ಜೋಳದ ಹಿಟ್ಟಿನ ಕಟ್ಲೇಟ್

ಜೋಳದ ಹಿಟ್ಟಿನ ಕಟ್ಲೇಟ್

ಬೇಕಿರುವ ಸಾಮಗ್ರಿ

ಜೋಳದ ಹಿಟ್ಟು - ೧ ಕಪ್, ಅಕ್ಕಿ ಹಿಟ್ಟು - ೧ ಕಪ್, ಬ್ರೆಡ್ ಸ್ಲೈಸ್ - ೩, ಕತ್ತರಿಸಿದ ಹಸಿ ಮೆಣಸಿನಕಾಯಿ - ೬ ತುಂಡುಗಳು, ಕತ್ತರಿಸಿದ ಈರುಳ್ಳಿ - ಅರ್ಧ ಕಪ್, ಕತ್ತರಿಸಿದ ಕೊತ್ತಂಬರಿ ಸೊಪ್ಪು - ೩ ಚಮಚ, ತುರಿದ ಶುಂಠಿ - ೧ ಚಮಚ, ಗರಮ್ ಮಸಾಲಾ ಹುಡಿ - ೧ ಚಮಚ, ಎಣ್ಣೆ - ೩ ಚಮಚ, ಅರಸಿನ ಹುಡಿ - ಅರ್ಧ ಚಮಚ, ಇಂಗು - ಕಾಲು ಚಮಚ, ಸಾಸಿವೆ - ೧ ಚಮಚ, ರುಚಿಗೆ ತಕ್ಕಷ್ಟು ಉಪ್ಪು. 

ತಯಾರಿಸುವ ವಿಧಾನ

ಬ್ರೆಡ್ ಸ್ಲೈಸ್ ಗಳನ್ನು ನೀರಿನಲ್ಲಿ ಅದ್ದಿ ತೆಗೆದು ಒತ್ತಿ ನೀರು ತೆಗೆದು ಹುಡಿ ಮಾಡಿ. ಬಾಣಲೆಯಲ್ಲಿ ಎಣ್ಣೆ ಕಾಯಿಸಿ ಸಾಸಿವೆ, ಇಂಗು, ಅರಸಿನ ಹಾಕಿ ಒಗ್ಗರಣೆ ಮಾಡಿ. ಒಗ್ಗರಣೆಗೆ: ಈರುಳ್ಳಿ, ಹಸಿಮೆಣಸಿನ ಕಾಯಿ, ಕೊತ್ತಂಬರಿ ಸೊಪ್ಪು, ಗರಮ್ ಮಸಾಲಾ ಹಾಕಿ ಚೆನ್ನಾಗಿ ಬಾಡಿಸಿ. ಹುಡಿ ಮಾಡಿದ ಬ್ರೆಡ್ ಸ್ಲೈಸ್ ಗಳಿಗೆ ಬಾಡಿಸಿಟ್ಟ ತರಕಾರಿ, ಜೋಳದ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಶುಂಠಿ ಬೆರೆಸಿ ಗಟ್ಟಿಯಾಗಿ ಕಲಸಿಡಿ. ನಿಂಬೆ ಹಣ್ಣಿನ ಗಾತ್ರದ ಮಿಶ್ರಣವನ್ನು ತೆಗೆದುಕೊಂಡು ವಡೆಯ ಆಕಾರದಲ್ಲಿ ತಟ್ಟಿ ಕಾದ ಕಾವಲಿಯ ಮೇಲೆ ಎಣ್ಣೆ ಸವರಿ ಎರಡೂ ಬದಿ ಹೊಂಬಣ್ಣ ಬರುವವರೆಗೆ ಬೇಯಿಸಿದರೆ ಗರಿಗರಿಯಾದ ಜೋಳದ ಹಿಟ್ಟಿನ ಕಟ್ಲೇಟ್ ತಿನ್ನಲು ತಯಾರು. ಟೊಮೆಟೊ ಸಾಸ್ ಅಥವಾ ಪುದೀನಾ ಚಟ್ನಿ ಜೊತೆ ತಿನ್ನಲು ರುಚಿಕರ.