ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ?

ದೊಡ್ಡವರು ಮಾಡಿದ್ದೆಲ್ಲಾ, ಎಷ್ಟು ಸರಿ ? ಅದನ್ನು ನಾವು ಏಕೆ ವೈಭವೀಕರಿಸಬೇಕು ?

Comments

ಬರಹ

ಹೇಗಿದ್ದರೂ, ಈ ಶಿರ್ಷಕೆಯ ಅಡಿಯಲ್ಲಿ ಏಕೆ 'ಚರ್ಚೆ' ಶುರು ಮಾಡಬಾರದು ಎನ್ನಿಸಿತು.

ನಿನ್ನೆ ನಾನು 'ತ್ರಿವಿಕ್ರಮ ಹೆಜ್ಜೆಗಳು 'ಎಂಬ ಅತ್ಯಂತ ಸೊಗಸಾದ ಪುಸ್ತಕ ಓದುತ್ತಿದ್ದೆ. ಅದರಲ್ಲಿ ಮೊದಲನೆಯ ಲೇಖನವೇ, ನಮ್ಮ ಪೂಜ್ಯ,ಶ್ರೀ.ಡಾ.ಸರ್.ಎಂ.ವಿಶ್ವೇಶ್ವರಯ್ಯನವರದು !
ಅವರು ಮೈಸೂರು ರಾಜ್ಯಕ್ಕೆ ಕೊಟ್ಟ ಕೊಡುಗೆಗಳನ್ನು ಓದಿ ಆನಂದವಾಯಿತು. ವಿಶ್ವೇಶ್ವರಯ್ಯನವರು ಅಂದು ಇಲ್ಲದಿದ್ದರೆ, ನಮ್ಮ ರಾಜ್ಯದ ಗತಿ ಏನಾಗುತ್ತಿತ್ತು ? ಎಂದು ಮನಸ್ಸು ಹೊಯ್ದಾಡುತ್ತಿತ್ತು. ಅವರ ದೂರದೃಷ್ಟಿ, ಕೆಲಸದಲ್ಲಿನ ಅಚ್ಚುಕಟ್ಟು, ಶಿಸ್ತು, ಇತ್ಯಾದಿಗಳು ನನ್ನ್ನನ್ನು 'ಮೈಜುಂ' ಎನ್ನಿಸುವಷ್ಟು ಮೋಡಿ ಮಾಡಿತ್ತು !

ಅದರೆ, ಮೊದಲ ಪುಟದ ಸಂಗತಿಯನ್ನು ನೋಡಿ ಸ್ವಲ್ಪ ಬೇಸರವೇ ಆಯಿತು.

ಅದರ ವಿವರ ಸ್ವಲ್ಪ ನೋಡಿ ಅದು ಹೀಗಿದೆ :

ಸುಮಾರು ೩೫ ವರ್ಷಗಳ ಹಿಂದೆ ಎಲ್ಲರೂ ಆಡಿಕೊಳ್ಳುತ್ತಿದ್ದ ಪ್ರಸಂಗ. ಸರ್ವೊದಯ ನಾಯಕರೂ ಭೂದಾನ ಚಳುವಳಿಯ ರುವಾರಿಗಳು ಆದ, 'ವಿನೋದಾ ಭಾವೆ'ಯವರು ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದರು. ಆಗ ಮೊಕ್ಷಗುಂಡಂ ವಿಶ್ವೇಶ್ವರಯ್ಯನವರೂ ಅದೇ ಊರಿನಲ್ಲಿದ್ದರು.ವಿನೊಬಾರಿಗೆ 'ಅಯ್ಯ'ನವರನ್ನು ಭೇಟಿ ಮಾಡುವ ಹಂಬಲ. ಅವರ ನಿವಾಸಕ್ಕೆ ಹೊರಟೇಬಿಟ್ಟರು. ಕಾಲ್ನಡಿಗೆಯಲ್ಲೇ ಊರೂರು ಸುತ್ತುವ ಆತನಿಗೆ, ಇದೊಂದು ಲೆಖ್ಖವೇ !

ಅಯ್ಯನವರ ಕಾರ್ಯದರ್ಶಿ, ಅವರು ಬಂದ ವಿಷಯ ತಿಳಿಸಿದ. " ಮುಂಚೆಯೇ ಏರ್ಪಾಟಾಗಿರದ ಈ ಭೇಟಿ ಸಾಧ್ಯವೇ ಇಲ್ಲ " ಅಯ್ಯನವರು 'ಖಡಾಖಂಡಿತವಾಗಿ' ಹೇಳಿಯೇ ಬಿಟ್ಟರು. ಅವರಿಗೆ ಸೆಕ್ರೆಟರಿ ಮನವೊಲಿಸಲು ಹೇಳಿದ ಮಾತುಗಳು ಯಾವ ಕೆಲಸಕ್ಕೂ ಬರಲಿಲ್ಲ. 'ಋಷಿ' ಸಮಾನರಾದ ಭಾವೆಯವರು, "ಅವರ ಬೇಟಿಮಾಡುವ ಅದೃಷ್ಟ ನನಗಿಲ್ಲ; ಆದರೆ ಅವರು ತುಳಿದ ಮೆಟ್ಟಿಲಮೇಲೆ ಕುಳಿತು, ಅದರ ಸಂಪರ್ಕಕ್ಕೆ ಬಂದಾದರೂ ಜೀವನ ಸಾರ್ಥಕಮಾಡಿಕೊಳ್ಳುತ್ತೇನೆ." ಎಂದು ಅವರ ಮನೆಯ ಮೆಟ್ಟಿಲಿನಮೇಲೆ ಕುಳಿತು ಸ್ವಲ್ಪ ಹೊತ್ತಿನ ನಂತರ, ಹೊರಟೇ ಹೋದರು. ಒಳಗಡೆ ಅಯ್ಯನವರು ನಿರ್ಲಿಪ್ತರಾಗಿದ್ದರು !

ಮೇಲಿನ ಪ್ರಸಂಗ, ನಿಜವೊ- ಸುಳ್ಳೊ ಹೇಳಲಾರೆ. ಆದರೆ ಅಯ್ಯನವರ ಶಿಸ್ತಿನ ಬಗ್ಗೆ ಒತ್ತಿ ಹೇಳುವುದಕ್ಕೆ ಇಂತಹ ಹತ್ತಾರು ಕಥೆಗಳು ಹುಟ್ಟಿಕೊಂಡಿದ್ದವು......ಹೀಗೆ ಲೇಖನ ಸಾಗುತ್ತದೆ. ಇದನ್ನು ಬರೆದವರು ಪ್ರೊ.ಕೆ.ಆರ್. ಮೊಹನ್.

ಆದರೆ, ಅಪ್ಪಿ ತಪ್ಪಿ "ಇಂತಹ ದೊಡ್ಡ ವ್ಯಕ್ತಿ ಹೀಗೇಕೆ ಮಾಡಿದರೊ ಗೊತ್ತಾಗಲಿಲ್ಲ". ಎಂಬ ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ಅವರು ಕೊಡಬಹುದಾಗಿತ್ತು. ಇದು ನಮಗೆ ಸಿಕ್ಕಿರುವ ವಿಷಯ.
ಇದರ ಬಗ್ಗೆ ನಮಗೆ ಸಾಕಾದಷ್ಟು 'ಗ್ರಾಸ' ಸಿಕ್ಕಂತಾಗಿದೆ. ನಿಮ್ಮ ಅನಿಸಿಕೆ ಮತ್ತು ಇಂಥ ಹಲವಾರು ಸಂಗತಿಗಳು ಹೊರಗೆ ಬರಲಿ. ದಯಮಾಡಿ ಪುರಾಣದ ಕಥೆಗಳು ಬೇಡ.

ನನ್ನ ಒಂದು ವೈಯಕ್ತಿಕ ಅನುಭವ :

ನನ್ನ ಒಬ್ಬ ಹಿರಿಯ ಸ್ನೇಹಿತರು, ಹೇಳಿದ ಸಂಗತಿ. ಅಂದಿನ ದಿನಗಳಲ್ಲಿ ಅವರು 'ಈಸ್ಟ್ರನ್ ಎಕಾನೊಮಿಸ್ಟ್' ಎಂಬ ಪತ್ರಿಕೆಯ ಸಂಪಾದಕರಾಗಿದ್ದರು. ಅವರು ಲಂಡನ್ ಗೆ ಹೊಗಬೇಕಾದ ಸಂಧರ್ಬ ಬಂತು. ಅವರಿಗೆ 'ಲಾರ್ಡ್ ಎಟ್ಲಿ'ಯವರನ್ನು ನೋಡುವ ಆಸೆ. ಅವರ ಜೊತೆಗೆ ಸಮಾಲೋಚನೆ ಇತ್ಯಾದಿ... ಬೊಂಬಯಿನಲ್ಲಿ ಅವರು ಸಾಕಷ್ಟು ಯೂರೋಪಿಯನ್ನರ ಸಂಪರ್ಕದಲ್ಲಿದ್ದರು. ಅವರು ಹೋಗಿ ಅವರ 'ಛೇಂಬರ್' ನ ಪೇದೆಗೆ ಹೇಳಿದರಂತೆ, "ನಾನು ಸರ್.ಏಟ್ಲಿ ಯವರನ್ನು ಕಾಣಬೇಕು"; ಅವನು ಸರಿ. ನೀವು 'ಪರವಾನಗಿ' ಪಡೆದಿದ್ದೀರಾ, ಅಪಾಯಿಂಟ್ ಮೆಂಟ್ ಇತ್ತಾ ? ನನ್ನ ಗೆಳೆಯರು ತಮ್ಮ 'ಲಾಗ್ ಬುಕ್ಕಿ'ನಿಂದ ಒಂದು ಚೀಟಿ ಹರಿದು, ಇದನ್ನು ತೋರಿಸು, ಅವರು ಒಪ್ಪಿದರೆ ಸರಿ. ಎಂದರಂತೆ. ಪೇದೆ, ಅವರನ್ನೇ ಕೆಕ್ಕರಿಸಿ ನೋಡಿ 'ಸರಿ'. ಎಂದು ಹೇಳಿ ಒಳಗೆ ಹೋದ. ೨ ನಿಮಿಷದಲ್ಲಿ ಹೊರಗೆ ಬಂದವನೇ, "ಸರ್, ಕೇವಲ ೧೨ ನಿಮಿಷ ಕೊಡುತ್ತಾರಂತೆ, ನಿಮಗೆ ಒಪ್ಪಿಗೆ ಯಾದರೆ ನೋಡಿ" ಎಂದನಂತೆ. ಸರಿ, ಒಳಗೆ ಹೋದವರು, ಅರ್ಧಗಂಟೆಯ ನಂತರ, ಬೀಗುತ್ತ ಹೊರಗೆ ಬಂದರಂತೆ. ಇದು ನಮಗೆ ತಿಳಿಸುವ ಕಿವಿ ಮಾತೇನು ? ಎಲ್ಲ, ನಮಗೆ ಅನುಕೂಲವಾಗಲೆಂದು ಕೆಲವೊಂದು ನಿಯಮಗಳನ್ನು ನಾವು ಹಾಕಿಕೊಂಡಿದ್ದೇವಿ. ಅದನ್ನು ಸಮಯಕ್ಕನುಗುಣವಾಗಿ ಅರ್ಥೈಸಿಕೊಳ್ಳುವ ಜಾಣ್ಮೆ ಬೇಕು ! !

ಬಹುಶಃ ಇದರಲ್ಲಿ ನನ್ನ 'ಆರಾಧ್ಯದೇವತೆ' 'ಮೈಸೂರಿನ ಕಳಸ', 'ಶ್ರೇಷ್ಟ ಸಂಘಟಕ', 'ಇಂಜಿನಿಯರ್' ಇತ್ಯಾದಿ ಇತ್ಯಾದಿ ಗಳು ನನ್ನ ಮನಸ್ಸಿನಿಂದ ದೂರ ಸಾಗುತ್ತಿವೆಯೇನೊ ಅನ್ನಿಸಿತು.

ಅಂತಹ ಭಾವೆಯವರು, ಮತ್ತೆ ನಮಗೆ ಸಿಕ್ಕುತ್ತಾರೆಯೇ ? ಮನೆ ಬಾಗಿಲಿಗೆ ಬಂದ ಅವರನ್ನು
(ಅತಿಥಿಯನ್ನು) ಕರೆದು ಒಳಗೆ ಕೂಡಿಸುವುದು, ನಮ್ಮ ಹಿಂದೂ ಸಂಪ್ರದಾಯ ! ಆದರೆ ಅಯ್ಯನವರು "ಬ್ರಿಟಿಷ್ ಎಟಿಕೇಟ್ ಗಳ ಪ್ರಭಾವಕ್ಕೆ" ಬಹಳವಾಗಿ ಒಳಗಾಗಿದ್ದರು !

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet