ದಸರಾ ಹಬ್ಬವನ್ನು ಆಚರಣೆಗೆ ತಂದವರು...

ದಸರಾ ಹಬ್ಬವನ್ನು ಆಚರಣೆಗೆ ತಂದವರು...

ದಸರಾ ಹಬ್ಬ ನಾಡದೇವಿಯ ಹಬ್ಬ.'ನವರಾತ್ರಿ, ಶರನ್ನವರಾತ್ರಿ, ಮಹಾನವಮಿ, ಶಾರದೋತ್ಸವ ' ಹೆಸರಿನಿಂದಲೂ ಹೇಳುವ ರೂಢಿಯಿದೆ. ಕ್ರಿ.ಶಕ ೧೪ನೇ ಶತಮಾನದಲ್ಲಿ ವಿಜಯನಗರದ ಅರಸರ ಆಡಳಿತ ಕಾಲದಲ್ಲಿ, ಅರಸೊತ್ತಿಗೆಯ ಸಾಮಂತರು, ಪಾಳೆಯಗಾರರು, ನಾಯಕರು, ಅಧೀನ ರಾಜರು ಕಪ್ಪಕಾಣಿಕೆ ಒಪ್ಪಿಸುವುದು ಅಶ್ವಯುಜ ಮಾಸದಲ್ಲಿ ಪಾಡ್ಯದಿಂದ ನವಮಿವರೆಗಿತ್ತು. ಈ ಒಂಬತ್ತು ದಿನಗಳಲ್ಲಿ ನೀಡಿ ಆದಮೇಲೆ ದಶಮಿಯಂದು 'ದಿಗ್ವಿಜಯ'ಕ್ಕೆ ಹೊರಡುತ್ತಿದ್ದರಂತೆ. ಆಗ ಮಳೆಯೂ ಕಡಿಮೆಯಾಗುವ ದಿನಗಳು. ವಿಜಯನಗರದ ಅರಸರು ಮೊಟ್ಟಮೊದಲು ಆರಂಭಿಸಿದ ಈ ಹಬ್ಬದಲ್ಲಿ ೯ ದಿನಗಳೂ ಮನರಂಜನೆ, ಸಾಂಸ್ಕೃತಿಕ ಪ್ರದರ್ಶನಗಳು, ಸಾಹಿತ್ಯ ಸಂಗೀತ, ಕತ್ತಿಕಾಳಗ, ಮಲ್ಲಯುದ್ಧ ಮುಂತಾದವುಗಳನ್ನು 'ಮಹಾನವಮಿ ದಿಬ್ಬ'ದ ಮೇಲೆ ಮಾಡುತ್ತಿದ್ದರಂತೆ. ಹಂಪೆಯಲ್ಲಿ ಈ ದಿಬ್ಬ ಈಗಲೂ ಇದೆ. ರಾಜ ಕೃಷ್ಣದೇವರಾಯನ ಕಾಲದಲ್ಲಿ ಬಹಳ ವಿಜೃಂಭಣೆಯಿಂದ 'ದಸರಾ'ಆಚರಣೆ ಬಗ್ಗೆ ಉಲ್ಲೇಖವಿದೆ. ಮುಂದೆ ಮೊಗಲರ ಆಳ್ವಿಕೆಯಲ್ಲಿ ನಿಂತು ಹೋಗಿ, ಪುನ:ಕ್ರಿ.ಶಕ ೧೬೧೦ ರಲ್ಲಿ ಯದುವಂಶದ ಅರಸರಾದ ರಾಜಾ ಒಡೆಯರ್ ಶ್ರೀರಂಗಪಟ್ಟಣದಲ್ಲಿ ದಸರಾವನ್ನು ಆರಂಭಿಸಿದರೆಂದು ತಿಳಿದು ಬರುತ್ತದೆ. ದೇವಿ ಚಾಮುಂಡಿ (ದುರ್ಗಾಮಾತೆ)ಯು ವಿವಿಧ ಅವತಾರವೆತ್ತಿ ದುರುಳ ಮಹಿಷಾಸುರನನ್ನು ಒಂಬತ್ತು ರಾತ್ರಿಗಳೂ ಕಾದಾಡಿ ಹನನ ಮಾಡಿದ ಪ್ರತೀಕ ನವರಾತ್ರಿ. ವಿಜಯ ಸಾಧಿಸಿದ ಕಾರಣ ವಿಜಯದಶಮಿ.ಮೈಸೂರಿನ ನಾಡದೇವತೆ ಚಾಮುಂಡಿಯ ಮೆರವಣಿಗೆ. ಬನ್ನಿ ಮಂಟಪದವರೆಗೆ ಅಂಬಾರಿಯನ್ನು ಹೊತ್ತ ಗಜರಾಜನ ಈಗಲೂ ಇದೆ. ಸಾಂಪ್ರದಾಯಿಕವಾಗಿ ರಾಜ ಒಡೆಯರ್ ಕಾಲದಲ್ಲಿ ಆರಂಭಿಸಿದ ದಸರಾ ಹಬ್ಬ,ನಾಡಹಬ್ಬ ವಿಶ್ವವಿಖ್ಯಾತವಾಗಿದೆ.

ಸಂಗ್ರಹ:ರತ್ನಾ ಕೆ ಭಟ್ ತಲಂಜೇರಿ,ಪುತ್ತೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ