ದಿವ್ಯ ಕಾಶಿ-ಭವ್ಯ ಕಾಶಿ
ಕವನ
ನಮೋ,ನಮೋ,ನಮೋ,ನಮೋ
ಕಾಲ ಭೈರವನಿಗೆ ನಮೋ,ನಮೋ
ಕಾಶಿ ವಿಶ್ವನಾಥಗೆ ನಮೋ ನಮೋ
ನವ್ಯತೆ- ದಿವ್ಯತೆಗೆ ನಮೋ,ನಮೋ.
ಪ್ರಾಂಜಲ ಗಂಗಾಮಾತೆಗೆ ನಮೋ ನಮೋ
ಕಾಶಿ ಪುರಾಧಿಶ್ವರಿಗೆ ನಮೋ,ನಮೋ
ಮಾತಾನ್ನ ಪೂರ್ಣೇಶ್ವರಿಗೆ ನಮೋ ನಮೋ
ಪಾಪನಾಶಿನಿ ಪುಣ್ಯ ರೂಪಿಣಿಗೆ ನಮೋ ನಮೋ.
ಕಾಶಿ ಕ್ಷೇತ್ರ ಪಾಲಕನಿಗೆ ನಮೋ ನಮೋ
ವೈಭವದ ನವ ನಿರ್ಮಾಣಕೆ ನಮೋ ನಮೋ
ಪುಣ್ಯ ಕ್ಷೇತ್ರ ನವ ಕಾಶಿಗೆ ನಮೋ ನಮೋ
ಶಂಕರಾಚಾರ್ಯರ ಧರ್ಮೋದ್ಧಾರಕೆ
ನಮೋ ನಮೋ.
ಗಂಗಾರತಿಯ ಬೆಳಕಿನ ಬಿಂಬಕೆ ನಮೋ ನಮೋ
ದಿವ್ಯ,ಭವ್ಯ ನವ ನಿರ್ಮಾಣಕೆ ನಮೋ ನಮೋ
ಸದ್ಭಕ್ತರ ಮಹಾ ಕಾಯಕಕ್ಕೆ ನಮೋ ನಮೋ
ಭಾರತೀಯರ ನನಸಿನ ಸರಕಾರಕ್ಕೆ ನಮೋ ನಮೋ.
-ವೀಣಾ ಕೃಷ್ಣಮೂರ್ತಿ, ದಾವಣಗೆರೆ
ಚಿತ್ರ ಕೃಪೆ: ಇಂಟರ್ನೆಟ್ ತಾಣ
ಚಿತ್ರ್