ತಪ್ಪಿಸಿದೆ ರಜೆಯನ್ನು

ತಪ್ಪಿಸಿದೆ ರಜೆಯನ್ನು

ಕವನ

ಸಮವಸ್ತ್ರ ಧರಿಸಿ ಬಂದಾಯ್ತು ಶಾಲೆಗೆ

ಹೋಗಬೇಕಿದೆ ಇನ್ನು ತರಗತಿಯ ಒಳಗೆ

ಸುರಿಸುತಿದೆ ಮಳೆಯ ಬಾನಿಂದ ಮುಗಿಲು

ಸಂಜೆಯೆನಿಸುತಿದೆ ಮುಸುಕಿರುವ ಹಗಲು

 

ಮಳೆರಾಯ ನನಗುಂಟು ನಿನ್ನಲ್ಲಿ ದೂರು

ನಾ ಬರುವ ಮೊದಲೇ ಸುರಿದಿಲ್ಲ ಜೋರು

ಕಾಯುತ್ತ ಕುಳಿತಿದ್ದೆ ಮಳೆಗಾಗಿ ರಜೆಗೆ

ತಡವಾಗಿ ಸುರಿದು ತಪ್ಪಿಸಿದೆ ನಮಗೆ

 

ನಾ ಮರಳಿ ಹೋಗುತಿರೆ ಸುರಿಯದಿರು ಈ ರೀತಿ

ಮರೆತಿರುವೆ ನಾ ತರಲು ಜೊತೆಯಲ್ಲಿ ಛತ್ರಿ

ಸಂತಸವು ಹನಿ ಬೀಳೆ ಚಾಚಿರುವ ಕೈಗೆ

ನೀಡುತಿಹೆ ಜೀವಜಲ ನಮನವಿದೋ ನಿನಗೆ||

 

-ಪೆರ್ಮುಖ ಸುಬ್ರಹ್ಮಣ್ಯ ಭಟ್ 

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್