ದ್ವಿರುಕ್ತಿ ಕವನ - ಜಲಧಾರೆ
ಕವನ
ಪಟ ಪಟ ಹನಿಗಳು ಬೀಳುತಲಿ
ಜುಳುಜುಳು ನದಿಯು ಹರಿಯುತಲಿ
ಕಲ ಕಲ ನಿನಾದವ ಗೈಯುತಲಿ
ಜಲ ಜಲಧಾರೆಯು ಹರಿದಿದೆನೋಡಿ
ಫಳ ಫಳ ಹೊಳೆವ ಮುತ್ತುಗಳಂದ
ಥಳ ಥಳ ಮಿನುಗುವ ಹನಿಗಳ ಚಂದ
ಕಿಲ ಕಿಲ ಎನ್ನುವ ಸಂಗೀತದಂದ
ಕುಲು ಕುಲು ಶಬ್ಧವು ಕರ್ಣಾನಂದ
ನಳ ನಳಿಸುವ ವನಸಿರಿ ಸೊಬಗು
ನೆಲೆ ನೆಲೆಯಾಗುವ ಬಳ್ಳಿಯಬೆರಗು
ತಿರು ತಿರುಗಿ ಬರುವ ತಂಗಾಳಿಯು
ಸುಳಿ ಸುಳಿಯುತ ಲತೆಗಳಿಗಾನಂದ
ಬಳ ಬಳ ಸುರಿಯಲು ವರ್ಷಧಾರೆ
ಕ್ಷಣ ಕ್ಷಣ ತುಂಬಲು ತುಂಗೆಗಂಗೆ
ತರ ತರ ಬೆಳೆಗಳ ನಾಟ್ಯದ ಬಗೆ
ಬರ ಬರ ಬರುವ ಮಿಂಚಿನ ನಗೆ
ಪರಿ ಪರಿ ಸೌರಭ ದಳಗಳು ಬಿರಿದು
ನಿಲ್ಲುನಿಲ್ಲು ನಿಧಾನದಿ ತೆರೆದು
ನೊರೆ ನೊರೆ ಅಲೆಯಲಿ ಬೆಳ್ಳಕ್ಕಿಸಾಲು
ಬಿಳಿ ಬಿಳಿ ತೆರೆಗಳು ಮನ ಮೋಹಿಸಲು
-ರತ್ನಾ ಭಟ್ ತಲಂಜೇರಿ
ಚಿತ್ರ್