ದೀವಿ ಹಲಸಿನ ವಡೆ

ಬೇಕಿರುವ ಸಾಮಗ್ರಿ
ಬೆಳ್ತಿಗೆ ಅಕ್ಕಿ ೧/೨ ಕೆ.ಜಿ., ದೀವಿ ಹಲಸಿನ ಹೋಳು ೩ ಕಪ್, ಜೀರಿಗೆ ೧ ಚಮಚ, ಕುಂಟೆ ಮೆಣಸು ೪-೫, ಉಪ್ಪು ರುಚಿಗೆ, ಕರಿಯಲು ಎಣ್ಣೆ
ತಯಾರಿಸುವ ವಿಧಾನ
೩ ಗಂಟೆ ಮೊದಲೇ ನೆನೆ ಹಾಕಿದ ಬೆಳ್ತಿಗೆ ಅಕ್ಕಿಯನ್ನು ದೀವಿ ಹಲಸಿನ ಹೋಳು, ಜೀರಿಗೆ, ಕುಂಟೆ ಮೆಣಸು, ಉಪ್ಪು ಹಾಕಿ ಗಟ್ಟಿಗೆ ನುಣ್ಣಗೆ ರುಬ್ಬಿ ವಡೆಯಂತೆ ತಟ್ಟಿ ಕರಿಯಿರಿ. ಬಿಸಿಬಿಸಿ ತಿನ್ನಲು ರುಚಿ.
- ಸಹನಾ ಕಾಂತಬೈಲು, ಮಡಿಕೇರಿ