ತಮಿಳು ಕುಳಂಬು ಮರಾಟಿ ರಾಜನಿಂದ ಸಾಂಬಾರ್ ಆದ ಕತೆ
ಬರಹ
ಹದಿನೆಂಟನೇ ಶತಮಾನದಲ್ಲಿ ತಂಜಾವೂರಿನ ರಾಜನಾಗಿದ್ದ ಮರಾಟಾ ಕುಲದ ಶಾಹುಜಿ ಮಹಾರಾಜನಿಗೆ ಊಟಕ್ಕೆ ಆಮ್ಟಿ ಅಂದರೆ ಬಹಳ ಇಷ್ಟ. ಕೊಂಕಣ ಪ್ರದೇಶದಿಂದ ಆಮದಿಸಿದ ಕೋಕಂ ಆಮ್ಟಿಯ ವಿಶಿಷ್ಟ ರುಚಿಗೆ ಕಾರಣ. ಒಮ್ಮೆ ಈ ಕೋಕಂನ ದಾಸ್ತಾನು ಮುಗಿದಾಗ ಸ್ವತಹ ಪಾಕಶಾಸ್ತ್ರ ಪ್ರವೀಣನಾಗಿದ್ದ ಶಾಹುಜಿಯು ಸ್ಥಳೀಯರ ಸಲಹೆ ಮೇರೆಗೆ ತೊಗರಿಬೇಳೆ, ತರಕಾರಿ, ಮಸಾಲೆ ಪದಾರ್ಥಗಳು, ಮತ್ತು ಹುಣಿಸೆಹಣ್ಣು ಹಾಕಿ ಆಮ್ಟಿಯನ್ನು ತಯಾರಿಸಿದ. ಇದು ರಾಜಪರಿವಾರದ ಎಲ್ಲರಿಗೂ ಬಹಳ ಸೇರಿತು. ಅದೇ ಸಮಯ ಅಲ್ಲಿಗೆ ಭೇಟಿಗೆ ಬಂದಿದ್ದ ಮಹಾರಾಜನ ಸೋದರನೆಂಟ ಸಾಂಬಾಜಿಯ ಗೌರವಾರ್ಥ ಈ ಹೊಸ ಬಗೆಯ ಆಮ್ಟಿಯನ್ನು ಸಾಂಬಾರ್ ಎಂದು ಕರೆಯಲಾಯಿತು. ( ವಿಕಿಯಲ್ಲಿ ಓದಿದ್ದು, ಎಷ್ಟರ ಮಟ್ಟಿಗೆ ಸರಿ ಗೊತ್ತಿಲ್ಲ ).