ತೊಂಡೆಹಣ್ಣು ಪಚ್ಚಡಿ
ಬೇಕಿರುವ ಸಾಮಗ್ರಿ
ತೊಂಡೆಹಣ್ಣುಗಳು ೧೦,ಹಸಿಮೆಣಸು ೩, ಮೊಸರು ೨ ಸೌಟು, ರುಚಿಗೆ ಉಪ್ಪು, ಒಗ್ಗರಣೆಗೆ, ತುಪ್ಪ, ಒಣಮೆಣಸು, ಸಾಸಿವೆ, ಬೇವಿನ ಸೊಪ್ಪು ಚೂರು.
ತಯಾರಿಸುವ ವಿಧಾನ
ತೊಂಡೆಹಣ್ಣುಗಳನ್ನು ಸಣ್ಣಗೆ ಕತ್ತರಿಸಿ, ಉಪ್ಪು ಹಾಕಿ ಬೇಯಿಸ ಬೇಕು. ಅದು ತಣ್ಣಗಾದ ಮೇಲೆ ಚೆನ್ನಾಗಿ ಕಿವುಚಿಕೊಳ್ಳ ಬೇಕು. ಕಿವುಚಿದ ತೊಂಡೆಹಣ್ಣಿಗೆ ಮೊಸರು, ಹಸಿಮೆಣಸು ಸಣ್ಣಗೆ ಕೊಚ್ಚಿ ಹಾಕಬೇಕು. ಈ ಮಿಶ್ರಣ ಕ್ಕೆ ಬೇವಿನಸೊಪ್ಪು ಒಗ್ಗರಣೆ ಹಾಕಿದರೆ ಪಚ್ಚಡಿ ತಯಾರು.
-ಅಶ್ವಿನಿಮೂರ್ತಿ ಅಯ್ಯನಕಟ್ಟೆ