ಟೊಮ್ಯಾಟೋ ಕಾಯಿಯ ಚಟ್ನಿ
ಟೊಮ್ಯಾಟೋ ಕಾಯಿ (ಹಸಿರು ಬಣ್ಣದ್ದು, ಸಾಧಾರಣ ಗಾತ್ರದ್ದು) – 2, ಹಸಿಮೆಣಸಿನ ಕಾಯಿ – ಖಾರಕ್ಕೆ ತಕ್ಕಂತೆ, ಉಪ್ಪು – ರುಚಿಗೆ ತಕ್ಕಂತೆ. ಎಣ್ಣೆ – 4 ಚಮಚ..................................... ಒಗ್ಗರಣೆಗೆ : ಎಣ್ಣೆ – 2 ಚಮಚ, ಸಾಸಿವೆ – ¼ ಚಮಚ, ಒಣ ಮೆಣಸಿನ ಕಾಯಿ - 4 ಅಥವಾ 5 ತುಂಡುಗಳು, ಕರಿಬೇವಿನ ಎಸಳು – 4 – 5, ಇಂಗು – 1 ಚಿಟಿಕೆ. ಅರಿಶಿನ – ¼ ಚಮಚ.
ಟೊಮ್ಯಾಟೋ ಕಾಯಿಯನ್ನು ತೊಳೆದು ಕತ್ತರಿಸಿಟ್ಟುಕೊಳ್ಳಿ. ಹಸಿಮೆಣಸಿನ ಕಾಯಿಯನ್ನು ಮಧ್ಯಕ್ಕೆ ಸೀಳಿಕೊಳ್ಳಿ. ಸಣ್ಣ ಬಾಣಲೆಗೆ ಎಣ್ಣೆ ಹಾಕಿ ಸ್ಟೌ ಮೇಲಿಡಿ. ಎಣ್ಣೆ ಬಿಸಿಯಾದ ನಂತರ ಟೊಮ್ಯಾಟೋ ಮತ್ತು ಹಸಿ ಮೆಣಸಿನ ಕಾಯಿ ಹಾಕಿ ಫ್ರೈ ಮಾಡಿ. ಕೊನೆಯಲ್ಲಿ ಅರಿಶಿನ ಹಾಕಿ. ಚೆನ್ನಾಗಿ ಫ್ರೈ ಆದ ನಂತರ ಕೆಳಗಿಳಿಸಿ, ತಣ್ಣಗಾದ ನಂತರ ಮಿಕ್ಸಿಗೆ ಹಾಕಿ ತಿರುವಿರಿ. ಟೊಮ್ಯಾಟೋ ಚೆನ್ನಾಗಿ ನುಣ್ಣಗಾದ ನಂತರ ಉಪ್ಪನ್ನು ಹಾಕಿ ಪುನಃ ಒಂದೆರಡು ಬಾರಿ ತಿರುವಿರಿ. ಈಗ ಈ ಮಿಶ್ರಣವನ್ನು ಒಂದು ಪುಟ್ಟ ಬೌಲಿಗೆ ಬಗ್ಗಿಸಿಕೊಳ್ಳಿ. ಮೇಲೆ ಹೇಳಿದ ಒಗ್ಗರಣೆ ಪದಾರ್ಥಗಳನ್ನು ಹಾಕಿ ಒಗ್ಗರಣೆ ಮಾಡಿ. ದಿಢೀರ್ ಟೊಮ್ಯಾಟೋ ಕಾಯಿ ಚಟ್ನಿ ರೆಡಿ... ಬಿಸಿ ಬಿಸಿ ಅನ್ನದೊಂದಿಗೆ ಕಲೆಸಿ ತಿನ್ನಲು ಬಲು ರುಚಿಯಾಗಿರುತ್ತದೆ. .................
ಬೆಳ್ಳುಳ್ಳಿಯನ್ನು ಉಪಯೋಗಿಸುವವರು ಹುರಿಯುವಾಗ ಹಾಕಬಹುದು.