ತಂತಿ ಹರಿದ ವೀಣೆ....

ತಂತಿ ಹರಿದ ವೀಣೆ....

ಕವನ

 

-೧-
ಪ್ರಿಯ,
ನನ್ನ ಹೃದಯ 
ತಂತಿ ಹರಿದ ವೀಣೆ
ಒಡಕು ರಾಗದ ವಾದನ
ನನ್ನ ನೋವಿನ ಹಾಡ ಸಾಲನು
ನುಡಿಸಲೊಂದು ಸಾಧನ
 
-೨- 
ಇನಿಯನಿಲ್ಲದ ಮೂಕ ವೇದನೆ 
ಬಿಡದೆ ಎದೆಯನು ಕಾಡಿದೆ
ಸನಿಹವಿರುವ ಮುರುಕು ವೀಣೆಗೆ 
ಮರುಕ ಮಿಡಿಸುವ ಹಾಡಿದೆ
-ಮಾಲು 
 

Comments