ದಯೆ

ದಯೆ

ಕವನ

ಮಾನವತೆಯ ಮಂತ್ರ

ದಯೆಯಿರಲಿ ಮನುಜಗೆ 

ಮರೆತು ಯಾಂತ್ರಿಕವಾಗದಿರಲಿ ನಗೆ 

ಮರವು ನೆರಳಾಗುವುದು ಹಲವರಿಗೆ

ಪ್ರತಿಫಲ ಬಯಸದು ಕೊನೆವರೆಗೆ.

 

ಪರರ ನೋವ ವಿನಿಮಯ 

ಆಲಿಸಲು ನೋವು ವಿಲೋಮ

ನೋವ ಉಂಡವರಿಗೆ ಪ್ರೇಮ

ಹಂಚುವುದಾಗಲಿ ಜಗದ ನಿಯಮ.

 

ಬತ್ತದಿರಲಿ ಒಲವಿರದೆ ಎದೆ 

ಹರಿಯುತಿರಲಿ ಮಮತೆಯ ಸುಧೆ 

ಕುಗ್ಗಿದವರ ಕಂಡು ಹಿಗ್ಗದೆ

ನೆರವಾಗುವ ನಾವು ಹಿಂಜರಿಯದೆ.

-ನಿರಂಜನ ಕೇಶವ ನಾಯಕ, ಮಂಗಳೂರು.

ಚಿತ್ರ ಕೃಪೆ: ಇಂಟರ್ನೆಟ್ ತಾಣ