ತಾಳ್ಮೆ ಮತ್ತು ಬಲಹೀನತೆ

ತಾಳ್ಮೆ ಮತ್ತು ಬಲಹೀನತೆ

ಬರಹ

ಅತೀ ತಾಳ್ಮೆ ಬಲಹೀನತೆ ಅಂತಾರೆ.ನಮ್ಮಲ್ಲಿ ಕೆಲವರಿಗೆ ಈ ರೀತಿಯ ಮನೋರೋಗ(?) ಇರುತ್ತೆ.ನಮ್ಮನ್ನ ನಮ್ಮೆದುರೆಗೆ ಬೈದರೂ ನಾವೇನೂ ಹೇಳದೆ (ಯಾಕೆ ಬೈತೀರಾ?,ಅಂತ ಕೇಳ್ತಾರೆ ಆದ್ರೆ ಎದುರಿಸಿ ಮಾತಾಡಲ್ಲ)ಸುಮ್ಮನೆ ನಿಂತಿರ್ತೀವಿ.ಅವರು ಬೈದಾದ ಮೇಲೆ, "ಹೋಗ್ಲಿ ಬಿಡು ಪಾಪ , ಏನೋ ಟೆನ್ಶನ್ ಇತ್ತು ಅನ್ಸುತ್ತೆ, ಇವತ್ತಲ್ಲ ನಾಳೆ ನಿಜ ಅವರಿಗೆ ಗೊತ್ತಾಗತ್ತೆ ಅವಾಗ ಅವರೇ ಪಶ್ಚಾತ್ತಾಪ ಪತ್ಕೊತಾರೆ",ಅಂದುಕೊಂಡು ಬಿಡ್ತಾರೆ.ಬೈದವರು ಹಾಗೆ ಯೋಚಿಸ್ತಾರೋ ಇಲ್ವೋ ಗೊತ್ತಿಲ್ಲ ಇವರು ಮಾತ್ರ ತಾವು ಮಾಡಿದ ಕ್ರಿಯೆಗೆ ತಾವೇ ಕೊಟ್ಟು ಕೊಳ್ಳೋ ಕಾರಣಗಳು."ಪಾಪ!ಸಣ್ಣವನು ಹೋಗ್ಲಿಬಿಡು", "ಅವನಿಗೆ ಇನ್ನೂ ಪ್ರಪಂಚ ಜ್ಞಾನ ಇಲ್ಲ, ಏನೋ ಮಾತಾಡ್ಬೇಕು ಅಂತ ಮಾತಾಡ್ತಾನೆ, ಹೋಗ್ಲಿ ಬಿಡು",ಹೀಗೆಲ್ಲಾ ನಾವೇ ಹೇಳಿಕೊಂಡು ಅವರನ್ನ ಕ್ಷಮಿಸಿ ಬಿಡ್ತೀವಿ.
ನಿಮ್ಮೆದುರೆ ಒಂದೆರಡು ಸಂದರ್ಭಗಳನ್ನ ಹೇಳ್ತಿನಿ.ಒಂದು ಮದುವೆ ಸಮಾರಂಭ, ಇನ್ನೂ ಫಂಕ್ಷನ್ ಶುರು ಆಗಿಲ್ಲ.ನಾವು ಖುಷಿಯಿಂದ ಓಡಾಡಿಕೊಂಡು ಕೆಲಸ ಮಾಡ್ಕೊಂಡು ಇರ್ತಿವಿ.ಇದ್ದಕ್ಕಿದ್ದಂತೆ ನಮ್ಮನೆ ಹಿರಿಯರು ಬಂದು , "ನೀನು ಸ್ವಾರ್ಥಿ,ನಿನಗೆ ಗರ್ವ,ನೀನು ಈ ಜನ್ಮದಲ್ಲಿ ಉದ್ಧಾರ ಆಗಲ್ಲ,ನಂಗೊತ್ತು! ನೀನ್ಯಾಕೆ ನಮ್ಮನ್ನ ನೆಗ್ಲೆಕ್ಟ್ ಮಾಡ್ತಿಯ ಅಂತ, ನಿನಗೆ ಕೆಲಸ ಇದೆ .ಒಳ್ಳೆ ಸಂಬ್ಳ ಬರುತ್ತೆ ಅಂತ ಜಂಭ, ಈಗ್ಲಿಂದ ನೀನು ನಮ್ಮನ್ನ ಮಾತಾಡಿಸಕೂಡದು". ಅಂತ ಬೈತಾರೆ .ನಾವು ಆರೀತಿ ಮಾಡದೆ ಇದ್ರೂ ಕೂಡ ಬೈತಾರೆ.ನಾವು ಮಧ್ಯೆ ಸಮಝಾಯಿಷಿ ಕೊದವುದಕ್ಕೂ ಅವಕಾಶ ಕೊಡದೆ ಬೈದು ಹೋಗ್ತಾರೆ.ನಾವು ಮೌನವಾಗಿ ತಲೆ ತಗ್ಗಿಸಿಕೊಂಡು ನಿಂತಿರ್ತಿವಿ.ಯಾಕೆಂದ್ರೆ ನಮ್ಮ ಬೀಗರ ಕಡೆಯವರು ಒಬ್ಬರು ಅಲ್ಲಿ ನಿಂತು ನೋಡ್ತಾಇರ್ತಾರೆ .ಅವರೆದುರಿಗೆ ಯಾಕೆ ಸುಮ್ಮನೆ ಗಲಾಟೆ ಅಂತ ನಾವು ಮಾತಾಡಲ್ಲ.ನಾವು ಬದಲು ಮಾತಾಡಲ್ಲ ಅನ್ನೋದಕ್ಕೆ ಕೊಡೊ ಕಾರಣಗಳು ಹೀಗಿರುತ್ವೆ,"ನಾನೂ ಕೂಗಾಡಿದರೆ ಸೀನ್ ಕ್ರಿಯೇಟ್ ಆಗುತ್ತೆ.ಅವರ ಮನಸ್ಸಿನಲ್ಲಿದುದನ್ನ ಹೇಳಿದಾರೆ, ನನಗೆ ಆ ಥರ ಭಾವನೆ ಇರ್ಲಿಲ್ಲ, ಮದುವೆ ಸೆಟ್ ಆದಾಗಿನಿಂದ ನಾನು ಅವ್ರಜೋತೆನಲ್ಲೇ ಇದೀನಿ,ಆದರೂ.. ಇರ್ಲಿ ಬಿಡು","ದೊಡ್ಡವರು ಒಂದು ಮಾತು ಅಂತಾರೆ ಅದಕ್ಕೆಲ್ಲಾ ಬೇಜಾರು ಮಾಡ್ಕೊಬಾರದು","ಅವರು ಹೇಳಿದ್ದು ಒಳ್ಳೇದಕ್ಕೆ ಅಂದುಕೊಂಡರೆ ಆಯ್ತಪ್ಪ". ಮನಸ್ಸಿನಲ್ಲಿ ಒಂದು ಸಣ್ಣ ನೋವು ಕಾಣಿಸಿಕೊಂಡು ಅದನ್ನ ತೋರಗೊಡದೆ ಓಡಾಡಿಕೊಂಡು ಇದ್ದು ಬಿಡ್ತೀವಿ.ಯಾರೋ ಒಬ್ಬರು ಇದನ್ನ ನೋಡಿ 'ನಿಂಗೆ ತುಂಬಾ ತಾಳ್ಮೆ ಇದೆಯಪ್ಪ ಸುಮ್ಮನೆ ಗಲಾಟೆ ಆಗೋದನ್ನ ತಪ್ಪಿಸದೆ" ಅಂತಾರೆ .ಆಕ್ಷಣಕ್ಕೆ ನಾವು ಹೀರೋ ಅಗ್ಬಿಡ್ತಿವಿ.ನಾವು ಈ ಹೀರೋಯಿಸಂ ನ ಎಕ್ಸ್ ಪೆಕ್ಟ್ ಮಾಡ್ತಿದ್ವಾ?ಗೊತ್ತಿಲ್ಲಾ.
ಇನ್ನೊಂದು ಸಮಾರಂಭದಲ್ಲಿ,(ನಮ್ಮ ಮನೆಯವರದೇ ಅಂದುಕೊಳ್ಳಿ) ನಾವು ಎಲ್ಲಾ ಜವಾಬ್ದಾರಿ ತಗೊಂಡು ಕೆಲಸ ಮಾಡಿ ಫಂಕ್ಷನ್ ನ ನಿಭಾಯಿಸ್ತಿವಿ . ನಾವು ಅವರಿಂದ ಏನೂ ನಿರೀಕ್ಷೆ ಮಾಡಲ್ಲ ಯಾಕೆಂದ್ರೆ ಅದು ನಮ್ಮ ಮನೇನೆ ಅನ್ನೋ ಭಾವ ನಮ್ಮಲ್ಲಿರುತ್ತೆ.ಕೆಲಸ ಎಲ್ಲ ಮಾಡಿಸಿಕೊಂಡ ಮೇಲೆ ಇನ್ಯಾರಿಗೋ ಆ ಕ್ರೆಡಿಟ್ ಕೊಟ್ಟು ಬಿಡ್ತಾರೆ ಮತ್ತು ಅದನ್ನ ನಮ್ಮೆದುರಿಗೆ ಹೇಳ್ತಾರೆ.'ನೀನೂ ಮಾಡ್ದೆ ಅಂತ ಇಟ್ಕೋ ,ಆದ್ರೆ ಅವನು ಇಲ್ಲ ಅಂದಿದ್ರೆ ಕೆಲಸಗಳು ಆಗ್ತಾ ಇರ್ಲಿಲ್ಲ,ಅಂದು ಬಿಡ್ತಾರೆ.ನಾವೇನೂ ಮಾತಾಡೋ ಸ್ಥಿತಿಯಲ್ಲಿ ಇರಲ್ಲ.ಅದೊಂದು ರೀತಿ ವಿಚಿತ್ರ ಪರಿಸ್ಥಿತಿ."ಹೋಗ್ಲಿ ಬಿಡು ಫಂಕ್ಷನ್ ಚೆನ್ನಾಗಿ ಆಯ್ತಲ್ಲ ಅಷ್ಟು ಸಾಕು ,ಯಾರು ಮಾಡಿದರೇನು",ಅಂದುಕೊಂಡು ಬಿಡ್ತೀವಿ.
ಅವನು ಎಲ್ಲಾನೂ ಪಾಸಿಟಿವ್ ಆಗಿ ತಗೋತಾನೆ .ಅವನಿಗೆ ತಾಳ್ಮೆ ಜಾಸ್ತಿ ಅನ್ನೋದು ಆ ವ್ಯಕ್ತಿಯ ಕ್ವಾಲಿಫಿಕಶನ್ ಆಗಿಬಿಡುತ್ತೆ.ಎಲ್ರೂ ಆ ವ್ಯಕ್ತಿಯನ್ನ ಇಷ್ಟ ಪಡ್ತಾರೆ ಮತ್ತು ಗೊತ್ತೋ ಗೊತ್ತಿಲ್ಲದೆಯೋ ನೋಯಿಸ್ತಾರೆ.ಆವ್ಯಕ್ತಿ ಆ ಭಾವನೆಗಳನ್ನು ತನ್ನ ರಕ್ತದೊಳಗೆ ಬೇರೆಸ್ಕೊಂದು ಬಿಡ್ತಾನೆ ಮತ್ತು ಅದರಿಂದ ಹೊರಬಂದು ಎದುರಿಸಿ ನೋಲ್ಲೋ ಶಕ್ತಿನ ಕಳಕೊಂಡುಬಿಟ್ಟಿರ್ತಾನೆ . ಮತ್ತು ಅದು ನನ್ನ ಹೆಮ್ಮೆ ಅಂದುಕೊಂಡು ಬಿಡ್ತಾನೆ.ಒಳಗೆ ಅದುಮಿಟ್ಟುಕೊಂಡ ಭಾವನೆಗಳು ,ಬೇಸರಗಳು , ನೋವುಗಳು ಆ ವ್ಯಕ್ತಿಯನ್ನ ಇನ್ನೂ ಸೂಕ್ಷ್ಮನನ್ನಾಗಿಸಿಬಿದುತ್ತೆ . ಈ ರೀತಿಯ ವ್ಯಕ್ತಿಗಳನ್ನು ಗಮನಿಸಿ ಸಣ್ಣ ವಿಷಯಗಳಿಗೆ ಕಣ್ಣಲ್ಲಿ ನೀರು ತುಂಬ್ಕೋತಾರೆ ಮತ್ತೆ ಅದನ್ನ ಒರೆಸಿಕೊಂಡು ನಗ್ತಾರೆ (ಬಲವಂತವಾಗಿ ನಗೊಗು ನಗು ಅಲ್ಲ).ಇದಕ್ಕೆ ಪರಿಹಾರ ಅಂದ್ರೆ ಜನಗಳು ಬೈದಾಗ ಸಂದರ್ಭ ನೋಡಿ ತಾಳ್ಮೆಯಿಂದ ಇರಬೇಕಾದ ಸಮಯ ಆದ್ರೆ ಹಾಗೆ ಇರಿ ಇಲ್ಲಾಂದ್ರೆ ಅವರಿಗೆ ಅವರ ತಪ್ಪೇನು ಅಂತ ಮನವರಿಕೆ ಮಾಡಿ. ಸಂಬಂಧಗಳು ಮುರಿದು ಹೋಗದಂತೆ ಮಾತನಾಡಿ.ತಾಳ್ಮೆ ನಮ್ಮ ಬಲ ಹೌದು ಆದ್ರೆ ಅದು ಬಲಹೀನತೆ ಆಗಬಾರದು.