ದಿನಕರ...

ದಿನಕರ...

ಕವನ

ಮೆರೆಯುವ ದಿನಕರ ಮೂಡಣ ದಾರಿಲಿ

ಅಂಬರವೇರಿದ ಸಮಯದ ತೇರನ್ನೇರಿದ

 

ಕನಸಿನ ಶಯನಕೆ ನೀರನ್ನೆರಚುತ

ಓಕುಳಿ ಹಾಡಿದ ಬದುಕಿಗೆ ರಂಗನ್ನು ಬಳಿದ

 

ದುಂಬಿಯ ಗಾಳಿಯ ಕೋಗಿಲೆ ನಾದವ

ಗ್ರಹಿಸುತ್ತಾ ಬಂದ ಬಾನಲಿ ಮೋಡಗಳನು ತಂದ

 

ಸುಮಲತ ಕಂಪಿನ ಹಸಿರಿನ ತಂಪಿನ

ಅನುಭವಿಸಿ ಹೊಂಟಾ ನೆತ್ತಿಯ ಸುಡೋ ತನಕ ಬಂದ..

 

ಹೊಸಹೊಸ ಕನಸಿಗೆ ದಾರಿಯನುಡುಕುವ

ಮನಸ್ಸನ್ನು ಬೆಸೆದ ಕಿರಣದಿ ಹೊಂಬೆಳಕನು ತಂದ..

 

ಬಗೆಬಗೆ ಲಘುಬಗೆ ಘಟನೆಯ ಉಳಿಸುತ

ಪಡುವಣಕೇ ಹೊಂಟಾ ಕಡಲಲಿ ಇಳಿಯುತಲಿ ಹೊಂಟಾ..

 

-‘ಮೌನರಾಗ’ ಶಮೀರ್ ನಂದಿಬೆಟ್ಟ

(ದ. ರಾ. ಬೇಂದ್ರೆಯವರ "ಮೂಡಲ ಮನೆಯ ಮುತ್ತಿನ ನೀರಿನ ಎರಕವಾ ಹೊಯ್ದಾ" ಕವನದಿಂದ ಪ್ರೇರಿತವಾದ ಸಾಲುಗಳು)

ಚಿತ್ರ್