ಜೀವವೇ
ಕವನ
ಬಾಳೆಂಬ ಚದುರಂಗದಾಟದಲಿ
ಬೇಸತ್ತು ಬಡವಾದ ಓ ಜೀವವೇ.
ಭವಿಷ್ಯ ಸುಖದ ನಿರೀಕ್ಷೆಯಲಿ
ಬಳಲಿ ಬೆಂದ ಓ ಜೀವವೇ.
ಕಷ್ಟವೆಂಬ ನೋವನು ಸಹಿಸಿ
ಬಾಳನೌಕೆಯನು ಮುನ್ನಡೆಸಬೇಕು ಜೀವವೇ.
ಆಗಿಹೋದ ತಪ್ಪುಗಳ ಆದ ನಿರಾಸೆಗಳ
ಮರೆಯಬೇಕು ಜೀವವೇ.
ಉತ್ಸಾಹದ ಚಿಲುಮೆಯನು ನಿತ್ಯ ಕಾಯಕದಲಿ
ಹರಿಸಿ ವರ್ತಮಾನವ ಅನುಭವಿಸು ನೀ ಜೀವವೇ.
ಸಂಕಟಗಳ ಸಂಕಲೆಯ ಚಿಂತೆಗಳ ಚಿತೆಯ
ನಿವಾರಿಸಿ ಚದುರಂಗದಾಟದಲಿ ಜಯಿಸು ನೀ ಜೀವವೇ.