ದಿನಬಳಕೆಯಲ್ಲಿ ಕನ್ನಡ ಪದದ ಬದಲು ಆಂಗ್ಲ ಪದ

ದಿನಬಳಕೆಯಲ್ಲಿ ಕನ್ನಡ ಪದದ ಬದಲು ಆಂಗ್ಲ ಪದ

ಬರಹ

ನಮ್ಮ ದಿನಬಳಕೆಯಲ್ಲಿ ನಾವು ಕನ್ನಡ ಪದ ಉಪಯೋಗಿಸುವ ಬದಲು ಆಂಗ್ಲ ಪದಗಳನ್ನು ಉಪಯೋಗಿಸಿ ಕನ್ನಡ ಪದಗಳನ್ನು ಕಣ್ಮರೆ ಹೇಗೆ ಮಾಡುತ್ತಿದ್ದೇವೆಂದು ನೋಡೋಣ:

೧. light off ಮಾಡು - "ದೀಪ ಆರಿಸು"
೨. door open ಮಾಡು - "ಬಾಗಿಲನ್ನು ತೆಗೆ"
೩. window ತೆಗಿ - "ಕಿಟಕಿಯನ್ನು ತೆಗಿ"
೪. ಊಟ ready ಇದೆ - "ಊಟ ತಯಾರಾಗಿದೆ"
೫. ಯಾರಾದರು ನಮಗೆ ಸಹಾಯ ಮಾಡಿದರೆ ನಾವು ತಕ್ಷಣ thanks ಎನ್ನುತ್ತೇವೆ. thanks ಬದಲು "ಧನ್ಯವಾದ" ಹೇಳಬಹುದಲ್ವ.
೬. ಇವತ್ತು ನಮ್ಮ ಮನೆಯಲ್ಲಿ beans ಹುಳಿ (ನಮ್ಮ ಕಡೆ ಸಾಂಬಾರ್ ಗೆ ಹುಳಿ ಎನ್ನುತ್ತೇವೆ). ಅದನ್ನೆ "ಹುರುಳಿಕಾಯಿ ಹುಳಿ" ಅಂತ ಹೇಳಿ.
೭. ಬಟ್ಟೆ wash ಮಾಡಬೇಕು - ಬಟ್ಟೆ ಒಗಿಯಬೇಕು
೮. ಇಲ್ಲೆ left ಅಲ್ಲಿ ಇದೆ ನೋಡಿ shop - ಇಲ್ಲೆ ಎಡದಲ್ಲಿ ಇದೆ ಅಂಗಡಿ
೯. market ಗೆ ಹೋಗಿ ಹೋಗಬೇಕು - ಮಾರುಕಟ್ಟೆಗೆ ಹೋಗಬೇಕು.
೧೦.gold ಅಂಗಡಿಗೆ ಹೋಗಬೇಕು - ಚಿನ್ನದ ಅಥವ ಆಭರಣದ ಅಂಗಡಿಗೆ ಹೋಗಬೇಕು.
೧೧. ಹುಷಾರಿಲ್ಲ, doctor ಹತ್ರ ಹೋಗ್ಬೇಕು - ಹುಷಾರಿಲ್ಲ, ವೈದ್ಯರ ಹತ್ರ ಹೋಗ್ಬೇಕು.

ಮೇಲಿರುವುದೆಲ್ಲ ಸಣ್ಣ ಉದಾಹರಣೆ. ಹೀಗೆ ಮನೆಯಲ್ಲಿ, ಕಚೇರಿಗಳಲ್ಲಿ, ಅಂಗಡಿಗಳಲ್ಲಿ, ಆಸ್ಪತ್ರೆಯಲ್ಲಿ ನಾವು ಆಂಗ್ಲ ಪದಗಳನ್ನು ಬಳಸುತ್ತೇವೆ. ಅದರ ಬದಲು ಕನ್ನಡ ಪದವನ್ನೇ ಉಪಯೋಗಿಸಲು ಅಭ್ಯಾಸ ಮಾಡಿದರೆ ಹೇಗೆ??? ನಿಮ್ಮ ಅನಿಸಿಕೆಗಳನ್ನು ತಿಳಿಸಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet