ತೊಂಡೆಕಾಯಿ ತಲಸಣಿ

ತೊಂಡೆಕಾಯಿ ತಲಸಣಿ

ಬೇಕಿರುವ ಸಾಮಗ್ರಿ

ಬೇಕಾಗುವಷ್ಟು ತೊಂಡೆಕಾಯಿ, ರುಚಿಗೆ ಉಪ್ಪು, ಮೆಣಸಿನ ಹುಡಿ, ಎಣ್ಣೆ, ಬೆಳ್ಳುಳ್ಳಿ

 

ತಯಾರಿಸುವ ವಿಧಾನ

ತೊಂಡೆಕಾಯಿಗಳನ್ನು ಸ್ವಚ್ಛಗೊಳಿಸಿ ಉದ್ದಕ್ಕೆ ಕತ್ತರಿಸಬೇಕು. ತುಂಡುಗಳಿಗೆ ಉಪ್ಪು ಮತ್ತು ಖಾರಪುಡಿಯನ್ನು ಮಿಶ್ರಮಾಡಿ ಸ್ವಲ್ಪ ಹೊತ್ತು ಇಡಬೇಕು. ಎಣ್ಣೆ ಹಾಕಿ, ಒಗ್ಗರಣೆ ಜೊತೆ ಬೆಳ್ಳುಳ್ಳಿ ಜಜ್ಜಿ ಸೇರಿಸಿ ಹುರಿದು ಹೋಳು(ತುಂಡು)ಗಳನ್ನು ಹಾಕಿ ಬೇಯಿಸಬೇಕು. ನೀರು ಹಾಕಬಾರದು. ಎಣ್ಣೆಯಲ್ಲಿಯೇ ಬೇಯಿಸಬೇಕು. ಆಗಾಗ ಮಗುಚುತ್ತಿರಬೇಕು. ಸರಿಯಾಗಿ ಬೆಂದಿದೆ ಅನಿಸಿದ ಮೇಲೆ ಖಾರ ಬೇಕಾದಲ್ಲಿ ಖಾರಪುಡಿ ಸೇರಿಸಬೇಕು ಹಾಕಬೇಕು. ಈ ಖಾದ್ಯಕ್ಕೆ ಬೇರೇನೂ ಹಾಕಬೇಕಾಗಿಲ್ಲ. ಹಾಗೆಯೇ ತಿನ್ನಬಹುದು. ಸ್ವಲ್ಪ ಖಾರ ಹೆಚ್ಚು. ತೊಂಡೆಕಾಯಿ ತಲಸಣಿ ರೆಡಿ.

(ಇದು ಗೌಡ ಸಾರಸ್ವತ ಬ್ರಾಹ್ಮಣರು (ಕೊಂಕಣಿ ಭಾಷಿಗರು) ಹೆಚ್ಚಾಗಿ ಮಾಡುವ ಅಡುಗೆ)

-ರತ್ನಾ ಕೆ.ಭಟ್ ತಲಂಜೇರಿ