ಟೊಮೆಟೋ ಗೊಜ್ಜು

ಟೊಮೆಟೋ ಗೊಜ್ಜು

ಬೇಕಿರುವ ಸಾಮಗ್ರಿ

ಟೊಮೆಟೊ ಹಣ್ಣು (ಕತ್ತರಿಸಿದ್ದು) - ೨ ಕಪ್, ಕತ್ತರಿಸಿದ ಈರುಳ್ಳಿ ಅರ್ಧ ಕಪ್, ತೆಂಗಿನ ತುರಿ - ಅರ್ಧ ಕಪ್, ಮೆಣಸಿನ ಹುಡಿ - ೨ ಚಮಚ, ಇಂಗು - ಕಾಲು ಚಮಚ, ಹುರಿಗಡಲೆ - ೩ ಚಮಚ, ಅರಶಿನ - ಕಾಲು ಚಮಚ, ಜೀರಿಗೆ - ಅರ್ಧ ಪುಟ, ಬೆಲ್ಲದ ಹುಡಿ - ೧ ಚಮಚ, ಎಣ್ಣೆ - ೩ ಚಮಚ, ಸಾಸಿವೆ - ೧ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಕೊತ್ತಂಬರಿ ಸೊಪ್ಪು - ೨ ಚಮಚ

ತಯಾರಿಸುವ ವಿಧಾನ

ತೆಂಗಿನ ಕಾಯಿ, ಮೆಣಸಿನ ಹುಡಿ, ಇಂಗು, ಹುರಿಗಡಲೆ, ಅರಶಿನ ಹಾಗೂ ಜೀರಿಗೆ ಸೇರಿಸಿ ತರಿತರಿಯಾಗಿ ರುಬ್ಬಿ ಬಾಣಲೆಯಲ್ಲಿ ಕಾದ ಎಣ್ಣೆಗೆ ಸಾಸಿವೆ ಒಗ್ಗರಣೆ ಮಾಡಿ. ಒಗ್ಗರಣೆಗೆ ಕತ್ತರಿಸಿದ ಈರುಳ್ಳಿ, ಟೊಮೆಟೋಗಳನ್ನು ಹಾಕಿ ಬಾಡಿಸಿ, ಸ್ವಲ್ಪ ನೀರು , ರುಬ್ಬಿದ ಮಸಾಲೆ, ಬೆಲ್ಲ, ಉಪ್ಪು ಹಾಕಿ ಕುದಿಸಿ. ಒಲೆಯಿಂದ ಕೆಳಗಿರಿಸಿ, ಕೊತ್ತಂಬರಿ ಸೊಪ್ಪು ಸೇರಿಸಿದರೆ, ರುಚಿಯಾದ ಟೊಮೆಟೋ ಗೊಜ್ಜು ಸವಿಯಲು ಸಿದ್ಧ.