ನಕ್ಕು ಬಿಡಿ................5
ಸರ್ದಾರ್ಜಿಗಳು ಯಾಕೆ ದಡ್ಡರು ?
ಸರ್ದಾರ್ಜಿಗೆ ಒಂದು ಪ್ರಶ್ನೆಗೆ ಉತ್ತರ ಬೇಕಾಗಿತ್ತು. ಹತ್ತಿರದ ಬೀಡಿ ಅಂಗಡಿಯವನಲ್ಲಿ ವಿಚಾರಿಸಿದ.
" ಎಲ್ಲರು ಸರ್ದಾರ್ಜಿನ ದಡ್ಡರು ಅಂತಾರೆ, ಯಾಕೆ?"
" ಹಾಗೇನಿಲ್ಲ, ನೀವು ಕೇಳಿದ ಪ್ರಶ್ನೆಗೆ ಸರಿ ಉತ್ತರ ಕೊಟ್ಟರೆ ಯಾರು ನಿಮ್ಮನ್ನ ದಡ್ಡರು ಅನ್ನೋಲ್ಲ" ಎಂದ ಅಂಗಡಿಯವ.
" ಹಾಗಾದರೆ ಪ್ರಶ್ನೆ ಕೇಳು ಉತ್ತರ ಕೊಡ್ತೀನಿ." ಎಂದ ಸರ್ದಾರ್ಜಿ.
" ತುಂಬಾ ಸಿಂಪಲ್ಲು. ನಮ್ಮ ತಂದೆಗೆ ಇಬ್ಬರು ಮಕ್ಕಳು, ಒಬ್ಬ ಡೆಲ್ಲಿಲಿ ಇದಾನೆ. ಹಾಗಾದರೆ ಇನ್ನೊಬ್ಬ ಯಾರು?" ಎಂದ.
ತುಂಬಾ ಹೊತ್ತು ಯೋಚಿಸಿ "ಗೊತ್ತಾಗಲಿಲ್ಲ " ಎಂದ.
" ನೋಡು ಅದಕ್ಕೆ ನಿಮ್ಮನ್ನ ದಡ್ಡರು ಅನ್ನೋದು, ಒಬ್ಬ ಡೆಲ್ಲಿ ನಲ್ಲಿ ಇದ್ದರೆ ಮತ್ತೊಬ್ಬ ನಾನೇ ಅಲ್ಲವೇ? " ಎಂದು ನಕ್ಕ.
ಸರ್ದಾರ್ಜಿಗೆ ಬಹಳ ಬೇಜಾರಾಯಿತು. ಪೆಚ್ಚುಮೋರೆ ಹಾಕಿ ಹೋರಟ. ದಾರಿಯಲ್ಲಿ ಮತ್ತೊಬ್ಬ ಸರ್ದಾಜಿ ಸಿಕ್ಕ. ತಕ್ಷಣ ಮೊದಲನೇ ಸರ್ದಾರ್ಜಿಗೆ ಖುಷಿಯಾಯಿತು. ಅವನನ್ನ ನಿಲ್ಲಿಸಿ " ನಾನೊಂದು ಸಿಂಪಲ್ ಪ್ರಶ್ನೆ ಕೇಳುತ್ತಿನಿ, ಉತ್ತರ ಹೇಳುತ್ತಿಯಾ ? " ಎಂದ. "ಆಗಲಿ " ಎಂದು ತಲೆ ಆಡಿಸಿದ
"ತುಂಬಾ ಸಿಂಪಲ್ಲು. ನಮ್ಮ ತಂದೆಗೆ ಇಬ್ಬರು ಮಕ್ಕಳು, ಒಬ್ಬ ಡೆಲ್ಲಿಲಿ ಇದಾನೆ. ಹಾಗಾದರೆ ಇನ್ನೊಬ್ಬ ಯಾರು?" ಎಂದ
ಅವನು ತುಂಬಾ ಹೊತ್ತು ಯೋಚಿಸಿ " ಗೊತ್ತಾಗಲಿಲ್ಲ " ಎಂದು ತಲೆ ಆಡಿಸಿದ.
" ಇಷ್ಟು ಗೊತ್ತಾಗಲಿಲ್ಲವ! ಅದಕ್ಕೆ ಸರದಾರ್ಜಿಗಳನ್ನ ದಡ್ಡರು ಅನ್ನೋದು! ಆ ಇನ್ನೊಬ್ಬ ಯಾರು ಗೊತ್ತ ? ಅದೇ ಬೀಡಿ ಅಂಗಡಿಯವನು." ಎಂದು ಬೀಗಿದ.
Comments
ಉ: ನಕ್ಕು ಬಿಡಿ................5
In reply to ಉ: ನಕ್ಕು ಬಿಡಿ................5 by kavinagaraj
ಉ: ನಕ್ಕು ಬಿಡಿ................5
ಉ: ನಕ್ಕು ಬಿಡಿ................5
In reply to ಉ: ನಕ್ಕು ಬಿಡಿ................5 by gopaljsr
ಉ: ನಕ್ಕು ಬಿಡಿ................5