ತಾಜ್ ಮಹಲ್ ಥರಾನೇ ಆದರೆ....
ತಾಜ್ಮಹಲ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ..? ಮೊಘಲ್ ರಾಜ ಶಾಜಹಾನ್ ಕಟ್ಟಿಸಿದ ಪ್ರೇಮ ದ್ಯೋತಕ ಬಿಳಿ ಬಣ್ಣದ ಅಮೃತಶಿಲೆಯ ಈ ಸ್ಮಾರಕವನ್ನ ನೋಡೋದಿಕ್ಕೆ ವರ್ಷಂಪ್ರತಿ ಲಕ್ಷಾಂತರ ಜನರು ಬರುತ್ತಿರುತ್ತಾರೆ. ಆದರೆ ಭಾರತದ ದೇಶದಲ್ಲಿ ತಾಜ್ಮಹಲ್ ಅನ್ನೇ ಹೋಲುವ ಒಂದು ಸ್ಮಾರಕ ಅದೂ ಸಹ ಮೊಘಲರೇ ಕಟ್ಟಿಸಿದ್ದು ಎಂದರೆ ನಂಬಲೇಬೇಕು. ಜಗದ್ವಿಖ್ಯಾತ ತಾಜ್ಮಹಲ್ನಿಂದ 1000 ಕಿಲೋಮೀಟರ್ ದೂರದಲ್ಲಿರುವ ಔರಂಗಾಬಾದ್ನಲ್ಲಿ (ಈಗ ಸಂಭಾಜಿನಗರ್) ಇದರ ಹೆಸರು ಬೀಬಿ-ಕಾ-ಮಕ್ಬರಾ. 1660 ರಲ್ಲಿ ಔರಂಗಜೇಬ್ ತನ್ನ ಪತ್ನಿ ದಿಲ್ರಾಸ್ಗಾಗಿ ಆರಂಭಿಸಿದ ಈ ಸ್ಮಾರಕ ಆತನ ಮಗ ಅಝಿಮ್ ಶಾ ಮುಂದುವರಿಸಿದ.
ಮೊಘಲ್ ರಾಜ ಔರಂಗಜೇಬ್ನ ತಾಯಿಯಾದ ಮುಮ್ತಾಝ್ಳ ಸ್ಮಾರಕವಾದ ತಾಜ್ಮಹಲ್ ಅತ್ಯದ್ಭುತ ವಾಸ್ತುಶಿಲ್ಪಕ್ಕೆ ಹೆಸರಾಗಿದ್ದರೆ, ಬೀಬಿ ಮಕ್ಬರಾ ಮಾಡೋವಾಗ ಔರಂಗಜೇಬ್ ಅಂತಹ ಗೋಜಿಗೆ ಹೋಗಿರಲಿಲ್ಲ. ಅದಾಗ್ಯೂ ಕೆಲವು ತಾಜ್ಮಹಲ್ನಂತೆ ಕೆತ್ತನೆಗಳಲ್ಲಿ ಸೂಕ್ಷ್ಮ ಜಾಲರಿಗಳು, ಗುಮ್ಮಟ, ಮಸೀದಿಗಳಿವೆ. ದೂರದಿಂದ ಕಂಡಾಗ ಸಣಕಲು ತಾಜ್ಮಹಲ್ ನಂತೆ ಕಾಣಿಸುತ್ತದೆ.
ಬೀಬಿ ಕಾ ಮಕ್ಬರಾ ಮಹಾರಾಷ್ಟ್ರದ ಔರಂಗಾಬಾದ್ನಲ್ಲಿದೆ. ಇಲ್ಲಿಂದ ೨೫ ಕಿಮೀ ದೂರದಲ್ಲಿ ಎಲ್ಲೋರಾ ಗುಹಾಂತರ ದೇವಾಲಯವಿದೆ. ತಾಜ್ಮಹಲ್ ತರಾನೇ ಇರೋ ಬೀಬಿ ಕಾ ಮಕ್ಬರಾಕ್ಕೆ ಹೋಗಿ, ಗೆಳೆಯರಿಗೆ ನಾನು ತಾಜ್ ಮಹಲ್ ಹೋಗಿದ್ದೀನಿ ಕಣೋ ಅಂತಾ ಒಂದು ಸಣ್ಣ ಚಮಕ್ ಕೊಡಿ..
ಚಿತ್ರ- ಬರಹ: ಸುಭಾಸ್ ಮಂಚಿ, ಬಂಟ್ವಾಳ