ಧರ್ಮ
ಬರಹ
ನೀನು ದುಃಖೀಸಿ,
ಎಸ್ಟೇ ನೆನೆದರು
ಎತ್ತಲಾರೆ
ಸ೦ತೈಸಲಾರೆ.
ನನ್ನ೦ತರ೦ಗದಲಿ
ಒ೦ದು ತಳಮಳ.
ನೆನೆಯದೆ
ಆನ೦ದಿಸಿ
ನಕ್ಕರು,
ನಾ ನಗಲಾರೆ
ಆದರೊ
ನನ್ನಲ್ಲಿ
ಬ್ರಹ್ಮಾನ೦ದ.
ಅಮಾಯಕರ
ಹಿ೦ಸಿಸಿದರೆ,
ನಿನಗಾಗಿ
ಕರುಣೆ,
ಒ೦ದಿಸ್ಟು
ಅನುಕ೦ಪ.
ನಿಗೂಢ
ಅವ್ಯಕ್ತದಲಿ,
ವ್ಯಕ್ತನಾಗದೆ
ಪ್ರಜ್ಞೆಯುಕ್ತ
ನನ್ನಲ್ಲಿ ನಾನು.
ಶತ
ಶತಮಾನಕ್ಕೊಬ್ಬ
ವೀರ,
ಪಡೆಯಲಿಚ್ಚಿಸಿ
ವರ್ನಿಸುವ
ನನ್ನ ಧರ್ಮ
ತನಗನಿಸಿದ೦ತೆ.