ಝೆನ ಕಥೆ ೩೬: ಛತ್ರ

ಝೆನ ಕಥೆ ೩೬: ಛತ್ರ

ಬರಹ
ತಲೆಮಾರುಗಳು
 

 

  ಸುಪ್ರಸಿದ್ಧ ಝೆನ್ ಗುರುವೊಬ್ಬ ರಾಜನ ಅರಮನೆಯ ಬಳಿಗೆ ಬಂದ. ಸೀದಾ ರಾಜನ ಬಳಿಗೆ ಹೋದ.

ಸಭೆಯಲ್ಲಿ ಕುಳಿತಿದ್ದ ರಾಜ ಅವನನ್ನು ಗುರುತಿಸಿದ. "ಏನು ಬೇಕಾಗಿತ್ತು?" ಎಂದು ಕೇಳಿದ.

"ಈ ಛತ್ರದಲ್ಲಿ ಇವತ್ತು ರಾತ್ರಿ ಉಳಿಯಬೇಕು" ಅಂದ ಗುರು.

"ಇದು ನನ್ನ ಅರಮನೆ, ಛತ್ರವಲ್ಲ" ಎಂದ ರಾಜ.

"ನಿನಗಿಂತ ಮೊದಲು ಯಾರಿದ್ದರು ಇಲ್ಲಿ?"

"ನನ್ನ ತಂದೆ. ಈಗ ಅವರು ತೀರಿ ಹೋಗಿದ್ದಾರೆ."

"ಅವರಿಗಿಂತ ಮೊದಲು?"

"ನನ್ನ ತಾತ ಇಲ್ಲಿದ್ದರು. ಅವರೂ ಈಗಿಲ್ಲ."

"ಎಲ್ಲರೂ ಕೊಂಚ ಕಾಲ ಇದ್ದು ಹೋಗುವ ಈ ಜಾಗ ಛತ್ರವಲ್ಲದೆ ಬೇರೆ ಇನ್ನೇನು?"

 

[ವ್ಯಾಸ ತನ್ನ ಭಾರತದಲ್ಲಿ ಹೇಳುತ್ತಾನೆ: ದಿನವೂ ಪ್ರಾಣಿಗಳು ಸಾಯುತ್ತಿದದ್ದರೂ ಪ್ರತಿಯೊಂದು ಜೀವಿಯೂ ತಾನು ಶಾಶ್ವತವಾಗಿ ಇರುತ್ತೇನೆ ಅಂದುಕೊಳ್ಳುವುದೇ ಈ ಲೋಕದ ವೈಶಿಷ್ಟ್ಯ]