Skip to main content
ಕವನ
ದಣಿದಿದೆ... ದೇಹ
ಮಣಿದಿದೆ,
ವಿಷಯಗಳ ಅರಿಯುವಲ್ಲಿ
ದಣಿದಿದೆ,
ಅಲ್ಪಾನುಭವಕ್ಕೆ ಅನ್ಯರೆದುರು
ಮಣಿದಿದೆ,
ಹುಚ್ಚು ಮನಸ್ಸು ತಾಳವಿಲ್ಲದೇ
ಕುಣಿದಿದೆ,
ತಪ್ಪು ಕರ್ಮಗಳಲ್ಲೇ
ತಣಿದಿದೆ,
ಅರಿಷಡ್ವರ್ಗಗಳಲ್ಲೇ ಬದುಕು
ಹೆಣೆದಿದೆ,
ಹೊರಬರುವಷ್ಟರಲ್ಲಿಯೇ
ದಣಿದು ಮಣಿದಿದೆ,
ದಣಿದಿದೆ...ದೇಹ
ಮಣಿದಿದೆ.