ತಿರುಪತಿ ತಿರುಮಲ ಯಾತ್ರೆ

ತಿರುಪತಿ ತಿರುಮಲ ಯಾತ್ರೆ

                    ತಿರುಪತಿ ತಿರುಮಲ ಯಾತ್ರೆ

"ನಿನಗೆ ಗೊತ್ತಾ,  ತೀರ್ಥಯಾತ್ರೆಗೆ ಹೊರಡುವ ಮೂದಲು ಆಯಾ ತೀರ್ಥಕ್ಷೇತ್ರಗಳ  ಮಹತ್ವ, ಪೌರಾಣಿಕ ಹಿನ್ನೆಲೆ, ಅಲ್ಲಿನ ಅನಷ್ಟಾನ ಕ್ರಮ ತಿಳ್ಕೊಂಡಿರಬೇಕು.  ತೀರ್ಥಯಾತ್ರೆ ಹೋಗೋದರಿಂದ, ಅಲ್ಲಿನ ಜನ ವಿಬಿನ್ನ ದೆಶಭಾಷೆ, ಸತ್ಯತೆಗಳು, ಹೆಚ್ಚಿನ ಪರಿಜ್ಗಾನ ಅದರ ಜೊತೆ ಸ್ವಲ್ಪ ಪುಣ್ಯ ಎಲ್ಲ ಬರುತ್ತೆ"

"ಅದೆಲ್ಲ ಇರಲಿರೀ, ನೀವು ಇಷ್ಟೇ ಪ್ರದಕ್ಷಿಣೆ, ನಮಸ್ಕಾರ  ಹಾಕು ಆಂತ ಹೀಳ್ಬೇಡಿ"

"ಕ್ರಮವಾಗಿ ಪ್ರದಕ್ಷಿಣೆ ನಮಸ್ಕಾರ ಹಾಕೋದರಿಂದ, ಪುಣ್ಯನೊ ಬರುತ್ತೆ, ವ್ಯಾಯಾಮನೂ ಆಗುತ್ತೆ.ಕಣೇ,  ಬರೀಕಾಲಲ್ಲಿ ಪ್ರದಕ್ಷಿಣೆ ಹಾಕೋದರಿಂದ "Accupressure" ಚಿಕಿತ್ಸೆ ಪುಕ್ಕಟೆ ಸಿಗುತ್ತೆ"

ತಿರುಪತಿಯಲ್ಲಿ ಬಹಳ ಮುಖ್ಯವಾಗಿ ನೋಡಬೇಕಾದ ಸ್ಠಳಗಳು ತುಂಬಾ ಇದೆ. ಅದನ್ನು ನೋಡುವ ಕ್ರಮದಲ್ಲೂ ವಿಷೇಶವಿದೆ ಗೊತ್ತಾ?"
ಮೊದಲು ಗೋವಿಂದರಾಜನನ್ನು ದರ್ಶಿಸಬೇಕು,  ಆಮೇಲೆ ಬೆಟ್ಟದಲ್ಲಿ ವರಹಾಸ್ವಾಮಿ,  ಆನಂತರ ಶ್ರೀನಿವಾಸ, ಪ್ರಕಾರದಲ್ಲಿ ಬಕುಳಾ ದೇವಿ, ಗೋಪುರದಲ್ಲಿ ವಿಮಾನ ವೆಂಕಟೇಶ್ವರ, ಆಮೇಲೆ ಹೊರಗಡೆ ದೇವಸ್ಥಾನದ ಎದುರಿಗೆ  ಬೇಡಿ ಆಂಜನೇಯ,  ನಂತರ ಕೆಳಗಿಳಿದ ಮೇಲೆ  ತಿರುಚಾನೊರಿನಲ್ಲಿ ಪದ್ಮಾವತಿ ಅಮ್ಮನವರು"

"ನೀವು ಹೀಗೆ ತಾನೆ ಕರ್ಕೊಂಡು ಹೋಗೋದು,  ಅದ್ರೂ ನಿಮ್ಮನ್ನ ಮೆಚ್ಕೊಬೇಕು,  ಯಾಕೆಂದ್ರೆ,  ಗೋವಿಂದರಾಜನ್ನ ದರ್ಶಿಸಿದ ಮೇಲೆ ಆ
 ಭಿಮಾಸ್ ಹೋಟಲಲ್ಲಿ ಬಿಸಿ ಬಿಸಿ ಇಡ್ಲಿ , ಪೊಂಗಲ್ ಕೊಡುಸ್ತೀರಲ್ಲ ಅದಕ್ಕೆ"

"ಯಾವಾಗಲೂ ತಿನ್ನೋದೇ ಯೋಚನೆ. ತಿರುಮಲದಲ್ಲಿ ಎಷ್ಟು ತೀರ್ಥಗಳಿವೆ ಗೊತ್ತಾ?"

"ಹೊ ಗೊತ್ತು, ಅಲ್ಲಿ, ಮೊರು ದೇವಸ್ಥಾನ ಇದೆ, ಎಲ್ಲಾ ಕಡೇನು ತೀರ್ಥ ಕೊಡ್ತಾರೆ,  ಅದೇನು ಮಹಾ ಪ್ರಶ್ನೆ ಅಂತಾ ಕೇಳ್ತಿರಾ?"

"ಹ ಹ್ಹ ಹ್ಹಾ .  ಆ ತೀರ್ಥ ಅಲ್ಲಾ ನಾನು ಕೇಳಿದ್ದು,  ತೀರ್ಥ ಆಂದರೆ ಪುಷ್ಕರೆಣಿಗಳು, ಸ್ನಾನ ಮಾಡ್ತೀವಲ್ಲ ಅದು"

"ಹೂ, ಅದೇ ಸ್ವಾಮಿ ಪುಷ್ಕರಣಿ, ದೇವಸ್ಥಾನದ ಪಕ್ಕದಲ್ಲಿ ಇದೆಯಲ್ಲ.  ಯಾವಾಗ ಹೋದರು ಅಲ್ಲಿ ಮುಳುಗು ಇಲ್ಲದಿದ್ರೆ ನೀರಾದ್ರು ತಲೆಮೇಲೆ ಹಾಕ್ಕೋ ಅಂತೀರಲ್ಲ"

"ಆತರಹದ ತೀರ್ಥಗಳು ೬೬ಕೋಟಿ ಇದೆಯಂತೆ ಆ ತಿರುಮಲ ಬೆಟ್ಟದಲ್ಲಿ-ಸ್ಕಾಂದ ಪುರಾಣದ ಪ್ರಕಾರ,  ಅದ್ರಲ್ಲೂ ೧೦೦೮ ಪುಣ್ಯ ತೀರ್ಥಗಳು, ಅದರಲ್ಲೊ ೧೦೮ ವಿಷೇಶ, ಅದರಲ್ಲೊ ೬೪ ಅತೀ ವಿಶಿಷ್ಟ ,ಆ ೬೪ರಲ್ಲಿ ೬ ಪ್ರಮುಖವಾದವು :

ಕಪಿಲ ತೀರ್ಥ,  ಪದ್ಮಸರೋವರ, ಅಕಾಶ ಗಂಗೆ, ಪಾಪವಿನಾಶಿನಿ, ತುಂಬುರು ತೀರ್ಥ ಮತ್ತೆ ಸ್ವಾಮಿ ಪುಷ್ಕರಿಣಿ"

"ಅಯ್ಯಪ್ಪ, ಇಷ್ಟೂಂದು ಕಡೆ ಸ್ನಾನ ಮಾಡಬೇಕ,  ಎಲ್ಲಾ ನೀರನ್ನು  ಒಟ್ಟಾಗಿ ನಲ್ಲಿಲಿ ಬಿಟ್ಟರೆ ಆಯ್ತಪ್ಪಾ,  ಸ್ನಾನಾನು ಆಯ್ತು ಪುಣ್ಯಾನು ಬಂತು"

"ಪುಣ್ಯತೀರ್ಥಗಳು ಹಲವುಂಟು ಇಲ್ಲಿ,
ನಾವು ಮಾಡಿದ ಪಾಪಗಳ ನೀಗಿಸಲು ಗಿರಿಯಲಿ"     ಅಂತ ದಾಸರೇ ಹೇಳಿದ್ದಾರೆ ಗೊತ್ತಾ.

"ಪ್ರತಿಯೂಂದು ತೀರ್ಥಕ್ಕೂ ಅದರದೆ ಆದ ವಿಶೇಷ ಇರುತ್ತೆ,  ಅದರ ಫಲಗಳು ಬೇರೇನೆ, ಈಗ ನೋಡು ಒಂದೊಂದೇ ಹೇಳ್ತಿನಿ ಕೇಳು"
ಅದಲ್ಲದೆ, ವಿವಿಧ ನದಿ , ಸಮುದ್ರಗಳ ಸ್ನಾನದಿಂದ ಒಂದು ರೀತಿಯ ಜಲ ಚಿಕಿತ್ಸೆ(HYDRO THERAPY) ಅನೇಕ ರೋಗ ರುಜಿನಗಳು ವಾಸಿಯಾಗಿತ್ತೆ.  ಪವರ್ತಗಳ ಸಮುದ್ರಗಳ ವೀಕ್ಷಣೆಯಿಂದ ಮ್ಯಮನಸ್ಸುಗಳ ವಿಕಾಸಕ್ಕೂ ಕಾರಣ ಆಗುತ್ತೆ.

."ಮೊದಲು ಕಪಿಲ ತೀರ್ಥ.  ನಿಂಗೊತ್ತಲ್ಲ ಬೆಟ್ಟದ ಕೆಳಗೆ, ಹೋದಸಾರಿ ಹೋಗಿದ್ದಾಗ ಅಲ್ಲಿ ಸ್ನಾನ ಮಾಡಿ ಬೆಟ್ಟ ಹತ್ತಿದ್ವಲ್ಲ , ಫಾಲ್ಸ್ ತರ ಬೀಳತ್ತಲ್ಲ ಅದೇ"

"ರೀ,  ಈ ಸ್ಪಾಟ್ ಗೆ ನಮ್ಮಣ್ಣನ್ನ ಅವರ ಮಕ್ಕಳನ್ನ ಕರಕೊಂಡು ಹೋಗೋಣ,  ಅವರಿಗೆ ಇದೆಲ್ಲ ಇಷ್ಟ,  ಫಾಲ್ಸಲ್ಲಿ ಎಂಜಾಯ್ ಮಾಡ್ತಾರೆ. ಒಳ್ಳೆ ಮಜಾ ಇರುತ್ತೆ. ಆಲ್ಲಿ ಆಯಿಲ್ ಮಾಸಾಜ್ ಇದೆಯಾ?.

"ಅಯ್ಯೋ ನಿನ್ ಬುದ್ದಿಗೆ ಏನ್ ಹೇಳಲಿ, ಆದೇನು ಹೊಗೆನಿಕಲ್ ಫಾಲ್ಸ್ ಅದ್ಕೋಂಡೆಯಾ, ಮಾಸಜ್ ಇರಕ್ಕೆ.  ಅದೇನು ಪಿಕ್ ನಿಕ್ ಸ್ಪಾಟ್ ಅದ್ಕೊಂಡೆಯಾ, ಅದೊಂದು ಪವಿತ್ರ ತೀರ್ಥ ಸ್ನಾನ ಕಣೇ."
ಇನ್ನೊಂದು ವಿಷಯ ಏನಪ್ಪಾ ಅಂದರೆ,  ತಿರುಪತಿಗೆ ಹೋದರೆ, ಪಿತ್ರು ದೇವತೆಗಳು ಸಂತುಷ್ಟರಾಗತಾರಂತೆ.  ನಾವು ಮಾಡಿದ ಶ್ರೀನಿವಾಸನ ದರ್ಶನದಿಂದ ಆ ಜೀವಕ್ಕೂ ಪುಣ್ಯಾ ಸಿಗುತ್ತೆ ಅಂತ ಶ್ರೀನಿವಾಸ ಕಲ್ಯಾಣ ಪುರಾಣದಲ್ಲಿ ಹೇಳಿದೆ.

ಈ ತಿರುಮಲ ಬೆಟ್ಟ ಕ್ರತಯುಗದಲ್ಲಿ "ವ್ರಷಭಾದ್ರಿ", ತ್ರೇತಯುಗದಲ್ಲಿ "ಆಂಜನಾದ್ರಿ",  ದ್ವಾಪರಯುಗದಲ್ಲಿ "ಶೇಷಾದ್ರಿ" ಈಗ ಕಲಿಯುಗದಲ್ಲಿ "ವೆಂಕಟಾದ್ರಿ" ಅಂತ ಪ್ರಸಿದ್ದಿ

"ತಿರುಪತಿಯ ಶ್ತೀನಿವಾಸ ಹೇಗಿದ್ದಾನೆ ನೋಡಿದಿಯಾ ಸರಿಯಾಗಿ"

"ಅಯ್ಯೋ ಅಲ್ಲಿ ಎಲ್ಲಿ ನೋಡೋದು.  ಎಲ್ಲರನ್ನೂ ನೊಕಿ ಹೊರಗೆ ಹಾಕ್ತಾರೆ.  ಎಲ್ಲಿ ಡ್ರೆಸ್ ಎಲ್ಲ ಹಾಲೋಗುತ್ತೋ, ಒಡವೆ ಎಲ್ಲ ಕಿತ್ತೋಗತ್ತೋ ಅನ್ನೋದೆ ಯೋಚನೆ"

"ನಿಧಾನವಾಗಿ ನೋಡಿಕೊಂಡು ಹೋಗಾಬೇಕು. ಹಣೆಮೇಲೆ ಮೂರು ನಾಮ, ಮೇಲಿನ ಎರಡು ಕ್ಯೆಯಲ್ಲಿ  ಚಕ್ರ , ಶಂಖ ಇದೆ,  ಕೆಳಗಡೆ ಇರೋ ಎಡಗ್ಯಯನ್ನ ಸೊಂಟದಮೇಲೆ, ಬಲಗ್ಯೆಯನ್ನ ಕೆಳಗಡೆ ತೋರಿಸ್ತಾ ಇದ್ದಾರೆ.
"ಇದರ ಅರ್ಥ ಎನಂದರೆ,  ತನ್ನ ಪಾದ ಪದ್ಮಗಳನ್ನು ಯಾರು ಭಜಿಸುತ್ತಾರೋ ಅಂತಹವರಿಗೆ ಈ ಸಂಸಾರ ಸಮುದ್ರವೆಂಬ ಕ್ಲಿಷ್ಟವು ಸೊಂಟದವರೆಗೆ ಮಾತ್ರ ಬರುತ್ತದೆ. ಆ ಸಮುದ್ರವನ್ನು ತಾನು ದಾಟಿಸುತ್ತೇನೆ ಅಂತ ನಮ್ಮ ಶ್ರೀನಿವಾಸನ ಸಂದೇಶ"

"ಎಲ್ಲರೊ ವೆಂಕಟೇಶ್ವರ, ತಿಮಪ್ಪ, ಗೋವಿಂದ ಅಂತಾರೆ,  ನೀವು ನೋಡಿದ್ರೆ ಶ್ರೀನಿವಾಸ ಅಂತೀರ"

"ಅಲ್ಲೆ ಇರೋದು ಸ್ವಾರಸ್ಯ,  ಶ್ರೀನಿವಾಸನ ಭಕ್ತರು ಯಾವಾಗಲು ಶ್ರೀಮಂತರಾಗಿರುತ್ತಾರೆ.  ಬರೀ ಹಣಾದಲ್ಲಿ ಅಲ್ಲ ಎಲ್ಲದರಲ್ಲೂ,  ಶ್ರೀ ಅಂದರೆ ಮಹಾತಾಯಿ ಲಕ್ಷ್ಮಿ.  "ನಿವಾಸ" ಎಂದರೆ ನೆಲೆಸಿರುವುದು.  ಎಲ್ಲಿ ಶ್ರೀನಿವಾಸನೋ ಅಲ್ಲಿ ಶ್ರೀಮಂತಿಕೆ. ಪರಿಶುದ್ದತೆ.  ಯಾರು ತಮ್ಮ ಭಕ್ತಿ, ಸಂಪತ್ತನ್ನು ಶ್ರೀಮಂತಿಕೆಯಿಂದ ಅರ್ಪಿಸುತ್ತಾರೋ ಅಲ್ಲಿ ತಾನೂ ನೆಲೆಸಿ ಅವರ  ಇಷ್ಟಾರ್ಥಗಳನ್ನು ಈಡೇರಿಸುತ್ತಾ ಅವರ ಮನೆಗಳಲ್ಲೇ ನೆಲೆಸಿರ್ತಾನೆ"
ಅದಕ್ಕೆ ಹೇಳೋದು,  "ವೆಂಕಟೇಶೋ ಸಮೋ ದೇವೋ ನ್ ಭೂತೋನ ಭವಿಷ್ಯತಿ" ಅಂತ.


                                                -    ಮುಂದುವರಿಯುವುದು           
 

Comments