ಡೋಕ್ಲಾ

ಡೋಕ್ಲಾ

ಬೇಕಿರುವ ಸಾಮಗ್ರಿ

ಹುರಿದ ಬನ್ಸಿ ರವೆ ೧ ಕಪ್, ಕಡಲೇ ಹಿಟ್ಟು ೨ ಕಪ್, ಮೆಣಸಿನ ಹುಡಿ - ೧ ಚಮಚ, ತೆಂಗಿನ ತುರಿ ೧ ಕಪ್, ಕತ್ತರಿಸಿದ ಪುದೀನಾ ಸೊಪ್ಪು - ೧ ಚಮಚ, ಕತ್ತರಿಸಿದ ಕೊತ್ತಂಬರಿ ಸೊಪ್ಪು - ೧ ಚಮಚ, ಗರಮ್ ಮಸಾಲಾ - ಅರ್ಧ ಚಮಚ, ಎಣ್ಣೆ - ೪ ಚಮಚ, ಸಾಸಿವೆ - ೧ ಚಮಚ, ಇಂಗು ಅರ್ಧ ಚಮಚ, ಅಡುಗೆ ಸೋಡಾ - ಅರ್ಧ ಚಮಚ, ಮೊಸರು - ೩ ಕಪ್, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ

ಬಾಣಲಿಯಲ್ಲಿ ಎಣ್ಣೆ ಕಾಯಿಸಿ, ಸಾಸಿವೆ, ಇಂಗಿನ ಒಗ್ಗರಣೆ ಮಾಡಿ. ಒಗ್ಗರಣೆಗೆ : ಕಡಲೆ ಹಿಟ್ಟು, ರವೆ ಹಾಕಿ ಸ್ವಲ್ಪ ಬಿಸಿ ಮಾಡಿ, ಆರಿದ ನಂತರ ಉಪ್ಪು, ಮೆಣಸಿನ ಹುಡಿ, ಗರಮ್ ಮಸಾಲಾ, ತೆಂಗಿನ ತುರಿ, ಪುದೀನಾ ಸೊಪ್ಪು, ಕೊತ್ತಂಬರಿ ಸೊಪ್ಪು ಹಾಕಿ ಕಲಸಿ. ಈ ಮಿಶ್ರಣಕ್ಕೆ ಮೊಸರು, ಸೋಡಾ ಹಾಕಿ ಇಡ್ಲಿ ಹಿಟ್ಟಿನ ಹದಕ್ಕೆ ಕಲಸಿ. ತುಪ್ಪ ಸವರಿದ ತಟ್ಟೆಗೆ ಮಿಶ್ರಣವನ್ನು ಸುರಿದು ಹಬೆಯಲ್ಲಿ ಸುಮಾರು ೧೫ ನಿಮಿಷಗಳವರೆಗೆ ಬೇಯಿಸಿ. ಆರಿದ ಮೇಲೆ ಬೇಕಾದ ಆಕಾರದಲ್ಲಿ ಕತ್ತರಿಸಿದರೆ ರುಚಿಕರವಾದ ಡೋಕ್ಲಾ ರೆಡಿ. ಇದು ಮೂಲತಃ ಗುಜರಾತಿ ತಿನಸು.