ದಶರಥಾತ್ಮಜ ಶ್ರೀರಾಮ

ದಶರಥಾತ್ಮಜ ಶ್ರೀರಾಮ

ಕವನ

ಮಹಾವಿಷ್ಣುವಿನ ಸಪ್ತಮಾವತಾರ

ಭೂಮಿಗಿಳಿದ ಭಗವಂತನ ನರಾವತಾರ

ಸರಯೂ ಪುಣ್ಯ ನದಿ ತೀರ

ಸಾಕೇತದ ಪವಿತ್ರ ನೆಲ ಸಾರ//

 

ದಶರಥಾತ್ಮಜ ಪ್ರಿಯ ನಂದನ

ಕೌಸಲ್ಯಾ ಮಡಿಲ ಕಂದನು

ಚೈತ್ರಶುಕ್ಲ  ಮಾಸದಿ ಉದಿಸಿದ

ನವಮಿಯ ಶುಭದಿನದಿ ಜನಿಸಿದ//

 

ರಾಮನೇ ಮನಸ  ಪರಿಶುದ್ಧ ಬೆಳಕು

ಆತ್ಮ ಮನಸುಗಳ ಸಂಯಮದ ಸರಕು

ದುಷ್ಟ ಶಕ್ತಿಗಳ ಸರ್ವನಾಶ

ದೈವೀ ಶಕ್ತಿಗಳ ಉಪಾಸನೆ //

 

ವೈಭವದ ರಾಮನವಮಿ ಆರಾಧನೆ

ಅಹೋರಾತ್ರಿ ನಡೆಯುವ ಭಜನೆ

ಸೀತಾರಾಮ ಕಲ್ಯಾಣೋತ್ಸವ ಆಚರಣೆ

ಶ್ರೀರಾಮ ದೇವರ ಜನುಮ ದಿನ//

 

ಶಬರಿಗೆ ಮೋಕ್ಷವ ತಂದ

ಮಾತೆ ಅಹಲ್ಯೆಯ ಪೊರೆದ

ಹನುಮಂತ ಪ್ರೀತ ರಾಜಾರಾಮ

ಶಿಷ್ಟರ ಪರಿಪಾಲಿಸಿದ ಸೋಮ

 

-ರತ್ನಾ ಕೆ.ಭಟ್, ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್