ದಿನಚರಿ........

ದಿನಚರಿ........

ಕವನ

ದಿನಚರಿ........

ನಿನ್ನ ನಾನು ಪ್ರೀತಿಸುವುದು ಎಷ್ಟು?ನಮ್ಮ ನೋಡಿದ ಜನ ಹೊಟ್ಟೆಕಿಚ್ಚು ಪಡುವಷ್ಟು.
ಮತ್ತೇನು ಬೇಡೆ ನಿನ್ನ ಎಳ್ಳಷ್ಟು
ನಿನ್ನ ಪ್ರೀತಿ ಸಾಕು ಇಷ್ಟೇ ಇಷ್ಟು.

ಸೂರ್ಯನಿಗೆ ಮುಂಚೆ ನೀನು ಮಂಜಿನಲಿ ಎದ್ದೆ
ಎಷ್ಟೊಂದು ಬೆಳಗು ಬಂದರು ನನಗಿನ್ನು ನಿದ್ದೆ
ಎಷ್ಟೊತ್ತಾದರೂ ಇನ್ನು ಏಕೆ ನಿದ್ದೆ?
ಮುತ್ತಿಟ್ಟು,ಮುದ್ದಿಸಿದ ರಾಣಿ ಮನಸು ಮಾಡಿದ ಮೇಲೆ ಇನ್ನೆಲ್ಲಿಯ ನಿದ್ದೆ
ಸರಿ,ನೀ ತಂದ ಬಿಸಿ ಬಿಸಿ ನೊರೆ ನೊರೆ ಕಾಫಿಗಾಗಿ
ನಿನ್ನ ಗುಡ್ ಮಾರ್ನಿಂಗ್ ಗಾಗಿ ಹೊಸ ದಿನಕಾಗಿ ನಾನೆದ್ದೆ
ನಿನಗಾಗಿ ಕೇವಲ ನಿನಗಾಗಿ.

ಈಗ ಸರದಿ ನನ್ನದು, ಕೊಟ್ಟ ಅಷ್ಟು ಮುತ್ತುಗಳ ಎಣಿಸಿ
ಬಡ್ಡಿ ಸಮೇತ ವಾಪಸು ಮಾಡುವ ಸರದಿ ನನ್ನದು
ಸಾಕು ಬಿಡಿ ನಾಳೆಗೊಂದಿಷ್ಟು ಇರಲಿ ಎಂದೆ ನೀನು
ಕೊಸರಾಡಿ ಗಡಿಯಾರ ನೋಡಿ ಬ್ರಷ್ ಗೆ ಟೂತ್ ಪೇಸ್ಟ್ ಹಾಕಿ
ಬಾತ್ ರೂಮಿಗೋಡಿದೆ ನಾನು
ಸ್ನಾನ ಮಾಡಿ ದೇವರಿಗೊಂದು ಹಲೋ ಹೇಳಿದಾಗ ನೀ ಮಾಡಿದ
ಉಪ್ಪಿಟ್ಟು ರೆಡಿ.
ತಿಂದು ಮುಗಿಸಿದಾಗ ಕಾಯುತ್ತಿದೆ ಕೆಲಸಕ್ಕೋಗಲು ನನ್ನ ಹೋಂಡ ಗಾಡಿ

ಹೋಗಿ ಬರುವೆನೆಂದು ನಾನು
ಹೋಗುವಾಗ ಮುಗುಳು ನಕ್ಕು
ಬೇಗ ಬನ್ನಿ ಸಂಜೆ ನೀವು
ಕಾಯುತಿರುವೆ ಇಲ್ಲಿ ನಾನು

ಬರಲು ಮನೆಗೆ ಸಂಜೆ ನಾನು
ತಿಳಿಯಾಗಿದೆ ನೋಡು ಬಾನು.

ನಿತ್ಯದಂತೆ ಸಂಜೆ ನಾವು ಮೆಲ್ಲಮೆಲ್ಲನೆ ನಡೆಯುತಿರಲು
ಹೆಜ್ಜೆ ಹೆಜ್ಜೆ ಗೆಜ್ಜೆ ಸದ್ದು
ನನ್ನ ಮಾತಿನಿಂದ ನೀನು
ನಗುವೆ ಆಗ ಬಿದ್ದು ಬಿದ್ದು

ದೂರ ಪಯಣ ಮುಗಿಸಿ ಸೂರ್ಯ ಮುಳುಗುತಿರಲು
ಸಂದ್ಯಾ ಸಮಯದಲಿ ಹಕ್ಕಿ ಗೂಡು ಸೇರಿದೆ
ನಿತ್ಯ ಯಾತ್ರೆ ನಡೆಯುತಿರಲು ಈ ರವಿಯು
ಸಂದ್ಯಳಲ್ಲೆ ಮುಳುಗಿದೆ, ಆಗ ಪ್ರೀತಿ ಆವರಿಸಿದೆ
ಕೊಂಚ ಮಾತು ಕೊಂಚ ಹರಟೆ
ಮದ್ಯೆ ಮದ್ಯೆ ಸ್ವಲ್ಪ ಮೌನ
ಮೌನದಲ್ಲೆ ಮದುರಗಾನ

ಈಗ ಚುಕ್ಕಿ ಸಮಯ
ದು:ಖ ನೋವು ಎಲ್ಲ ಮಾಯ
ನಾನು ನೀನು ಅಲ್ಲ ಈಗ
ನಾನು ನೀನೇ, ನೀನು ನಾನೇ
ನನ್ನಲಿ ನೀನು ನಿನ್ನಲಿ ನಾನು...................

ರವೀ..........

Comments