ದಯವಿಟ್ಟು ನಂತರ ಪ್ರಯತ್ನಿಸಿ…

ದಯವಿಟ್ಟು ನಂತರ ಪ್ರಯತ್ನಿಸಿ…

ಪುಸ್ತಕದ ಲೇಖಕ/ಕವಿಯ ಹೆಸರು
ಡಾ. ವೆಂಕೋಬರಾವ್ ಎಂ. ಹೊಸಕೋಟೆ
ಪ್ರಕಾಶಕರು
ವಂಶಿ ಪಬ್ಲಿಕೇಷನ್ಸ್, ನೆಲಮಂಗಲ, ಬೆಂಗಳೂರು - ೫೬೨ ೧೨೩
ಪುಸ್ತಕದ ಬೆಲೆ
ರೂ.೧೦೦.೦೦, ಮುದ್ರಣ: ೨೦೨೨

"ದಯವಿಟ್ಟು ನಂತರ ಪ್ರಯತ್ನಿಸಿ..." ಇದೊಂದು ರಾಜಕೀಯ ಕಾದಂಬರಿ, ಆಧುನಿಕತೆಯಲ್ಲಿ ಇಂದಿನ ರಾಜಕೀಯ ರಂಗಿನಾಟಗಳ ಸ್ಪಷ್ಟ ಚಿತ್ರಣವನ್ನು ಕೊಡಲು ಇಲ್ಲಿ ಪ್ರಯತ್ನಿಸಿರುವೆ. ಹಾಗೆಯೇ ಸಾಮಾಂಜಿಕವಾಗಿ ಹೆಣ್ಣು ಹೇಗೆ ಶೋಷಣೆಗೆ ಗುರಿಯಾಗುತ್ತಾಳೆ? ಹೆಣ್ಣು, ಹೆಣ್ಣಿಗೆ ಸಹಾಯ ಮಾಡಿದರೇ, ಆಕೆಯ ಬದುಕನ್ನು ಬದಲಿಸಬಹುದು ಎನ್ನುವುದಕ್ಕೆ ಈ ಕಾದಂಬರಿ ಸಾಕ್ಷಿಯಾಗುತ್ತದೆ. ಅಲ್ಲದೇ ಮನಸ್ಸು ಮಾಡಿದರೆ ಜೀವನದಲ್ಲಿ ಏನು ಬೇಕಾದರೂ ಸಾಧಿಸಬಹುದು ! ತನ್ನ ಗುರಿಯನ್ನು ಮುಟ್ಟಬಹುದು ! ಕುಟುಂಬ, ಸಮುದಾಯ ಮತ್ತು ಸಮಾಜ ಹಾಗೂ ರಾಜಕೀಯದ, ಅಧಿಕಾರಿ ವರ್ಗದವರ ಸಹಾಯ ಸಿಕ್ಕಾಗ ಗುರಿಯನ್ನು ತಲುಪುವುದು ಸುಲಭವಾಗುತ್ತದೆ. ಕೆಲ ರಾಜಕಾರಣಿಗಳು ಮತ್ತು ಅವರ ಸಂಬಂಧಿಕರೇ, ಸಮಾಜ ಘಾತುಕ ಶಕ್ತಿಗಳಲ್ಲಿ ತೊದಗಿ, ಸಮಾಜದಲಿ ಅಶಾಂತಿಯನ್ನುಂಟು ಮಾಡುತ್ತಾರೆ ಎಂಬುದನ್ನು ಪ್ರಸ್ತುತ ವಾಸ್ತವ ಘಟನೆಗಳನ್ನಾಧರಿಸಿ, ಅವುಗಳನ್ನೇ ವಸ್ತುವನ್ನಾಗಿಸಿಗೊಂಡು ಕಾದಂಬರಿಯನ್ನು ಬರೆದಿರುವೆನು. ರಾಜಕೀಯ, ಸಾಮಾಜಿಕ ಮತ್ತು ಪ್ರಸಕ್ತ ಆರ್ಥಿಕ ಸ್ಥಿತಿಗಳು ಮತ್ತು ವ್ಯಾಪಾರೀ ಮನೋಭಾವದ ಪಾತ್ರಗಳಲ್ಲಿ ಬಂದು ಹೋಗುವುದನ್ನು ಕಾಣಬಹುದು. ಎಂದು ತಮ್ಮ ಮಾತುಗಳಲ್ಲಿ ತಿಳಿಸಿದ್ದಾರೆ ಲೇಖಕರಾದ ಡಾ. ವೆಂಕೋಬರಾವ್ ಎಂ ಹೊಸಕೋಟೆ ಇವರು.