ತುಳಸಿ ಪೂಜೆ ಮತ್ತು ಅದರ ವಿಶೇಷತೆ
ಇಂದು ಮತ್ತು ನಾಳೆ ತುಳಸಿ ಹಬ್ಬ. ಎರಡು ದ್ವಾದಶಿ ಬಂದಿರುವುದರಿಂದ ಗುರುವಾರ ಕೆಲವರಿಗೆ ಮತ್ತೆ ಶುಕ್ರವಾರ ಕೆಲವರಿಗೆ ತುಳಸಿ ಹಬ್ಬ. ಅವರವರ ಮನೆಯ, ಮನದ ಆಚರಣೆಗೆ ತಕ್ಕಂತೆ ಆಚರಿಸಿ.
ದೀಪಾವಳಿಯ ನಂತರ ಆಚರಿಸುವ ಹಬ್ಬ ತುಳಸಿ ಹಬ್ಬ ಅಥವಾ ತುಳಸಿ ಮದುವೆ. ಶ್ರೀ ತುಳಸಿಯೊಂದಿಗೆ ಶ್ರೀ ವಿಷ್ಣುವಿನ ವಿವಾಹ ಮಾಡುವುದೇ ತುಳಸಿ ಮದುವೆಯ ವಿಧಿಯಾಗಿದೆ.
ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಈ ಪವಿತ್ರ ತುಳಸಿ ಮದುವೆಯನ್ನು ಆಚರಿಸುತ್ತಾರೆ. ತುಳಸಿ ಕಟ್ಟೆಯನ್ನು ಕಬ್ಬು, ಚೆಂಡು ಅಥವಾ ಸೇವಂತಿಗೆ ಹೂಗಳಿಂದ ಅಲಂಕರಿಸಿ, ಬೆಟ್ಟದ ನೆಲ್ಲಿಕಾಯಿ ಮತ್ತು ಹುಣಸೆಕಾಯಿ ಸಹಿತ ಅವುಗಳ ಕೊಂಬೆಗಳನ್ನು ಇಟ್ಟು ಅಲಂಕರಿಸುವ ಪದ್ಧತಿ ರೂಢಿಯಲ್ಲಿದೆ . ಮಾವಿನ ಎಲೆ, ಹೂ, ರಂಗೋಲಿ ಹಾಕಿ ,ಕೃಷ್ಣನ ಮೂರ್ತಿಯನ್ನಿರಿಸಿ ಪೂಜಿಸುತ್ತಾರೆ.
ತುಳಸಿಗೆ ಮಾತೃ ಸ್ಥಾನ ನೀಡಿ ಗೌರವಿಸುತ್ತೇವೆ ನಾವು. ಪ್ರತಿಯೊಬ್ಬ ಹಿಂದೂಗಳ ಮನೆಯಲ್ಲಿ ತುಳಸಿಯನ್ನು ಕಾಣುತ್ತೇವೆ. ಔಷಧಿ ಗುಣಗಳ ಆಗರವಾಗಿರುವ ತುಳಸಿಯನ್ನು ಪೂಜಿಸುವುದರಿಂದ ಸಕಲ ಪಾಪಗಳು ಕಳೆದುಹೋಗುತ್ತದೆ. ಪ್ರದಕ್ಷಿಣೆ ಹಾಕುವುದರಿಂದ ಆರೋಗ್ಯ, ಆಯುಷ್ಯ ವೃದ್ಧಿಯಾಗುತ್ತದೆ..
ಪೌರಾಣಿಕ ಕಥೆ: ತುಳಸಿ ವಿವಾಹದ ಹಿಂದೆ ದೀರ್ಘವಾದ ಒಂದು ಕಥೆ ಇದೆ. ತುಳಸಿಗಿರುವ ಇನ್ನೊಂದು ಹೆಸರು ವೃಂದಾ. ಕಾಲನೇಮಿ ಎಂಬ ರಾಕ್ಷಸ ರಾಜನ ಕುವರಿ ಈ ವೃಂದಾ. ಈ ವೃಂದಾಳೇ ತುಳಸಿ ಗಿಡದ ರೂಪ ಪಡೆದಿರುವುದು. ಇವಳು ಜಲಂಧರ ಎಂಬ ದುಷ್ಟ ರಾಜನನ್ನು ಮದುವೆಯಾಗಿರುತ್ತಾಳೆ. ಮಹಾವಿಷ್ಣುವಿನ ಮೇಲೆ ಇವಳಿಗೆ ತುಂಬಾ ಭಕ್ತಿ. ಇದು ಜಲಂಧರನಿಗೆ ಇಷ್ಟವಿರಲಿಲ್ಲ. ಪರಮ ಪವಿತ್ರೆಯಾದ ವೃಂದಾಳು ಪತಿವ್ರತೆ. ಈಕೆಯ ದೈವಭಕ್ತಿಯ ಕಾರಣದಿಂದ ಜಲಂಧರನ ಶಕ್ತಿ ಇಮ್ಮಡಿಯಾಗಿರುತ್ತದೆ. ಆತ ದೇವತೆಗಳಿಗೆ ತುಂಬಾ ತೊಂದರೆ ಕೊಡುತ್ತಿರುತ್ತಾನೆ. ಏನೂ ತೋಚದೇ ಶಿವ ವಿಷ್ಣುವಿನ ಮೊರೆಹೋಗುತ್ತಾನೆ. ಆಗ ವಿಷ್ಣು ಜಲಂಧರನ ರೂಪ ತಾಳಿ ವೃಂದಾಳ ಬಳಿ ಬಂದು ಆಕೆಯ ಪಾತಿವ್ರತ್ಯಕ್ಕೆ ಧಕ್ಕೆ ತರುತ್ತಾನೆ. ಈ ಸಂದರ್ಭದಲ್ಲಿ ಶಿವನು ಜಲಂಧರನ ಸಂಹಾರ ಮಾಡುತ್ತಾನೆ. ತನ್ನ ಚರಿತ್ರೆಗೆ ಧಕ್ಕೆ ತಂದ ವಿಷ್ಣುವಿಗೆ ವೃಂದಾ,' ನಿನಗೆ ಪತ್ನಿ ವಿರಹ ಬರಲಿ'ಎಂದು ಶಾಪ ನೀಡುತ್ತಾಳೆ.
ಇದರಿಂದಾಗಿಯೇ ರಾಮಾಯಣದಲ್ಲಿ ರಾಮನಾದ ವಿಷ್ಣು ಸೀತೆಯಿಂದ ದೂರವಾಗುವ ಸಂದರ್ಭ ಬರುತ್ತದೆ. ನೊಂದ ವೃಂದಾ ಪತಿಯ ಚಿತೆಯಲ್ಲಿ ಹಾರಿ ಪ್ರಾಣ ಬಿಡುತ್ತಾಳೆ. ಶ್ರೀ ವಿಷ್ಣು ಆಕೆಯ ಆತ್ಮವನ್ನು ತುಳಸಿ ಗಿಡವಾಗಿ ಪರಿವರ್ತಿಸುತ್ತಾನೆ ಎಂಬ ಕಥೆ ಇದೆ.
ಇನ್ನೊಂದು ಪುರಾಣದ ಪ್ರಕಾರ, ದೇವತೆಗಳಿಗೂ ಮಾನವರಿಗೂ ಸಮುದ್ರಮಥನ ನಡೆದಾಗ ಬಂದ ಅಮೃತವನ್ನು ಕೈಯಲ್ಲಿ ತೆಗೆದುಕೊಂಡ ವಿಷ್ಣುವಿನ ಕಣ್ಣುಗಳಿಂದ ಬಂದ ಆನಂದಬಾಷ್ಪ ಕಲಶದಲ್ಲಿ ಬಿದ್ದು, ಇದರಿಂದ ಗಿಡ ಹುಟ್ಟಿತು. ಇದಕ್ಕೆ ತುಳಸಿ ಎಂದು ಹೆಸರಿಟ್ಟು, ಲಕ್ಷ್ಮಿಯೊಂದಿಗೆ ಮಹಾವಿಷ್ಣು ವಿವಾಹವಾದನು ಎಂಬ ಪ್ರತೀತಿ ಇದೆ. ಇದರ ಸಂಕೇತವೇ ವಿಷ್ಣು - ತುಳಸಿ ಮದುವೆ. ಈ ವಿಧಿಯನ್ನು ಕಾರ್ತಿಕ ಶುಕ್ಲ ದ್ವಾದಶಿಯಿಂದ ಹುಣ್ಣಿಮೆವರೆಗಿನ ಯಾವುದಾದರೊಂದು ದಿನ ಮಾಡುತ್ತಾರೆ.
ಸುಮಂಗಲೆಯರು ಶ್ರೀ ತುಳಸಿ ಪೂಜೆಯನ್ನು ಶುಭ್ರರಾಗಿ, ಮಂಗಳ ದ್ರವ್ಯಗಳಿಂದ ಪೂಜಿಸುತ್ತಾ ಆಚರಿಸುತ್ತಾರೆ. ಪ್ರತಿದಿನ ಸಂಧ್ಯಾಕಾಲದಲ್ಲಿ ತುಳಸಿಗೆ ದೀಪ ಹಚ್ಚುವುದು ತುಂಬಾ ಒಳ್ಳೆಯದು..
ಯನ್ಮೂಲೇ ಸರ್ವ ತೀರ್ಥಾನಿ
ಯನ್ಮಧ್ಯೇ ಸರ್ವದೇವತಾ:°|
ಯದಗ್ರೇ ಸರ್ವ ವೇದಾಶ್ಚ |
ತುಳಸಿತ್ವಾಂ ನಮಾಮ್ಯಹಂ...
ಈ ಶ್ಲೋಕವನ್ನು ಹೇಳಿ ತುಳಸಿ ಮುಂದೆ ಸಂಧ್ಯಾಕಾಲದಲ್ಲಿ ದೀಪವನಿಡಬೇಕು. ತುಳಸಿ ವಿವಾಹದ ನಂತರ ಚಾತುರ್ಮಾಸ್ಯದಲ್ಲಿ ಕೈಗೊಂಡ ಎಲ್ಲ ವೃತಗಳನ್ನು ಸಮಾಪ್ತಿ ಗೊಳಿಸುತ್ತಾರೆ. ಮನೆಗೆ ಸಂತಸ, ಐಶ್ವರ್ಯದ ಸುಖವನ್ನು ಕರುಣಿಸುವ ಶ್ರೀ ತುಳಸಿಯನ್ನು ಶೃದ್ಧೆ ಭಕ್ತಿಯಿಂದ ಪೂಜಿಸಿ ದೈವಾನುಗ್ರಹ ಪಡೆಯೋಣ...
ಶುಭಂ ಕರೋತಿ ಕಲ್ಯಾಣಂ
ಆರೋಗ್ಯಂ ಧನಸಂಪದ
ಶತ್ರುಬುದ್ಧೀ ವಿನಾಶಾಯ
ದೀಪಜ್ಯೋತಿ ನಮೋಸ್ತುತೆ...
ದೀಪವನ್ನು ಬೆಳಗಿಸಿ ಸಕಲ ಜೀವಿಗಳ ಕಲ್ಯಾಣಕ್ಕಾಗಿ ತುಳಸಿ ದೇವಿಯನ್ನು ಆರಾಧಿಸೋಣ.
ನಾಳೆ ಪೂಜಾ ಸಮಯದಲ್ಲಿ ಕೇಳಿ ಓದಿ
ಮಾತಾ ತುಳಸಿ ಅನುಗ್ರಹ ನಿಮದಾಗಲಿ
||ಜಗದಾತ್ರಿ ನಮಸ್ತುಭ್ಯಂ ವಿಷ್ಣೋಶ್ಚ ಪ್ರಿಯವಲ್ಲಭೇ |
ಯತೋ ಬ್ರಹ್ಮಾದಯೋ ದೇವಾಃ ಸೃಷ್ಟಿಸ್ಥಿತ್ಯಂತಕಾರಿಣಃ ||
ನಮಸ್ತುಲಸಿ ಕಲ್ಯಾಣಿ ನಮೋ ವಿಷ್ಣುಪ್ರಿಯೇ ಶುಭೇ |
ನಮೋ ಮೋಕ್ಷಪ್ರದೇ ದೇವಿ ನಮಃ ಸಂಪತ್ಪ್ರದಾಯಿಕೇ ||
ತುಲಸೀ ಪಾತು ಮಾಂ ನಿತ್ಯಂ ಸರ್ವಾಪದ್ಭ್ಯೋಽಪಿ ಸರ್ವದಾ |
ಕೀರ್ತಿತಾ ವಾಪಿ ಸ್ಮೃತಾ ವಾಪಿ ಪವಿತ್ರಯತಿ ಮಾನವಮ್ ||
ನಮಾಮಿ ಶಿರಸಾ ದೇವೀಂ ತುಲಸೀಂ ವಿಲಸತ್ತನುಂ |
ಯಾಂ ದೃಷ್ಟ್ವಾ ಪಾಪಿನೋ ಮರ್ತ್ಯಾಃ ಮುಚ್ಯಂತೇ ಸರ್ವಕಿಲ್ಬಿಷಾತ್ ||
ತುಲಸ್ಯಾ ರಕ್ಷಿತಂ ಸರ್ವಂ ಜಗದೇತಚ್ಚರಾಚರಂ |
ಯಾ ವಿನರ್ಹಂತಿ ಪಾಪಾನಿ ದೃಷ್ಟ್ವಾ ವಾ ಪಾಪಿಭಿರ್ನರೈಃ ||
ನಮಸ್ತುಲಸ್ಯತಿತರಾಂ ಯಸ್ಯೈ ಬದ್ಧಾಂಜಲಿಂ ಕಲೌ |
ಕಲಯಂತಿ ಸುಖಂ ಸರ್ವಂ ಸ್ತ್ರಿಯೋ ವೈಶ್ಯಾಸ್ತಥಾಽಪರೇ ||
ತುಲಸ್ಯಾ ನಾಪರಂ ಕಿಂಚಿದ್ದೈವತಂ ಜಗತೀತಲೇ |
ಯಥಾ ಪವಿತ್ರಿತೋ ಲೋಕೋ ವಿಷ್ಣುಸಂಗೇನ ವೈಷ್ಣವಃ ||
ತುಲಸ್ಯಾಃ ಪಲ್ಲವಂ ವಿಷ್ಣೋಃ ಶಿರಸ್ಯಾರೋಪಿತಂ ಕಲೌ |
ಆರೋಪಯತಿ ಸರ್ವಾಣಿ ಶ್ರೇಯಾಂಸಿ ವರಮಸ್ತಕೇ ||
ತುಲಸ್ಯಾಂ ಸಕಲಾ ದೇವಾ ವಸಂತಿ ಸತತಂ ಯತಃ |
ಅತಸ್ತಾಮರ್ಚಯೇಲ್ಲೋಕೇ ಸರ್ವಾನ್ ದೇವಾನ್ ಸಮರ್ಚಯನ್ ||
ನಮಸ್ತುಲಸಿ ಸರ್ವಜ್ಞೇ ಪುರುಷೋತ್ತಮವಲ್ಲಭೇ |
ಪಾಹಿ ಮಾಂ ಸರ್ವ ಪಾಪೇಭ್ಯಃ ಸರ್ವಸಮ್ಪತ್ಪ್ರದಾಯಿಕೇ ||
ಇತಿ ಸ್ತೋತ್ರಂ ಪುರಾ ಗೀತಂ ಪುಂಡರೀಕೇಣ ಧೀಮತಾ |
ವಿಷ್ಣುಮರ್ಚಯತಾ ನಿತ್ಯಂ ಶೋಭನೈಸ್ತುಲಸೀದಲೈಃ ||
ತುಲಸೀ ಶ್ರೀರ್ಮಹಾಲಕ್ಷ್ಮೀರ್ವಿದ್ಯಾವಿದ್ಯಾ ಯಶಸ್ವಿನೀ |
ಧರ್ಮ್ಯಾ ಧರ್ಮಾನನಾ ದೇವೀ ದೇವದೇವಮನಃಪ್ರಿಯಾ ||
ಲಕ್ಷ್ಮೀಪ್ರಿಯಸಖೀ ದೇವೀ ದ್ಯೌರ್ಭೂಮಿರಚಲಾ ಚಲಾ |
ಷೋಡಶೈತಾನಿ ನಾಮಾನಿ ತುಲಸ್ಯಾಃ ಕೀರ್ತಯನ್ನರಃ ||
ಲಭತೇ ಸುತರಾಂ ಭಕ್ತಿಮಂತೇ ವಿಷ್ಣುಪದಂ ಲಭೇತ್ |
ತುಲಸೀ ಭೂರ್ಮಹಾಲಕ್ಷ್ಮೀಃ ಪದ್ಮಿನೀ ಶ್ರೀರ್ಹರಿಪ್ರಿಯಾ ||
ತುಲಸಿ ಶ್ರೀಸಖಿ ಶುಭೇ ಪಾಪಹಾರಿಣಿ ಪುಣ್ಯದೇ |
ನಮಸ್ತೇ ನಾರದನುತೇ ನಾರಾಯಣಮನಃಪ್ರಿಯೇ ||
ಇತಿ ಶ್ರೀಪುಂಡರೀಕಕೃತಂ ತುಲಸೀಸ್ತೋತ್ರಮ್ |
(ಆಧಾರ)
ಚಿತ್ರ: ಇಂಟರ್ನೆಟ್ ತಾಣ