ಡಿ.ದೇವರಾಜ್ ಅರಸರು
ಕವನ
ಡಿ.ದೇವರಾಜ್ ಅರಸರು ಕರ್ನಾಟಕದ ಮಾಜಿ ಮುಖ್ಯ ಮಂತ್ರಿಗಳು. ಅವರನ್ನು ಮಾಜಿ ಅನ್ನಬಹುದು ಆದರೆ ದಿವಂಗತ ಅನ್ನಲು ನನ್ನ ಮನಸ್ಸು ಒಪ್ಪುವುದಿಲ್ಲ. ಜನ ಮಾನಸದಲ್ಲಿ ಚಿರಸ್ಥಾಯಿ ಅವರು. ಅಪರೂಪದ ಅವರನ್ನು ನೆನೆಯಲು ಈ ಚುಟುಕು ರೂಪ.
ನೆನೆಯೋಣ
ಬಡವರ ಕಣ್ಣು ಒರೆಸಿದ ನಮ್ಮ ದೇವರಾಜ್ ಅರಸು
ಸಿರಿವಂತರಿಗೆ ಮಾಡಿದರವರು ಇರುಸು ಮುರುಸು
ಫಲಾನುಭವಿಗಳು ಅವರನ್ನು ನೆನೆಯುವುದು ಲೇಸು
ಮತ್ತೆ ಹುಟ್ಟಲಿಲ್ಲ ಅವರು ಅದೇ ಇಂದಿನವರ ಲಾಸು
ಧೀಮಂತನವ
ಮಹಾನುಭವ ಜಾರಿಗೊಳಿಸಿದನವ ಭೂ ಸುಧಾರಣೆ
ಬೇರೇ ಬರಹವನ್ನೇ ಬರೆದನು ಹಿಡಿದು ಬಡವರ ಹಣೆ
ಅಂತಹ ಧೀಮಂತ ನಾಯಕರ ಇತ್ತೀಚೆಗೆ ನಾಕಾಣೆ
ಇದ್ದರು ಅವರೇನಿದ್ದರೂ ಆ ಅರಸುವಿನಲ್ಲಿ ನಾಲ್ಕಾಣೆ
ನಾಯಕ ಅವ
ಇವನ ಹೆಸರು ಬಡವರ ಆತ್ಮ ಅಭಿಮಾನದ ಪ್ರತೀಕ
ಬಡತನದಲ್ಲಿ ಬಳುತ್ತಿದ್ದವರಿಗೆ ಅವನಾಗಿದ್ದ ನಾಯಕ
ಇಂದಿನವರು ಮುಂದುವರಿಸಬೇಕು ಅವರ ಕಾಯಕ
ನಗು ಮುಖವ ಕಾಣುವುದಾಗ ಕಡು ಬಡವರ ಲೋಕ