ಝೆನ್ ಕಥೆ ೩೪: ಜ್ಞಾನೋದಯ By olnswamy on Mon, 02/06/2006 - 16:56 ಬರಹ ಶಿಷ್ಯನೊಬ್ಬ ಗುರುವನ್ನು ಕೇಳಿದ: "ಗುರುವೇ, ಜ್ಞಾನೋದಯ ಎಂದರೆ ಏನು?" ಗುರು ಹೇಳಿದ: "ಹಸಿವಾದಾಗ ಉಣ್ಣು, ಬಾಯಾರಿದಾಗ ನೀರು ಕುಡಿ, ನಿದ್ರೆ ಬಂದಾಗ ಮಲಗು" [ಕುವೆಂಪು ಕವಿತೆಯೊಂದರ ಕೊನೆಯ ಸಾಲುಗಳು: "ಅರಿವಾಸೆಯೆ ಮಾಯಾಬಂಧ, ಇರುವುದೆ ಮುಕ್ತಿಯ ಆನಂದ"]