ಜೀವನ ಪಾಠ ಮತ್ತು ಇತಿಹಾಸ
ಕವನ
ಮತ್ತೆ ಮತ್ತೆ ಹುಟ್ಟಲಾರನು
ಒಮ್ಮೆ ಹುಟ್ಟಿದ ಮನುಷ್ಯ
ಅದೇ ರೂಪದಿಂದ ಬದುಕು
ವರ್ತನೆಯ ಮೂರ್ತ ರೂಪದಿಂದ
ಜನಿಸಿದವ ಒಂದಲ್ಲ ಒಂದು ದಿನ
ಸಾಯಲೇ ಬೇಕು ಗೋರಿ ಸೇರಲೇ ಬೇಕು
ಇದರ ನಡುವೆ ಜೀವನದ ಜಂಜಾಟದೊಳು
ಹೆಣಗಬೇಕು ಬಾಳ ಸಾಗಿಸಲೇ ಬೇಕು ,
ತಿಂಡಿ ಊಟ, ಇದ್ರೆ ನಿದ್ರೆ ಮೈಥುನ
ಮಾರುಕಟ್ಟೆ ,ಇಲ್ಲಿ ಸಿಗುವ ವಸ್ತುಗಳಂತಾಗಿದೆ
ಯಾವುದಕ್ಕೂ ಕಾಲಾವಕಾಶವಿಲ್ಲ, ಅಂಕಿತ ಮುದ್ರೆಯಿಲ್ಲ !
ಕನಸು ಕಾಣುವವರು
ಕನಸು ಕಾಣುತ್ತಲೇ ಇದ್ದಾರೆ
ನನಸೆಂದು ಬರುವುದೆಂಬ ನಂಬಿಕೆಯಿಂದ
ಕೊನೆಗೂ ನನಸು ಬರುವುದೇ ಇಲ್ಲ !
ಪಾಪ ದೇವರಿಗೂ ಕೊನೆಯ ವರೆಗೂ ಗೊತ್ತಾಗಿಲ್ಲ ಇವನ ಅವ್ಯವಸ್ಥೆಯ ಆಗರ !
ಆದರೆ ದೇವರಿಗೆ ಗೊತ್ತಾಗದ್ದು
ನಮ್ಮೂರ ಜೋಯಿಸರಿಗೆ ಗೊತ್ತಾದ್ದು ಪವಾಡ !
ಕೊನೆಗೆ ಅವರ ಮಾತನ್ನು ನಂಬಿ
ಇದ್ದದ್ದನ್ನೂ ಕಳೆದುಕೊಂಡು
ಬೆಂಗಳೂರು ಮಾರುಕಟ್ಟೆಯಲ್ಲಿ *ಕಡಲೆಕಾಯಿ* ಮಾರುತ್ತಿದ್ದುದು ಈಗ ಇತಿಹಾಸ !
ಈತನೀಗ ಇತಿಹಾಸದಿಂದಲೇ *ಜೀವನ ಪಾಠ* ಕಲಿತ *ಇತಿಹಾಸ* ಬೋಧಿಸುವ ಅಧ್ಯಾಪಕನಾದ !
-ಹಾ ಮ ಸತೀಶ, ಬೆಂಗಳೂರು
ಚಿತ್ರ್
