ಕನ್ನಡ ನಾಡು, ನುಡಿ, ಭಾಷೆ, ಸಂಸ್ಕೃತಿಯನ್ನು ಹೇಗೆ ಬಾಳಿಸಿ ಬೆಳಗಬೇಕು ಎಂಬುದನ್ನು ತೋರಿಸಿಕೊಟ್ಟ ಡಾ. ರಾಜ್ ಅನ್ನು ಸ್ಮರಿಸೋಣ ! ಹೀಗೊಂದು ಡಾ. ರಾಜ್ ಸ್ಮರಣ !! ನಮನ !!!
ಕನ್ನಡದ ಕಂದಾ, ನೀ ಕರುನಾಡ ಅಣ್ಣನಾದೆ,
ಕನ್ನಡಿಗರ ಹೃದಯದಲಿ ಕನ್ನಡದ ಉಸಿರಾದೆ,
ಕರುನಾಡು ಬೆಳೆಸಿದ ಮಂದಾರ ಮರವಾದೆ,
ಕೋಟಿ ಕನ್ನಡಿಗರಿಗೆ ಕನ್ನಡದ ಕಣ್ಮಣಿಯಾದೆ.!!!
ಸೌಜನ್ಯ, ಸಭ್ಯತೆಯ ಸೂಸುತ್ತಾ ನಿಂದೆ,
ಸೌರಭವ, ಉತ್ಸಾಹ ಉಕ್ಕಿಸುತ್ತಾ ನಡೆದೆ,
ಸೊಗವ, ಸೊಬಗನು ಸ್ಮರಿಸುತ್ತಾ ಸಾಗಿದೆ,
ಸೋಲು ಕನ್ನಡಕ್ಕಿಲ್ಲ, ಎಂದು ಕೂಗುತ್ತಾ ಕರೆದೆ.!!!
ಇದು ನೆನಪೆಂದರೆ ಬರೀ “ತಪ್ಪು”,
ಇದು ಅಮರ, ಮಧುರ ಮುತ್ತಿನ “ಪಪ್ಪು”,
ಇದು ಮಾನವತೆಗೆ ಸರಿಸಾಟಿಯಾದ “ಒಪ್ಪು”,
ಇದು ಎಂದಿಗೂ, ಎಂದೆಂದಿಗೂ, ಕನ್ನಡಿಗರ “ತೀರ್ಪು”.!!!
ನೀನ್ ಇಟ್ಟ ಸವಿನೆನಪುಗಳ ನೆನಪಿನಲಿ,
ನಾವ್ ಕಟ್ಟ ಬೇಕು ಸುಸಂಸ್ಕೃತಿಯ ಬಾಳ ಸರಪಳಿ,
ನಿನ್ನ ಕನಸದು ಸಹೃದಯ ಸುಂದರ ಬಣ್ಣಗಳಲಿ,
ನಮಗದು, ಆರದ “ದಾರಿದೀಪ” ಕಣ್ ಮನಗಳಲಿ.!!!!!
Comments
ಬರಿ ವ್ಯಕ್ತಿಯಲ್ಲದ ಶಕ್ತಿಯೊಂದರ
ಬರಿ ವ್ಯಕ್ತಿಯಲ್ಲದ ಶಕ್ತಿಯೊಂದರ ಕುರಿತು ಬರೆಯ ಹೊರಟರೆ, ಬರೆದಷ್ಟೂ ಮಿಕ್ಕಿರುತ್ತದೆಯೊ ಏನೊ...ಅಂಥಾ ಅಗಾಧ ವ್ಯಕ್ತಿತ್ವ ಸಾಗರ ಡಾ.ರಾಜ್ ಅವರದು. ಆ ಬಾಲ್ಯದ ದಿನಗಳಲ್ಲಿ ನಮಗರಿವಿಲ್ಲದೆಯೆ ನಮ್ಮ ವ್ಯಕ್ತಿತ್ವ ರೂಪುಗೊಳಿಸುವಲ್ಲಿ, ಪ್ರಭಾವ ಬೀರುವಲ್ಲಿ ರಾಜ್ ಚಿತ್ರಗಳ ಪ್ರಭಾವ ವರ್ಣನೆಗೆ ನಿಲುಕದ್ದು. ಈಗಲೂ ಟೆಂಟುಗಳಲ್ಲಿ ಕೂತು ನೋಡಿದ ಆ ಚಿತ್ರಗಳ ನೆನಪು, ಪ್ರಭಾವ ಅಚ್ಚಳಿಯದ ಹಾಗೆ ಉಳಿದುಬಿಟ್ಟಿದೆ - ರಾಜ ಮಹರಾಜರ ಕನಸಿನ ಲೋಕದಿಂದಿಡಿದು, ಪೌರಾಣಿಕ / ಸಾಮಾಜಿಕ ಜ್ಞಾನದ ಅರಿವಿನತನಕ...ನಾಗೇಶ ಮೈಸೂರು, ಸಿಂಗಾಪುರದಿಂದ.
In reply to ಬರಿ ವ್ಯಕ್ತಿಯಲ್ಲದ ಶಕ್ತಿಯೊಂದರ by nageshamysore
ಧನ್ಯವಾದಗಳು ನಾಗೆಶ್ ಅವರೆ, ‘ಮೀನಾ
ಧನ್ಯವಾದಗಳು ನಾಗೆಶ್ ಅವರೆ,
‘ಮೀನಾ