋಕಾಲಿ ತೂಗುತಿದೆ ನೋವಿನಲಿ