'ದುಆ' ಹೆಸರಿನ ವಿಶಾಲ ಅರ್ಥಗಳು!

'ದುಆ' ಹೆಸರಿನ ವಿಶಾಲ ಅರ್ಥಗಳು!

ಬಾಲಿವುಡ್ ಸುಪ್ರಸಿದ್ಧ ದಂಪತಿಗಳಾದ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ತಮ್ಮ ಮಗುವಿನ ಹೆಸರನ್ನು ಬಹಿರಂಗಪಡಿಸಿದರು: 'ದುವಾ ಪಡುಕೋಣೆ ಸಿಂಗ್'; ಮಗು ಸೆಪ್ಟೆಂಬರ್ 8, 2024 ರಂದು ಜನಿಸಿತ್ತು. ಮಗುವಿನ ಮೊದಲ ಚಿತ್ರವನ್ನು ಸಾಮಾಜಿಕ ಜಾಲತಾಣವಾದ Instagramನಲ್ಲಿ ಹಂಚಿಕೊಂಡ ಅವರು, ತಮ್ಮ ಪ್ರಾರ್ಥನೆಯ ಪ್ರತಿಫಲವಾದ ಕಾರಣ ಮಗುವಿನ ಹೆಸರು: 'ದುವಾ' ಆಗಿದೆ ಎಂದು ವಿವರಿಸಿದರು.

'ದುವಾ' ಎಂದರೆ 'ಪ್ರಾರ್ಥನೆ' ಅಥವಾ 'ಬೇಡಿಕೆ' ಎಂದರ್ಥ; ಇದು ಭಾರತದ ವಿವಿಧ ಸಂಸ್ಕೃತಿಗಳು ಮತ್ತು ಧರ್ಮಗಳಾದ್ಯಂತ ಆಳವಾದ ಆಧ್ಯಾತ್ಮಿಕ ಮತ್ತು ಸಾರ್ವತ್ರಿಕ ಪರಿಕಲ್ಪನೆಯನ್ನು ಪ್ರತಿಬಿಂಬಿಸುತ್ತದೆ. ಮಗುವಿನ ಹೆತ್ತವರು ಹೇಳಿದಂತೆ, 'ದುವಾ' ಹೆಸರಿಗೆ ಸುಂದರವಾದ ಅರ್ಥವಿದೆ. ಇದರ ಅರ್ಥ 'ಪ್ರಾರ್ಥನೆ' ಎಂದಾಗಿದೆ. ಈ ಅರ್ಥವು ಹೆಸರಿಗೆ ಆಳವಾದ ಆಧ್ಯಾತ್ಮಿಕ ಮತ್ತು ಪೂಜ್ಯ ಗುಣವನ್ನು ನೀಡುತ್ತದೆ. ವ್ಯಕ್ತಿಯೊಬ್ಬನ ಮತ್ತು ದೇವರ ನಡುವಿನ ಸಂವಹನದ ಪ್ರಬಲ ಪರಿಕಲ್ಪನೆಯನ್ನು 'ದುಆ' ಪ್ರತಿನಿಧಿಸುತ್ತದೆ; 'ದುಆ'ದಲ್ಲಿ ಒಬ್ಬರು ಮಾರ್ಗದರ್ಶನ, ಸಹಾಯ,  ಆಶೀರ್ವಾದವನ್ನು ಬಯಸುತ್ತಾರೆ.

'ದುಆ' ಸಾರ್ವತ್ರಿಕ ಅರ್ಥವನ್ನು ಹೊಂದಿದೆ; ಧರ್ಮಗಳು ಮತ್ತು ಪ್ರದೇಶಗಳಾದ್ಯಂತ ಮಹತ್ವವನ್ನು ಹೊಂದಿದೆ. 'ದುಆ' ಮತ್ತು ಅದರ ಸಮಾನಾರ್ಥಕಗಳ ಪದಗಳು ಆಧ್ಯಾತ್ಮಿಕತೆಗೆ ಮತ್ತು ದೈವಿಕ ಸಂಪರ್ಕದ ಅಗತ್ಯತೆಯನ್ನು ಪ್ರದರ್ಶಿಸುತ್ತದೆ. ಈ ಸಾಂಸ್ಕೃತಿಕ ವಿನಿಮಯವನ್ನು ಭಾರತದೊಳಗೆ ಏಕೀಕರಿಸುವ ಅಂಶವಾಗಿ ನೋಡಲಾಗುತ್ತದೆ; ಇಲ್ಲಿ ವಿವಿಧ ಸಮುದಾಯಗಳು ಒಟ್ಟಿಗೆ ವಾಸಿಸುತ್ತವೆ, ಹಾಗೆಯೇ, ಭಾರತೀಯ ಭಾಷಾ ಭೂದೃಶ್ಯವನ್ನು ಶ್ರೀಮಂತಗೊಳಿಸುತ್ತವೆ.

ವಿವಿಧ ಭಾರತೀಯ ಭಾಷೆಗಳಲ್ಲಿ 'ದುಆ' ಎಂದರೆ ಏನು ಎಂಬುದು ಇಲ್ಲಿದೆ:

ಪ್ರಾರ್ಥನೆ : 'ಪ್ರಾರ್ಥನೆ' ಸಾಮಾನ್ಯ ಪದ; ಪ್ರಾರ್ಥನೆಯು ಅನುಗ್ರಹಗಳನ್ನು, ಮಾರ್ಗದರ್ಶನವನ್ನು, ಅಥವಾ ದೈವಿಕ ಶಕ್ತಿಯಿಂದ ರಕ್ಷಣೆಯನ್ನು ಕೋರುವುದನ್ನು ಒಳಗೊಂಡಿರುತ್ತದೆ. ಇದನ್ನು ಹೆಚ್ಚಾಗಿ ಹಿಂದೂ ಆಚರಣೆಗಳು ಮತ್ತು ವೈಯಕ್ತಿಕ ಭಕ್ತಿಗಳಲ್ಲಿ ಬಳಸಲಾಗುತ್ತದೆ.

ಅರ್ದಾಸ್ : ಈ ಸಿಖ್ ಪ್ರಾರ್ಥನೆಯು ಆಶೀರ್ವಾದ, ಕ್ಷಮೆ, ಮತ್ತು ಶಕ್ತಿಗಾಗಿ ವಾಹೆಗುರು (ದೇವರು) ಗೆ ಮನವಿಯಾಗಿದೆ. ಇದು ನಮ್ರತೆ, ಏಕತೆ, ಮತ್ತು ನಂಬಿಕೆಯನ್ನು ಪ್ರತಿಬಿಂಬಿಸುವ ಪ್ರಾರ್ಥನೆಯಾಗಿದೆ; ಇದನ್ನು ಸಾಮಾನ್ಯವಾಗಿ ಪವಿತ್ರ ಕೂಟಗಳಲ್ಲಿ ಪಠಿಸಲಾಗುತ್ತದೆ.

ಮುನಾಜತ್ : ದೇವರಿಗೆ ವೈಯಕ್ತಿಕ ಮತ್ತು ಹೃತ್ಪೂರ್ವಕ ಪ್ರಾರ್ಥನೆಯನ್ನು ಸೂಚಿಸುವ ಪದ: 'ಮುನಾಜತ್' - ವಿಶಿಷ್ಟವಾಗಿ ಏಕಾಂತತೆಯಲ್ಲಿ ಮಾಡಿದ ಪ್ರಾರ್ಥನೆಯಾಗಿದೆ; ಪ್ರಾಮಾಣಿಕ ಭಕ್ತಿ ಮತ್ತು ದೈವಿಕ ಉಪಸ್ಥಿತಿಗಾಗಿ ಹಾತೊರೆಯುತ್ತದೆ.

ವಝಿಪಾಡು : ಈ ಪದವು ದೇವರಿಗೆ ಭಕ್ತಿಯಿಂದ ಮಾಡಿದ ಅರ್ಪಣೆ ಅಥವಾ ಪ್ರಾರ್ಥನೆಯನ್ನು ಸೂಚಿಸುತ್ತದೆ. ಇದು ಸಾಮಾನ್ಯವಾಗಿ ನಂಬಿಕೆ ಮತ್ತು ಗೌರವದ ಅಭಿವ್ಯಕ್ತಿಯಾಗಿ ಪ್ರತಿಜ್ಞೆ ಮಾಡುವುದನ್ನು ಒಳಗೊಂಡಿರುತ್ತದೆ.

ಆರಾಧನಾ : ಸಂಸ್ಕೃತ ಮತ್ತು ಹಿಂದಿ ಪದದ ಅರ್ಥ: 'ಭಕ್ತಿ' ಅಥವಾ 'ಪೂಜೆ' ಆಗಿದೆ. ಇದು ಪ್ರಾಮಾಣಿಕ, ಆಗಾಗ್ಗೆ ದೀರ್ಘಾವಧಿಯ ಗೌರವ ಅಥವಾ ದೇವತೆಯ ಕಡೆಗೆ ನಿರ್ದೇಶಿಸುವ ಆರಾಧನೆಯ ಕ್ರಿಯೆಯನ್ನು ಒಳಗೊಂಡಿರುತ್ತದೆ. ಆರಾಧನೆಯು ಸಮರ್ಪಿತ ಆಧ್ಯಾತ್ಮಿಕ ಅಭ್ಯಾಸವನ್ನು ಸೂಚಿಸುತ್ತದೆ, ಪ್ರಾರ್ಥನೆಗಳು, ಆಚರಣೆಗಳು ಅಥವಾ ಧ್ಯಾನದ ಆರಾಧನೆಯ ಮೂಲಕ ದೈವಿಕತೆಯಿಂದ ನಿಕಟತೆ, ಆಶೀರ್ವಾದ ಮತ್ತು ಅನುಗ್ರಹವನ್ನು ಬಯಸುತ್ತದೆ.

ಪ್ರಾರ್ಥನಾಯ್ : ಇತರ ಪ್ರಾರ್ಥನೆಗಳಂತೆಯೇ, 'ಪ್ರಾರ್ಥನಾಯ್' - 'ಆಶೀರ್ವಾದ' ಮತ್ತು 'ಅನುಗ್ರಹ'ಕ್ಕಾಗಿ ದೈವಿಕ ಪ್ರಾರ್ಥನೆಯ ಒಂದು ರೂಪಕವಾಗಿದೆ; ಇದನ್ನು ಹಿಂದೂ ಪ್ರಾರ್ಥನೆ ಆಚರಣೆಗಳಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ.

ಭಜನ್ : ಈ ರೀತಿಯ ಪ್ರಾರ್ಥನೆಯು - ವಿಶೇಷವಾಗಿ ಹಿಂದೂ ಸಂಪ್ರದಾಯಗಳಲ್ಲಿ - ಭಕ್ತಿಗೀತೆಗಳನ್ನು ಹಾಡುವುದು, ದೇವರನ್ನು ಸ್ತುತಿಸುವುದು ಮತ್ತು ಹೃತ್ಪೂರ್ವಕ ಪ್ರೀತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವುದನ್ನು ಒಳಗೊಂಡಿರುತ್ತದೆ.

ಬಂದಗಿ : ಪರ್ಷಿಯನ್ ಭಾಷೆಯಿಂದ ಪ್ರೇರಿತ ಪದವು 'ಸಲ್ಲಿಕೆ' ಅಥವಾ 'ಆರಾಧನೆ' ಎಂದರ್ಥ; ಬಂದಗಿ- ದೇವರಿಗೆ ಮೀಸಲಾದ ದಾಸ್ಯವನ್ನು ಪ್ರತಿನಿಧಿಸುತ್ತದೆ ಮತ್ತು ಸ್ಥಿರವಾದ, ವಿನಮ್ರ ಪ್ರಾರ್ಥನೆಗಳ ಮೂಲಕ ನಿಕಟತೆಯನ್ನು ಬಯಸುತ್ತದೆ.

‘ದುಆ' - ಅನುಗ್ರಹ ಮತ್ತು ಕೃತಜ್ಞತೆಯ ಕಲ್ಪನೆಯನ್ನು ಸಾಕಾರಗೊಳಿಸುತ್ತದೆ; ಇದು ಆಧ್ಯಾತ್ಮಿಕತೆ ಮತ್ತು ಸಕಾರಾತ್ಮಕತೆಯನ್ನು ಗೌರವಿಸುವ ಕುಟುಂಬಗಳಿಂದ ಪಾಲಿಸಬೇಕಾದ ಹೆಸರನ್ನು ಮಾಡುತ್ತದೆ. 'ದುಆ' ಎಂಬ ಹೆಸರು: 'ಪ್ರಾರ್ಥನೆ' ಅಥವಾ 'ಬೇಡಿಕೆ' ಎಂದರ್ಥ ಸೂಚಿಸುತ್ತದೆ; ಸುಂದರವಾಗಿ ಅನುಗ್ರಹ, ಕೃತಜ್ಞತೆ, ಮತ್ತು ದೈವಿಕ ಸಂಪರ್ಕ ಎಂಬಿತ್ಯಾದಿ ಅರ್ಥಗಳನ್ನು ಒಳಗೊಂಡಿರುತ್ತದೆ.

ಆಧ್ಯಾತ್ಮಿಕತೆಯಲ್ಲಿ - ಇದು ನಮ್ರತೆಯ ಮನೋಭಾವವನ್ನು ಪ್ರತಿನಿಧಿಸುತ್ತದೆ ಮತ್ತು ಆಶೀರ್ವಾದಗಳಿಗೆ ತೆರೆದ ಹೃದಯವನ್ನು ಪ್ರತಿನಿಧಿಸುತ್ತದೆ; ಇದು ಜೀವನದ ಮೇಲೆ ಸಕಾರಾತ್ಮಕ ಮತ್ತು ಭಾವಪೂರ್ಣ ದೃಷ್ಟಿಕೋನವನ್ನು ಆದ್ಯತೆ ನೀಡುವ ಕುಟುಂಬಗಳಲ್ಲಿ ಪಾಲಿಸಬೇಕಾದ ಹೆಸರಾಗಿದೆ. ಮಗುವಿಗೆ 'ದುಆ' ಎಂದು ಹೆಸರಿಸುವ ಮೂಲಕ, ಕುಟುಂಬಗಳು ತಮ್ಮ ಪುಟ್ಟ ಮಗು ಆಳವಾದ ಉದ್ದೇಶ, ದಯೆ ಮತ್ತು ಸಹಾನುಭೂತಿಯೊಂದಿಗೆ ಬೆಳೆಯಬೇಕೆಂದು ಬಯಸುತ್ತಾರೆ. ಈ ಹೆಸರು ಹುಡುಕುವ ಮತ್ತು ನೀಡುವ ದೈವಿಕ ಸೌಂದರ್ಯವನ್ನು ಪ್ರತಿಬಿಂಬಿಸುತ್ತದೆ; ಪ್ರಾರ್ಥನೆ ಮತ್ತು ಕೃತಜ್ಞತೆಯ ಮೂಲಕ ಮಾನವರು ಮತ್ತು ದೈವಿಕ ನಡುವಿನ ಪ್ರಬಲ ಸಂಪರ್ಕವನ್ನು ನಮಗೆ ನೆನಪಿಸುತ್ತದೆ. ಮಗು ಅರೋಗ್ಯಕರವಾದ ಸುದೀರ್ಘ ಆಯಸ್ಸು ಬದುಕಲಿ ಮತ್ತು ಮಗುವಿನ ಭವಿಷ್ಯ ಉಜ್ವಲವಾಗಲಿ ಎಂದು ದುಆ ಮಾಡೋಣ!

-ಶಿಕ್ರಾನ್ ಶರ್ಫುದ್ದೀನ್ ಎಂ., ಮಂಗಳೂರು

ಚಿತ್ರ ಕೃಪೆ: ಇಂಟರ್ನೆಟ್ ತಾಣ