ಡಿಕೆಎನ್ ಮೇಷ್ಟ್ರು ಮತ್ತವರ ನಗು ಭಾಗ ೨

ಡಿಕೆಎನ್ ಮೇಷ್ಟ್ರು ಮತ್ತವರ ನಗು ಭಾಗ ೨

ಬರಹ

ಅಮಾನ್ ಎಲ್ಲರೆದುರು ಠೀವಿಯಿಂದ 'ನೋಡಿದ್ರ ಮೇಷ್ಟ್ರು ಹೆದರಿಕೊಂಡುಬಿಟ್ರು' ಎಂದು ಬೀಗಿದ .ಅಂದಿನಿಂದ ಹುಡುಗರನ್ನ ಹೊದೆಯುವುದನ್ನ ಬಿಟ್ಟು ಬಿಟ್ರು ಡಿಕೆಎನ್ ಮೇಷ್ಟ್ರು."ಸಾರ್ ಸಾರ್ ಇವ್ನು ಬೈತ ಇದಾನೆ ಸಾರ್",ಸ್ಟಾಪು ರೂಮಿನಲ್ಲಿ ಕೂತಿದ್ದ ಡಿಕೆಎನ್ ಮೇಷ್ಟ್ರಿಗೆ ರಮೇಶ್ ನ ಕಂಪ್ಲೇಂಟ್ ಬಂತು ."ಏನಂತ ಬೈದ್ನೋ ಇವ್ನು" ."ಸಾರ್ ನನ್ಮಗನೇ ಅಂತಾನೆ ಸಾರ್".ಅಂದ ರಾಜೇಶ್ .ಮೇಷ್ಟ್ರು ರಾಜೀವನ ಕಡೆ ತಿರುಗಿ "ಬೈದ್ಯೇನೋ" ಎಂದು ಕೇಳಿದ್ರು .'ಏನೀಗ' ಅನ್ನೋ ಥರದಲ್ಲಿ ರಾಜೀವ ನೋಡುತ್ತಿದ್ದ ."ಹೂ೦ ಸರಿ .ನನ್ನ ಮಗನೆ ಅಂತ ಅಂದ್ರೆ ಈ ರಾಜೇಶ್ ನಿನ್ನ ಮಗ ಅಂತ ಆದ ನೀನು ಅವನಪ್ಪ ಆದೆ .ಅಪ್ಪ ಅದೊನು ಏನು ಮಾಡ್ತಾನೋ ರಾಜೇಶ"? ಕೇಳಿದ್ರು ಮೇಷ್ಟ್ರು. "ಅಪ್ಪ ಚೆನ್ನಾಗಿ ನೋಡ್ಕೋತಾರೆ.ಪೆನ್ನು ಪುಸ್ತಕ ಪೆನ್ಸಿಲ್ ಕೊಡಿಸ್ತಾರೆ ಸಾರ್ "."ಕೇಳಿದ್ಯ ರಾಜೀವ, ನೀನು ಈಗ ಇವನಿಗೆ ಅಪ್ಪ ಅಲ್ವ, ನಿಂಗೆ ಏನು ಬೇಕೋ ಕೇಳೋ ರಾಜೇಶ ಮೊನ್ನೆ ಜ್ಯಾಮಿಟ್ರಿ ಬಾಕ್ಸ್ ಬೇಕು ಅಂತಿದ್ಯಲ್ಲ ಕೇಳು ಅದನ್ನ ಅವನಿಗೆ" ರಾಜೀವನ ಕಣ್ಣಲ್ಲಿ ನೀರು ಒಸರುತ್ತಿತ್ತು .ಮೇಷ್ಟ್ರ ಧ್ವನಿ ತಣ್ಣಗಿದ್ದರೂ ಅದರಲ್ಲಿ ಕೋಪ ತುಂಬಿರುವುದು ಕಾಣುತ್ತಿತ್ತು . "ಹೌದು ರಾಜೀವಾ ರಾಜೇಶನ ಅಮ್ಮನಿಗೆ ನಲವತ್ತೆಂಟು ವರ್ಷ ನಿನಗೆ ಇನ್ನೂ ಹದಿನಾಲ್ಕು ಅದ್ಯಾವಾಗ ಮಾಡುವೆ ಮಾಡಿಕೊಂಡೆ ಇರು ನಿಮ್ಮಪ್ಪ ಇಲ್ಲೇ ಹೊಲದಲ್ಲಿ ಇದಾರೆ ಕೇಳ್ತೀನಿ ಯಾವಾಗ ಮಾಡುವೆ ಮಾಡಿದ್ರಿ ಅಂತ " ಎಂದರು "ಸಾರ್ ಇನ್ನೊಂದು ಸರ್ತಿ ಅನ್ನಲ್ಲ ಸಾರ್ ತಪ್ಪಾಯ್ತು " ರಾಜೀವ ಅಳುತ್ತ ಹೇಳಿದ .ಮೇಷ್ಟ್ರು "ಈ ರೀತಿ ಬೈಕೊಬಾರ್ದು ಕಣ್ರಯ್ಯ ನೀವು ಆ ಸಗಣಿ ಥರ ಆಗೊಗ್ತಿರ. ಹೋಗಿ, ಆಡಿಕೊಳ್ರಿ"ಅಂದು ಕಳಿಸಿಬಿಟ್ರು .******
******ಇದೆನ್ನೆಲ್ಲಾ ನೋಡುತ್ತಿದ್ದ ಸಹೋದ್ಯೋಗಿ ಜಿ ಎ ಎಂ "ಎನ್ ಸರ್ ಹೊಡೀಲಿಲ್ಲ ಬೈಲಿಲ್ಲ ಬರೇ ಮಾತಲ್ಲೇ ಅಳಿಸ್ಬಿತ್ರಿ ಆ ಹುಡುಗನ್ನ .ನೀವು ನೀವೇನ ಆ ಡಿ ಕೆ ಎನ್ ಎಲ್ಲಿ ಹೋದ್ರು ಸರ್ ".ಇಲ್ಲ ಜಿ ಎ ಎಂ ಈಗ್ಲೂ ಹೊಡೆದು ಬುಧ್ಧಿ ಹೇಳೋಣ ಅನ್ನಿಸುತ್ತೆ ಚೆನ್ನಾಗಿ ಓದೋ ಹುಡುಗ್ರು ಅಡ್ಡ ದಾರಿ ಹಿಡಿತಿದ್ದಾಗ ಸುಮ್ನೆ ಇರೋದು ಹೇಗೆ ಹೇಳಿ /ಅದಕ್ಕೆ ಹೊಡೆದು ಹೇಳ್ತಿದ್ದೆ .ಈಗ ಹುಡುಗರು ಸರಿ ಇಲ್ಲ .ಈ ಸಿನಿಮಾಗಳು ನೋಡಿ ಹಾಳಾಗ ಹೋದ್ರೇನೋ ಅನ್ಸುತ್ತೆ .ಮೊನ್ನೆ ಆ ಸಿ ಸೆಕ್ಷನ್ನಿನಲ್ಲಿ ಹೊಡೆಯಕ್ಕೆ ಕೈ ಎತ್ತಿದ್ದಾರೆ ಕೈನೆ ಹಿಡಕೊಂಡ ಹುಡುಗ 'ನಮ್ಮಪ್ಪನೆ ನನ್ನ ಹೋದೆಯಲ್ಲ ನೀವ್ಯಾರು ಸರ್ ಹೊಡೆಯಕ್ಕೆ' ಅಂತಾನೆ ನಿಜ ನಾನ್ಯಾರು ಹೊಡೆಯಕ್ಕೆ .ನಾವು ಬರೋದು ಪಾಠ ಹೇಳಕ್ಕೆ .ಪಾಠ ಹೇಳಿದ್ವಾ ಟೆಸ್ಟ್ಗಳು ಇನ್ನೊಂದು ಮಾಡಿದ್ವಾ, ಹೇಗೋ ರೆಸಲ್ಟ್ ತಂದ್ವಾ, ಮನೆಗೆ ಹೋದವಾ ಅಷ್ಟೇ ಅನ್ನಿಸಿಬಿಟ್ಟಿದೆ. ಒಂದ್ಹತ್ತು ಒಳ್ಳೆ ಹುಡುಗರು ಸಿಕ್ಕರೆ ಸಾಕು ನಮಗೆ"."ಬಂದ ಹೊಸದರಲ್ಲಿ ಹೇಗಿದ್ದೆ ಗೊತ್ತಲ್ವಾ ನಿಮಗೆ .ಇಡೀ ಸ್ಕೂಲಿನ ಗೋಡೆಗಳ ಮೇಲೆ ನನ್ನ ನಿಮ್ಮ ಜಿ ಅರ್ ಮೇಷ್ಟ್ರು ,ಡಿ ಎಸ್ ಮೇಡಂ ಹೆಸರುಗಳು ಇರ್ತಿದ್ವು 'ಡಿ ಕೆ ಎನ್ - ಕೆ ಡಿ ','ಜಿ ಅರ್ - ಬೋಡಿ ', 'ಜಿ ಎ ಎಂ ರೌಡಿ' ಹೀಗೆ ಇನ್ನು ಏನೇನೋ ನಾವುಗಳು ನಕ್ಕು ಮುಂದೆ ಹೋಗ್ತಿದ್ವಿ .ಅದೇ ಹುಡುಗರು ನನ್ನ ಮನೆಗೆ ಓದಿಕೊಳ್ಳಕ್ಕೆ ಬಂದ್ರು.ನಾನೂ ಅವ್ರನ್ನ ಮನೇಲೆ ಇಟ್ಕೊಂಡು ಓಡಿಸ್ತ್ದೆ .ಈಗ ಅವರೆಲ್ಲ ಲಾಯರ್ರು ಡಾಕ್ಟ್ರು ಮೇಷ್ಟ್ರುಗಳಾಗಿದಾರೆ ಚೆನ್ನಾಗಿದಾರೆ.ಅವರೆಲ್ಲ ಈಗ್ಲೂ ಫೋನ್ ಮಾಡ್ತಾರೆ .ಆ ನಾಗರಾಜ ಗೊತ್ತಲ್ಲ ನಾವೆಲ್ಲಾ ಗಿಟ್ಟ ನಾಗರಾಜ ಅಂತ ಕರೀತಿದ್ವಲ್ಲ ಅವ್ನು ಈಗ ಅದ್ಯಾವುದೋ ಕಂಪನಿ ಮಾನೇಜರ್ ಅಂತೆ .ಸಾಕು ಅಂತ ನಾಕು ಹುಡುಗ್ರು .ಇವಾಗಿನ ಹುಡುಗ್ರನ್ನ ನೋಡ್ತಿದಿರಲ್ಲ ಈ ವಯಸ್ಸಿಗೆ ಬೀಡಿ ಸಿಗರೇಟು ,ಲವ್ ಲೆಟರ್ರು ,ಓಡಿ ಹೋಗೋದು ಇಲ್ಲದ ಆಟಗು ಆಡ್ತಾರೆ. ನೋಡಿ ನೋಡಿ ಸಾಕಾಗಿ ಹೋಗಿದೆ .ಆ 9 ಬಿ ಸೆಕ್ಷನ್ ಸೀನ ಇದಾನಲ್ಲ ರುಕ್ಮಿಣಿಗೆ ಮೊಬೈಲ್ ಕೊಡಿಸಿದಾನೆ ಲವರ್ಸ್ ಡೆ ಗಿಫ್ಟ್ .ಎಲ್ಲಿಗೆ ಬಂತು ನೋಡಿ ".
"ನೀವ್ ನಾಕು ಬಾರಿಸ್ಬಾರ್ದಗಿತ್ತ ಸರ್ ಅವನಿಗೆ ".
"ಅವರಪ್ಪನ್ನ ಕರೆಸಿದ್ದೆ 'ಅಯ್ಯೋ ಮಾಡ್ಲಿ ಬಿಡಿ ಸರ್ ಇವಾಗಲ್ದೆ ಇನ್ಯಾವಾಗ ಆಡ್ತಾರೆ ವಯಸ್ಸು ನಾನು ದುಡಿಯೋ ದುಡ್ಡೆಲ್ಲಾ ಯಾರಿಗೆ? ,ಆದರೂ ತಪ್ಪೇ ಏ ಹಾಗೆಲ್ಲ ಮಾಡಬಾರದು 'ಅಂತಷ್ಟೇ ಅಂದ .ಅವರಪ್ಪನಿಗೆ ಇಲ್ದೆ ಇರೋ ಕಾಳಜಿ ನನಗ್ಯಾಕೆ ಸರ್ ?