ಡಾ| ರಾಜ್ - ಪದಬಂಧ (ಸಾಮಾಜಿಕ)

ಡಾ| ರಾಜ್ - ಪದಬಂಧ (ಸಾಮಾಜಿಕ)

ಬರಹ

ಡಾ| ರಾಜ್ ಅವರ ಹಾಡುಗಳನ್ನು ಹಾಡಿಕೊಂಡು ಆ ಹಾಡಿನ ಚಿತ್ರದ ಹೆಸರನ್ನು ಪದರಂಗದಲ್ಲಿ ತುಂಬಿಸೋಣವೇ ? ನಿಮ್ಮೆಲ್ಲರಿಗೂ ಚಿರಪರಿಚಿತವಾದ ಹಾಡು / ಸಿನಿಮಾಗಳಿಂದಲೇ ಆಯ್ಕೆ ಮಾಡಿರುವುದರಿಂದ, ಅವಶ್ಯಕತೆ ಇದ್ದಲ್ಲಿ ಉತ್ತರ ಪ್ರಕಟಿಸುತ್ತೇನೆ. ನಿಮ್ಮ ಉತ್ತರಗಳನ್ನು ಕಮೆಂಟಿನಲ್ಲಿ ಹಾಕುವಿರಿ ತಾನೇ?

ಎಡದಿಂದ ಬಲಕ್ಕೆ

(೦೧) "ನಗು ನಗುತಾ ನಲೀ ನಲೀ, ಏನೇ ಆಗಲಿ" {೭}
(೦೨) "ಜೇನಿನ ಹೊಳೆಯೋ ಹಾಲಿನ ಮಳೆಯೋ, ಸುಧೆಯೋ ಕನ್ನಡ ಸವಿನುಡಿಯೋ" {೮}
(೦೩) "ಇದು ರಾಮ ಮಂದಿರ ಆನಂದ ಸಾಗರ, ಜೊತೆಯಾಗಿ ನೀನಿರಲು ಬಾಳು ಸಹಜದ ಸುಂದರಾ" {೪}
(೦೪) "ಬಾನಿಗೊಂದು ಎಲ್ಲೆ ಎಲ್ಲಿದೆ, ನಿನ್ನಾಸೆಗೆಲ್ಲಿ ಕೊನೆ ಇದೆ, ಏಕೇ ಕನಸು ಕಾಣುವೇ, ನಿಧಾನಿಸು ನಿಧಾನಿಸು" {೬}
(೧೨) "ನಾವಿರುವಾ ತಾಣವೆ ಗಂಧದ ಗುಡಿ..." {೫}
(೧೩) "ನಿನದೇ ನೆನಪೂ ದಿನವೂ ಮನದಲ್ಲಿ, ನೋಡುವಾ ಆಸೆಯೂ ತುಂಬಿದೇ ನನ್ನಲೀ ನನ್ನಲೀ" {೬}
(೧೫) "ಆಕಾಶವೆ ಬೀಳಲಿ ಮೇಲೇ, ನಾ ನಿನ್ನ ಕೈಬಿಡೆನು" {೬}

(೧೬) "ನಿನ್ನೀ ನಗುವೇ ಚಂದ್ರೋದಯವೂ ಈ ಮನೆಗೇ, ನಮ್ಮ ಈ ಮನೆಗೇ" {೪}
(೧೮) "ನಗುತಾ ನಗುತಾ ಬಾಳೂ ನೀನೂ ನೂರು ವರ್ಷಾ..." {೫}
(೧೯) "ವಸಂತ ಕಾಲಾ ಬಂದಾಗಾ, ಮಾವು ಚಿಗುರಲೇ ಬೇಕು" {೨}
(೨೦) "ಆ ರತಿಯೇ ಧರೆಗಿಳಿದಂತೆ, ಆ ಮದನಾ ನಗುತಿರುವಂತೆ, ಕಲ್ಲೂ ಮುಳ್ಳೆಲ್ಲ" {೪}
(೨೩) "ಕೋಗಿಲೆ ಹಾಡಿದೆ ಕೇಳಿದೆಯಾ, ಹೊಸ ರಾಗವ ಹಾಡಿದೆ ಆಲಿಸೆಯಾ?" {೬}
(೨೪) "ನಿನ್ನ ಲಗ್ನಪತ್ರಿಕೇ ನನ್ನ ಕೂಗಿ ಕರೆದಿದೇ" {೨}
(೨೫) "ನಿನ್ನ ನನ್ನ ಮನವು ಸೇರಿದೆ, ನನ್ನ ನಿನ್ನ ಹೃದಯ ಹಾಡಿದೆ" {೫}
(೨೭) "ನಾನಿರುವುದೆ ನಿಮಗಾಗಿ, ನಾಡಿರುವುದು ನಮಗಾಗೀ, ಕಣ್ಣೆರೇಕೆ, ಬಿಸಿಯುಸಿರೇಕೆ" {೩}
(೩೧) "ಕಾಪಾಡು ಶ್ರೀ ಸತ್ಯನಾರಾಯಣ, ಪನ್ನಗ ಶಯನಾ ಪಾವನ ಚರಣಾ ನಂಬಿದೆ ನಿನ್ನ" {೭}
(೩೩) "ನಾದ ಮಯಾ ಈ ಲೋಕವೆಲ್ಲಾ ನಾದಮಯಾ, ಕೊಳಲಿಂದ ಗೋವಿಂದ ಆನಂದ ತುಂಬಿರಲು" {೫}
(೩೪) "ಸದಾ ಕಣ್ಣಲೇ ಪ್ರಣಯದ ಕವಿತೆ ಹಾಡುವೆ, ಸದಾ ನಿನ್ನಲಿ ಒಳವಿನಾ ಕವಿತೆ ತುಂಬುವೇ" {೮}
(೩೫) "ದೀನ ನ ಬಂದಿರುವೆ, ಬಾಗಿಲಲಿ ನಿಂದಿರುವೆ, ಜ್ಞ್ನಾನ ಭಿಕ್ಷೆಯ ನೀಡಿ ದಯೆ ತೋರಿ ಗುರುವೇ" {೪}

ಮೇಲಿಂದ-ಕೆಳಕ್ಕೆ

(೦೧) "ಬಿಟ್ಟರೆ ಸಿಗದೋನೆ, ಬೆಟ್ಟದಾ ಪುರದೋನೆ, ಬೀರಾ ಓ ಬೀರಾ"
(೦೫) "ಹೃದಯದಲಿ ಇದೇನಿದೂ ನದಿಯೊಂದು ಓಡಿದೆ?" {೬} (ಕೆಳಗಿಂದ ಮೇಲಕ್ಕೆ)
(೦೬) "ಅಮ್ಮ ನೀನು ನಮಗಾಗಿ, ಸಾವಿರ ವರುಷ ಸುಖವಾಗಿ ಬಾಳಲೆಬೇಕು ಈ ಮನೆ ಬೆಳಕಾಗಿ" {೬}
(೦೭) "ಆಟವೇನೋ ನೋಟವೇನೋ ನನಗೆ ಹೇಳಿದ ಮಾತೇನೂ, "
(೦೮) "ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ, ಕಣ್ಣಲ್ಲೇ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ" {೮}
(೦೯) "ಹೇಳಿದ ಮಾತೆ ಕೇಳಿ, ಇದು ಹೇಳಿದ ಮಾತೆ ಕೇಳಿ, ಆದರು ಹೇಳುವೆ ಕೇಳಿ" {೫} (ಕೆಳಗಿಂದ ಮೇಲಕ್ಕೆ)
(೧೦) "ಜನರಿಂದ ನಾನು ಮೇಲೆ ಬಂದೆ, ಜನರನ್ನೇ ನನ್ನ ದೇವರೆಂದೆ" {೪}
(೧೧) "ಕಾವೇರಿ ಏಕೆ ಓಡುವೇ, ನನ್ನಲ್ಲಿ ಪ್ರೀತಿ ಇಲ್ಲವೇ, ನಿನಗಾಗಿಯೇ ನಾ ಬಳುವೇ" {೪}
(೧೪) "ಕಾವೇರಿ ತೀರದಲ್ಲಿ ಒಂದು ಕಾಡು, ಆ ಕಾಡೊಂದು ಮೃಗಗಳ ಬೀಡು" {೫}
(೧೫ಎ) "ಏನೇನೋ ಆಸೆ, ನೀ ತಂದಾ ಭಾಷೆ, ಇಂದು ಹೊಸತನ ತಂದು ತನು ಮನ ಕೂಗುತಿದೆ ಬಾ ಎಂದು ನಿನ್ನ" {೫}
(೧೬) "ಶ್ರೀಕಂಠಾ ವಿಷಕಂಠಾ, ಲೋಕವನುಳಿಸಲು ವಿಷವನು ಕುಡಿದಾ, ನಂಜುಂಡೇಶ್ವರನೇ" {೮}
(೧೭) "ಯಾರೇ ಕೂಗಾಡಲಿ ಊರೇ ಹೋರಾಡಲಿ ನಿನ ನೆಮ್ಮದಿಗೆ ಭಂಗವಿಲ್ಲ" {೭}
(೨೧) "ವಿಶ್ವನಾಥನು ತಂದೆಯಾದರೆ ವಿಶಾಲಾಕ್ಷಿ ತಾಯಿ ಅಲ್ಲವೇ?" {೭}
(೨೨) "ಕಣ್ಣೀರ ಧಾರೆ ಇದೇಕೆ ಇದೇಕೆ. ನನ್ನೊಲವಿನಾ ಹೂವೆ ಈ ಶೋಕವೇಕೆ?" {೫}
(೨೬) "ನೀ ಬಂದು ನಿಂತಾಗ ನಿಂತು ನೀ ನಕ್ಕಾಗ ನಕ್ಕು ನೀ ಸೆಳೆದಾಗ ಸೋತೇ ನಾನಾಗ" {೬}
(೨೮) "ಹುಟ್ಟಿದರೇ ಕನ್ನಡ ನಾಡಲಿ ಹುಟ್ಟಬೇಕು, ಮೆಟ್ಟಿದರೇ ಕಣ್ಣಡ ಮಣ್ಣ ಮೆಟ್ಟ ಬೇಕು" {೪}
(೨೯) "ಒಲವೆ ಜೀವನ ಸಾಕ್ಶಾತ್ಕಾರ, ಒಲವೇ ಮರೆಯದ ಮಮಕಾರಾ" {೪}
(೩೦) "ಕಣ್ಣು ರೆಪ್ಪೆ ಒಂದನೊಂದು ಮರೆವುದೇ? ಅದು ಎಂದಾದರೂ ಅಗಲಿ ಬೇರೆ ಇರುವುದೇ?" {೫}
(೩೨) "ಭಗವಂತ ಕೈಕೊಟ್ಟ ದುಡಿಯೋಕಂತ, ಅದನ್ಯಾಕೆ ಹೊಡೆಯುವೇ ಹೊಡೆಯೋಕಂತಾ" {೫}