ತಿರುಪತಿ ಗಿರಿವಾಸ
ಕವನ
ಸಂಗೀತ ಪ್ರಿಯನೇ ನಿನಗೆ ಸಪ್ತ ಸ್ವರಗಳ ಮಾಲಾರ್ಪಣೆ
ಅಲಂಕಾರ ಪ್ರಿಯನೇ ನಿನಗೆ ಅಷ್ಟೋತ್ತರ ನಾಮಾವಳಿ
ಸುಗಂಧ ಪ್ರಿಯನೇ ನಿನಗೆ ಗಂಧದ ಲೇಪನ
ಪುಷ್ಪ ಪ್ರಿಯನೇ ನಿನಗೆ ಬ್ರಹ್ಮಕಮಲದ ಪುಷ್ಪಾರ್ಚನೆ
ಬಕುಳ ಸುತನೆ ನಿನಗೆ ಬಂಗಾರ ಕವಚ ಹೊದಿಕೆ
ವೈಕುಂಟ ನಿವಾಸಿಯೇ ನಿನಗೆ ವೇದೋಪನಿಷತ್ತಿನ ಅರ್ಪಣೆ
ಲಕ್ಷ್ಮೀ ಪತಿಯೇ ನಿನಗೆ ಲಲಿತ ಸಹಸ್ರ ನಾಮರ್ಪಣೆ
ಭಕ್ತರ ಭವ ಭಯ ಹರನೇ ನಿನಗೆ ನನ್ನ ಪ್ರಾಣಾರ್ಪಣೆ
ಓಂ ಗೋವಿಂದಾಯ ನಮಃ !