ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ?

ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ?

Comments

ಬರಹ

ಇದೊಂದು ವಿಷಯ ನನಗೇ ಚಿಕ್ಕಂದಿಂದ ತಲೇಲಿ ಕೊರೀತಾ ಇದೆ. ದುಡಿಯೋಕೆ ದೇಶ ಬಿಟ್ಟು ಹೊಗೋದು ತಪ್ಪಾ? ಸ್ಕೂಲಲ್ಲಿ ನಮ್ಮ ನಾಗರಾಜ ಮೇಷ್ಟ್ರು, ವಿದ್ಯಾವಂತರೇಲ್ಲಾ ದೇಶ ಬಿಟ್ಟು ಹೋಗ್ತಾ ಇದ್ದಾರೆ, ಇದರಿಂದ ನಮ್ಮ ದೇಶಕ್ಕೆ ತುಂಬಲಾರದ ನಷ್ಟ ಅಂತ ಹೇಳ್ತಾ ಇದ್ದದ್ದು ಇಂದಿಗೂ ನನ್ನ ತಲೇಲಿ ಆಗಾಗ ಬಂದು ಹೋಗ್ತಿರತ್ತೆ. ದೇಶ ಬಿಟ್ಟು ಬಂದಮೇಲೂ!!!
ಆದರೆ ಇದು ಎಷ್ಟು ಸತ್ಯ?? ನಾನು ಹೊರಗೆ ಬಂದಿದ್ದರಿಂದ ತಾನೇ, ನನ್ನ ಜಾಗದಲ್ಲಿ ಮತ್ತೊಬ್ಬನಿಗೆ ಕೆಲಸ ಸಿಕ್ಕಿರೋದು? (ನಾನು ಐಟಿ ಉದ್ಯಮದವನಲ್ಲ). ವಿದೇಶಗಳಲ್ಲಿರುವ ಎಲ್ಲ ಭಾರತೀಯರು ಭಾರತದಲ್ಲೆ ಇದ್ದಿದ್ದರೆ?? ಖಂಡಿತ ನಮ್ಮ ದೇಶ ಮುಂದುವರಿದ ರಾಷ್ಟ್ರಗಳ ಪಟ್ಟಿಯಲ್ಲಿರುತ್ತಿತ್ತು ಅಂತ ನನಗನ್ನಿಸೋಲ್ಲ.

ಸ್ನೇಹಿತರೇ.. ನೀವೇನಂತೀರಾ????

-ಚಿ ರಂ ಶಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet