ಟೆಡ್ ಟಾಕ್ ಗಳು ಈಗ ಕನ್ನಡ ಸಬ್-ಟೈಟಲ್ ನೊಂದಿಗೆ

ಟೆಡ್ ಟಾಕ್ ಗಳು ಈಗ ಕನ್ನಡ ಸಬ್-ಟೈಟಲ್ ನೊಂದಿಗೆ

ಬರಹ

ಇದೀಗ ಬಂದ ಸುದ್ದಿ. TED ಭಾಷಣಗಳು ಇನ್ನು ಮುಂದೆ ಕನ್ನಡವೂ ಸೇರಿದಂತೆ ೪೦ ವಿವಿಧ ಭಾಶೆಗಳಲ್ಲಿ ಸಬ್ ಟೈಟಲ್ ನೊಂದಿಗೆ ಬರಲಿವೆ. ಈಗಾಗಲೇ ಒಂದಿಷ್ಟು ಭಾಶಣಗಳು ಕನ್ನಡದಲ್ಲಿದ್ದು, ಮುಂದೆ ನಾವು-ನೀವು ಎಲ್ಲರೂ ಉಳಿದ ಭಾಷಣಗಳನ್ನು ಭಾಷಾಂತರ ಮಾಡಬಹುದಂತೆ.

TED (ಟೆಕ್ನಾಲಜಿ, ಎಜುಕೇಶನ್, ಡಿಸೈನ್) ಭಾಷಣಗಳು ಬಹಳ ಉಪಯುಕ್ತವಾಗಿ ಇರುತ್ತವೆ. ಜಗತ್ತಿನ ಅತ್ಯುತ್ತಮ ಚಿಂತಕರು ತಮ್ಮ ಆಲೋಚನೆಗಳನ್ನು  ಜಗತ್ತಿನ ಎಲ್ಲರ ಜೊತೆ ಹಂಚಿಕೊಳ್ಳಲು TED ಒಂದು ವೇದಿಕೆ. ಕನ್ನಡದಲ್ಲಿ ಈ ಭಾಷಣಗಳು ಅನುವಾದ ಆಗುವುದು ಕನ್ನಡದ ಮತ್ತು ಕನ್ನಡಿಗರ ಏಳಿಗೆಗೆ ಅತಿ ಅವಶ್ಯಕ ಎನಿಸುತ್ತದೆ ನನಗೆ.

ಈಗಾಗಲೇ ಇರುವ ಭಾಶಾಂತರಗಳು professionals ಮಾಡಿರುವುದಂತೆ (ಸ್ವಯಂಸೇವಕರಲ್ಲ). ಭಾಶಾಂತರಗಳು ತಕ್ಕ ಮಟ್ಟಿಗೆ ಚೆನ್ನಾಗಿ ಇವೆ. ಸಂಪದ, ಕನ್ನಡ ವಿಕಿ ಮತ್ತಿತರ ಕನ್ನಡ ಆನ್ ಲೈನ್ ಸಮುದಾಯಗಳ ಸದಸ್ಯರೆಲ್ಲಾ ಸೇರಿ ಉಳಿದ ಭಾಷಣಗಳನ್ನೂ ಭಾಷಾಂತರ ಮಾಡಬಹುದು.

ಮತ್ತೇಕೆ ತಡ? ಈ ಉತ್ತಮ ಕೆಲಸಕ್ಕೆ  ಇಂದೇ ನಿಮ್ಮ ಸಹಾಯ ನೀಡಿ!

(ನಿಮಗೆ ಭಾಷಾಂತರದಲ್ಲಿ ವಿಶೇಷ ಆಸಕ್ತಿ ಇಲ್ಲದಿದ್ದರೂ TED ವೀಡಿಯೋಗಳನ್ನು ನೋಡಿ ಆನಂದಿಸಿ. ಸಂಪದದಲ್ಲೇ ಬಹಳ ವಿಡಿಯೋಗಳ ಬಗ್ಗೆ ಚರ್ಚೆ ನಡೆದಿದೆ. TED ಎಂದು ಒಂದು ಸರ್ಚ್ ಕೊಟ್ಟು ನೋಡಿ ಸಂಪದದಲ್ಲಿ).

ಕೊಸರು: ಈ ಬಾರಿ ಟೆಡ್ ಗ್ಲೋಬಲ್ ಕಾನ್ಫರೆನ್ಸ್ ಮೈಸೂರಿನಲ್ಲೇ ನಡೆಯುವುದಂತೆ