ತೆಂಗಿನಕಾಯಿ ಬಳಕೆಯ ನಾನಾ ಪ್ರಯೋಜನಗಳು

ತೆಂಗಿನಕಾಯಿ ಬಳಕೆಯ ನಾನಾ ಪ್ರಯೋಜನಗಳು

ತೆಂಗಿನಕಾಯಿಗೆ ಕಲ್ಪವೃಕ್ಷ ಎಂಬ ಹೆಸರಿರುವುದು ನಿಜ ತಾನೇ? ಮೊದಲಿನವರು ಅದರ ಎಲ್ಲಾ ಭಾಗಗಳು ನಮಗೆ ಉಪಕಾರಿ ಎನ್ನುವ ದೃಷ್ಟಿಯಲ್ಲಿ ಆ ಹೆಸರು ಇರಿಸಿದ್ದಿರಬಹುದು. ಅಂದರೆ ಕಾಂಡ, ಕಾಯಿ, ಎಲೆ ಎಲ್ಲಾ ಭಾಗಗಳು ಪ್ರಯೋಜನಕ್ಕೆ ಬರುತ್ತವೆ. ಆದರೆ ಈಗ ತೆಂಗಿನಕಾಯಿಯ ಬೆಲೆ ಗಗನಕ್ಕೇರಿದೆ. ಆ ಕಾರಣದಿಂದ ನಿಜಕ್ಕೂ ಕಲ್ಪವೃಕ್ಷವೇ ಆಗಿದೆ. ಸಾಮಾನ್ಯ ಜನರ ಕೈಗೆ ದೊರೆಯದ ವಸ್ತುವಾಗುತ್ತಿದೆ. ತೆಂಗಿನಕಾಯಿಯ ಬೆಲೆ ಕೆ ಜಿ ಗೆ ೬೫-೭೦ ರೂಪಾಯಿ ತನಕ ಇದ್ದರೆ, ಬೇಸಿಗೆ ಕಾಲದಲ್ಲಿ ಸಖತ್ ಬೇಡಿಕೆ ಇರುವ ಎಳನೀರು ೫೫-೬೦ ರೂ ಗಳಿಗೆ ಮಾರಾಟವಾಗುತ್ತಿದೆ. ಬೇಡಿಕೆಯಷ್ಟು ಪೂರೈಕೆ ಇಲ್ಲದ ಕಾರಣದಿಂದ ಬೆಲೆ ಇನ್ನಷ್ಟು ಏರಿದರೂ ಅಚ್ಚರಿಯಿಲ್ಲ.

ದಕ್ಷಿಣ ಭಾರತೀಯರು ತಮ್ಮ ಅಡುಗೆಯಲ್ಲಿ ಹೆಚ್ಚಾಗಿ ತೆಂಗಿನಕಾಯಿಯನ್ನು ಬಳಸುತ್ತಾರೆ. ತೆಂಗಿಕಾಯಿಯು ಸಾಕಷ್ಟು ಪೋಷಕಾಂಶಗಳನ್ನು ಹೊಂದಿದ್ದು, ರುಚಿಕರ ಮಾತ್ರವಲ್ಲ, ಆರೋಗ್ಯಕ್ಕೂ ಪ್ರಯೋಜನಕಾರಿಯಾಗಿದೆ. ಇದನ್ನು ಸೇವಿಸುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಮತ್ತು ದೇಹಕ್ಕೂ ಹಲವಾರು ಪೋಷಕಾಂಶಗಳು ಸಿಗುತ್ತವೆ. ಹಸಿ ತೆಂಗಿನಕಾಯಿ ಆರೋಗ್ಯಕ್ಕೆ ಏಕೆ ಪ್ರಯೋಜನಕಾರಿ ಎಂದು ತಿಳಿಯೋಣ.

ಹಸಿ ತೆಂಗಿನಕಾಯಿಯಲ್ಲಿ ಕಂಡುಬರುವ ಪೋಷಕಾಂಶಗಳು: ಹಸಿ ತೆಂಗಿನಕಾಯಿಯಲ್ಲಿ ಹೇರಳವಾದ ನಾರಿನಂಶವಿದೆ, ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಇದು ಮಲಬದ್ಧತೆ, ಆಮ್ಮಿಯತೆ ಮತ್ತು ಗ್ಯಾಸ್‌ನಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. ಎಮ್ಸಿ ಎಫ್‌ ಎಗಳು ಹಸಿ ತೆಂಗಿನಕಾಯಿಯಲ್ಲಿ ಕಂಡುಬರುತ್ತವೆ. ಇವು ದೇಹದಿಂದ ಸುಲಭವಾಗಿ ಹೀರಲ್ಪಡುತ್ತವೆ ಮತ್ತು ಶಕ್ತಿಯನ್ನು ನೀಡುತ್ತವೆ. ಇವು ತೂಕ ನಷ್ಟಕ್ಕೂ ಸಹಾಯ ಮಾಡಬಹುದು.

ವಿಟಮಿನ್ ಸಿ. ಇ. ಬಿ ಕಾಂಪ್ಲೆಕ್ಸ್ ಮತ್ತು ಮೆಗ್ನಿಸಿಯಮ್, ಪೊಟ್ಯಾಸಿಯಮ್ ಮತ್ತು ಕಬ್ಬಿಣದಂತಹ ಖನಿಜಗಳು ಹಸಿ ತೆಂಗಿನಕಾಯಿಯಲ್ಲಿ ಕಂಡುಬರುತ್ತವೆ, ಇದು ದೇಹವನ್ನು ಆರೋಗ್ಯಕರವಾಗಿಡಲು ಅವಶ್ಯಕವಾಗಿವೆ. ಆಂಟಿಆಕ್ಸಿಡೆಂಟ್‌ಗಳು ಹಸಿ ತೆಂಗಿನಕಾಯಿಯಲ್ಲಿ ಕಂಡುಬರುತ್ತವೆ. ಇದು ದೇಹವನ್ನು ಸ್ವತಂತ್ರ ರಾಡಿಕಲ್‌ಗಳಿಂದ ರಕ್ಷಿಸುತ್ತದೆ ಮತ್ತು ಜೀವಕೋಶಗಳು ಹಾನಿಯಾಗದಂತೆ ತಡೆಯುತ್ತದೆ.

ಮಲಬದ್ಧತೆಯ ವಿರುದ್ಧ ಹೋರಾಡುವುದು: ತೆಂಗಿನಕಾಯಿಯಲ್ಲಿ ನಾರಿನಂಶ ಸಮೃದ್ಧವಾಗಿದೆ. ಇದು ನೈಸರ್ಗಿಕ ಕರುಳಿನ ಚಲನೆಯನ್ನು ಉತ್ತೇಜಿಸುವ ಒಂದು ರೀತಿಯ ಫೈಬರ್ ಆಗಿದ್ದು, ಇದು ಮಲವನ್ನು ಸರಾಗವಾಗಿ ದೇಹದಿಂದ ಹೊರಹೋಗಲು ಸಹಕರಿಸುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.

ಅಕಾಲಿಕ ವಯಸ್ಸಾಗುವುದನ್ನು ತಡೆಯುವುದು: ಇದು ಉತ್ಕರ್ಷಣ ನಿರೋಧಕ ಕ್ರಿಯೆಯೊಂದಿಗೆ ಸಂಯುಕ್ತಗಳಲ್ಲಿ ಸಮೃದ್ಧವಾಗಿರುವ ಕಾರಣ, ತೆಂಗಿನಕಾಯಿ ದೇಹದಲ್ಲಿ ಹೆಚ್ಚುವರಿ ಫ್ರೀ ರಾಡಿಕಲ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಇದು ಅಕಾಲಿಕ ವಯಸ್ಸಾಗುವುದನ್ನು ತಡೆಯಲು ಚರ್ಮದ ನೆರಿಗೆಗಳು ಮತ್ತು ಸುಕ್ಕುಗಳನ್ನು ತಡೆಯುತ್ತದೆ. ಇದು ಚರ್ಮವನ್ನು ಮೃದು ಮತ್ತು ಹೊಳೆಯುವಂತೆ ಮಾಡುತ್ತದೆ. ಎಸ್ಟಿಮಾ ಮತ್ತು ಸೋರಿಯಾಸಿಸ್‌ನಂತಹ ಚರ್ಮದ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ. 

ಮಧುಮೇಹವನ್ನು ನಿಯಂತ್ರಿಸುವುದು: ತೆಂಗಿನಕಾಯಿ ಕಡಿಮೆ ರೈಸೆಮಿಕ್ ಸೂಚಿಯನ್ನು ಹೊಂದಿರುವ ಹಣ್ಣು, ಇದು ಆಹಾರದಿಂದ ಕಾರ್ಬೋಹೈಡ್ರೆಟ್‌ಗಳ ಹೀರಿಕೊಳ್ಳುವಿಕೆಯನ್ನು ನಿಧಾನಗೊಳಿಸುತ್ತದೆ. ಆದ್ದರಿಂದ ತೆಂಗಿನಕಾಯಿಯು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಾಮಾನ್ಯಗೊಳಿಸಲು ಸಹಾಯ ಮಾಡುತ್ತದೆ ಮತ್ತು ಮಧುಮೇಹವನ್ನು ನಿರ್ವಹಿಸಲು ಸಹಾಯ ಮಾಡಲು ಶಿಫಾರಸು ಮಾಡಲಾಗಿದೆ.

ಕೂದಲು ಉದುರುವುದನ್ನು ತಡೆಯುತ್ತದೆ : ತೆಂಗಿನಕಾಯಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ದೇಹವನ್ನು ಸೋಂಕುಗಳಿಂದ ರಕ್ಷಿಸುತ್ತದೆ. ಕಚ್ಚಾ ತೆಂಗಿನ ಎಣ್ಣೆ ಕೂಡ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಕೂದಲನ್ನು ಬಲವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ ಮತ್ತು ಕೂದಲು ಉದುರುವುದನ್ನು ತಡೆಯುತ್ತದೆ. ಗಾಣದಲ್ಲಿ ತಯಾರಾದ ತೆಂಗಿನ ಎಣ್ಣೆ ಅತ್ಯುತ್ತಮ ಎಂದು ಹೇಳಲಾಗಿದೆ. ತೆಂಗಿನ ಎಣ್ಣೆಯನ್ನು ನಿಯಮಿತವಾಗಿ ಬಳಸಿದರೆ ಹೃದಯದ ತೊಂದರೆಗಳು ಬರಲಾರವು. 

ಹಸಿ ತೆಂಗಿನಕಾಯಿಯನ್ನು ಹೇಗೆ ಸೇವಿಸಬೇಕು :- ಹಸಿ ತೆಂಗಿನಕಾಯಿಯ ಚಟ್ಟಿಯನ್ನು ತಯಾರಿಸಬಹುದು. ಪದಾರ್ಥಗಳಲ್ಲಿ ಬಳಸಬಹುದು. ಎಳ ನೀರು ದೇಹವನ್ನು ಹೈಡ್ರೆಟ್ ಮಾಡಲು ಮತ್ತು ಎಲೆಕ್ಟೋಲೈಟ್ ಗಳನ್ನು ಮರುಪೂರಣಗೊಳಿಸಲು ಉತ್ತಮ ಮಾರ್ಗವಾಗಿದೆ. ಇದರ ತಿರುಳು (ಬಾವೆ ಅಥವಾ ಗಂಜಿ) ರುಚಿಯಾಗಿರುತ್ತದೆ ಮತ್ತು ಇದನ್ನು ಐಸ್ ಕ್ರೀಮ್, ಸ್ಮೂಥಿ, ಸಲಾಡ್‌ಗಳು ಮತ್ತು ಇತರ ಭಕ್ಷ್ಯಗಳಿಗೆ ಸೇರಿಸುವ ಮೂಲಕ ತಿನ್ನಬಹುದು. ಕಚ್ಚಾ ತೆಂಗಿನ ಎಣ್ಣೆಯನ್ನು ಅಡುಗೆಗೆ, ಚರ್ಮ ಮತ್ತು ಕೂದಲಿನ ಆರೈಕೆಗಾಗಿ ಬಳಸಬಹುದು.

(ಆಧಾರ)

ಚಿತ್ರ ಕೃಪೆ: ಅಂತರ್ಜಾಲ ತಾಣ