ದೇವಶಯನೀ ಏಕಾದಶಿ ಮಹಿಮೆ

ದೇವಶಯನೀ ಏಕಾದಶಿ ಮಹಿಮೆ

ಕವನ

ಭಗವಾನ್ ವಿಷ್ಣುವಿನ ಯೋಗನಿದ್ರೆಯ ಆರಂಭವಿಂದು

ಕ್ಷೀರಸಾಗರದೆಡೆಗೆ ಸಾಗುವ ಸಮಯವಿಂದು

ಆಷಾಢ ಮಾಸದಲಿ ಆಚರಿಸುವ ಏಕಾದಶಿಯಿಂದು

ಶ್ರದ್ಧಾಭಕ್ತಿಯಲಿ ಗೈಯುವ ಆರಾಧನೆಯಿಂದು

 

ಪೌರಾಣಿಕ ದಂತಕಥೆಯಲಿ  ಅಡಗಿಹುದು ನೇಮ

ಮಾಂಧಾತನೆಂಬ ಜನಾನುರಾಗಿ ಅರಸನ ಆಡಳಿತ ಪರಿಣಾಮ

ಪ್ರಜೆಗಳನು ತನ್ನವರಂತೆ ಸಲಹುವ ಅರಸ

ಪರಸ್ಪರ ಪ್ರೀತಿ ಗೌರವ ಅಭಿಮಾನಗಳ ಶರಧಿಯಂತೆ

 

ಮೂರು ವರುಷ ಪರ್ಯಂತ ಮಳೆ ಸುರಿಯಲಿಲ್ಲ

ಬರಗಾಲ ಜೀವಜಂತುಗಳಿಗೆ ನೆಲೆಯಿಲ್ಲ ನೀರಿಲ್ಲ

ಅಂಗೀರಸ ಋಷಿವರೇಣ್ಯರ ಸಲಹೆಯಂತೆ

ಆಷಾಢ ದೇವಶಯನೀ ಏಕಾದಶಿ ವ್ರತಾಚರಣೆಯಂತೆ

 

ವರ್ಷಧಾರೆ ಹಗಲಿರುಳು ಸುರಿದು ತಂಪಾಗಲು

ಪ್ರಜಾಸಮೂಹ ಆನಂದದಿ ಕುಣಿದಾಡಿ ಮೆರೆಯಲು

ಖಗಮಿಗಗಳೆಲ್ಲ ಹರುಷದಿ ಓಡಾಡಲು

ಅರ‌ಸನಮನದಾನಂದ ಸಂತಸಕೆ ಪಾರವಿಲ್ಲದಿರಲು

 

ದೇವ ವಿಷ್ಣುವಿಗೆ ಪೂಜೆ ನೈ ವೇದ್ಯ ಅರ್ಪಣೆ

ಹೂವು ತುಳಸಿ ಧೂಪ ದೀಪ ಸಮರ್ಪಣೆ

ಸಂಕಷ್ಟಗಳು ದೂರವಾಗಿ ಸಂತಸ ನೀಡೆಂಬ ಪ್ರಾರ್ಥನೆ

ಸಕಲ ಪಾಪಗಳಿಂದ ಮುಕ್ತಿ ಕೊಡೆಂಬ ನಿವೇದನೆ

 

ಹರಿಶಯನಕೆ ಜಾರುವ ದಿನ ವಿಶೇಷ

ಹರಿಶಯನೀ ಏಕಾದಶಿಯೆಂಬ ಅನ್ವರ್ಥದಿ ಪ್ರಸಿದ್ಧಿ

ಲಕ್ಷ್ಮೀದೇವಿಯ ಸೇವೆಯೂ ನಡೆಯುವ ಪ್ರತೀತಿ 

ಸಾಯುಜ್ಯ ಪದವಿ  ದೊರಕುವ ನಂಬಿಕೆ

 

ಅವರವರ ಸಾಮರ್ಥ್ಯ ಉಪವಾಸ ಅರ್ಚನೆ ಗೈಯೋಣ

ಹರಿಸೇವೆ ಮಾಡಿ ಪುನೀತರಾಗೋಣ

ಸಂಪ್ರದಾಯ ಸಂಸ್ಕಾರದ ಬೇರ ಗಟ್ಟಿಗೊಳಿಸೋಣ

ಮಕ್ಕಳಿಗೆ ಪೂಜೆ ಪುನಸ್ಕಾರದರಿವ ಕಲಿಸೋಣ

 

-ರತ್ನಾ ಕೆ ಭಟ್ ತಲಂಜೇರಿ

ಚಿತ್ರ ಕೃಪೆ: ಇಂಟರ್ನೆಟ್ ತಾಣ

ಚಿತ್ರ್