ತಂಪೆಲರರುಹಿಗೆ ಮಾರ್ದವ ನನ್ನೆದೆ
ಬರಹ
ತಂಪೆಲರರುಹಿಗೆ ಮಾರ್ದವ ನನ್ನೆದೆ
ತಿಂಗಳ ಬಿಸುಪಿಗೆ ಬೆಮರಿವೆ ಸುಮಗಳು
ಮುತ್ತಿನ ಮಣಿಯಲಿ ಸುತ್ತಲೂ ನೆರೆದು
ಮೂಡಿತು ಮಲ್ಲಿಗೆ ಮೊಗ್ಗರಳಿ ಮೆಲ್ಲಗೆ
ಪಸರಿಸಿ ಮಧುರ ಸುಧೆಯ ಕಂಪು
ತೇಲಿ ಕೋಗಿಲೆಯ ದನಿಯಲಾಂತು
ಮೀಟಿ ಎದೆಯಲೇಕೋ ತಂತು
ಮಧುರ ನೋವ ಕಂಪನಾ
ಮತ್ತೆ ಮತ್ತೆ ಮೀಟಿ ತಂತು
ಅಧರ ಸುಧೆಯ ನೆನಪನಾ
ತಂಪೆಲರರುಹಿಗೆ ಮಾರ್ದವ ನನ್ನೆದೆ
ನಿನ್ನಯ ಇನಿದನಿ ಮಾರ್ದನಿಗೆ
ಕಳೆಯಿತು ತಂಪಿನ ತಿಂಗಳು ತಿಂಗಳು
ನೀನಿಲ್ಲದೆ ಹಾಗೇ
ಕೆಂಪಾದಳು ಮೂಡಣದೇ ಉಷೆ ನೀನಾಚಿದ ಹಾಗೇ
ನೆನಪಾದವು ಸಖಿನೀನಿಲ್ಲದೇ ನಿನ್ನಿರವಿನ ಮಾರ್ದನಿಯಾಗೇ