ದಡ್ಡ ಕವಿ!

ದಡ್ಡ ಕವಿ!

ಕವನ

ದಡ್ಡ ಕವಿ!

 

ಕವಿ ಜಾಣನಾದರೆ,
ಬರೆಯಬಲ್ಲ ಛಂದೋಬದ್ದ ಕವಿತೆ
ಭಾವುಕನಾದರೆ ಗೀಚಬಹುದು
ಭಾವ ಚಿತ್ತಾರದ ಭಾವಗೀತೆ
ಗದ್ಯ ಪದ್ಯದ ಗೊಂದಲವಿದ್ದರೆ
ಬರೆಯಬಹುದು ಚಂಪೂ ಕಾವ್ಯ

ಮಾತಲ್ಲಿ ಚತುರನಾದರೆ

ಆಶುಕವಿತೆ
ಅವಸರದವನಾದರೆ ತ್ರಿಪಧಿ ಚೌಪದಿ

ಹನಿ ಮಿನಿಗವಿತೆ ?
ಹೊಸತನದ ಹಮ್ಮಿದ್ದರೆ

ಪ್ರತಿಮೆಗಳೂಲ್ಲ ನವ, ನವ್ಯ ಕವಿತೆ!

ಅರಿಭಯಂಕರ, ಪ್ರಚಂಡನಾದರೆ
ಮಹಾಕಾವ್ಯ, ಕಾವ್ಯ ಮೀಮಾಂಸೆ?
ಆದರೆ,
ಭೂಮಿಗೆ ಮೂತಿ ಇಕ್ಕಿ,
ಈ ನೆಲದ ಕಾವ್ಯ ಬರೆಯಲು
ದಡ್ಡ ಕವಿಯೇ ಬೇಕು! 

Comments